ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ (PSI Recruitment Scam) ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಶ್ವತ್ಥ್ ನಾರಾಯಣ (Ashwath Narayan) ಭಾಗಿಯಾದ ಬಗ್ಗೆ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದು ಬೆಂಗಳೂರಿನಲ್ಲಿ (Bengaluru) ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ನವರು ಕೇಳುವಂತೆ ಹಗರಣ ಬಯಲಿಗೆಳೆದು ಶಿಕ್ಷೆ ಕೊಡಿಸಿದ್ದೇ ತಪ್ಪು ಅನ್ನೋದಾದರೆ ರಾಜೀನಾಮೆ ಕೊಡೋಣ. ಪಾರದರ್ಶಕವಾಗಿ ತನಿಖೆಯಾಗಿ ಹಲವರ ಬಂಧನವಾಗಿದೆ. ನಿನ್ನೆಯಷ್ಟೇ ಎಡಿಜಿಪಿ ಅಮೃತ್ ಪಾಲ್ ಅರೆಸ್ಟ್ ಆಗಿದೆ. ಪ್ರಕರಣದಲ್ಲಿ 20ಕ್ಕಿಂತ ಹೆಚ್ಚು ಪೊಲೀಸರ ಬಂಧನ ಆಗಿದೆ ಎಂದು ತಿಳಿಸಿದರು.
ಇದನ್ನು ಓದಿ: ಶಾಸಕ ಜಮೀರ್ ಅಹ್ಮದ್ ನಿವಾಸದ ಮುಂದೆ ಬೆಂಬಲಿಗರಿಂದ ಹೈಡ್ರಾಮ! ಎಸಿಬಿ ದಾಳಿಗೆ ನಿಖರ ಕಾರಣ ಇಲ್ಲಿದೆ
ಜ್ಯುಡಿಸಿಯಲ್ ತನಿಖೆ ಮಾಡುವಂತೆ ಕಾಂಗ್ರೆಸ್ ಕೇಳುತ್ತಿದೆ. ಪಾರದರ್ಶಕವಾದ ತನಿಖೆ ಸಹಿಸುವುದಕ್ಕೆ ಸಾಧ್ಯವಾಗಲಿಲ್ಲವಾ? ಕಾಂಗ್ರೆಸ್ನ ಆರ್.ಡಿ.ಪಾಟೀಲ್ ಕೂಡ ಸಿಕ್ಕಿಹಾಕಿಕೊಂಡಿದ್ದಾರೆ. ಯಾವ ಕಾರಣಕ್ಕೆ ನಾನು ರಾಜೀನಾಮೆ ಕೊಡಬೇಕು? ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: Chandrashekhar Guruji Murder: ಚಂದ್ರಶೇಖರ್ ಗುರೂಜಿ ಹಂತಕರು ಸಿಕ್ಕಿಬಿದ್ದಿದ್ದು ಹೇಗೆ ಎಲ್ಲಿ ಗೊತ್ತಾ?
2013-2014ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು. IPS ಅಧಿಕಾರಿ ಹಗರಣದಲ್ಲಿ ಭಾಗಿಯಾಗಿದ್ದ ಮಾಹಿತಿ ಸಿಕ್ಕಿತ್ತು. ಆಗ ಯಾಕೆ ಕಾಂಗ್ರೆಸ್ ಸರ್ಕಾರ ಅರೆಸ್ಟ್ ಮಾಡಲಿಲ್ಲ ? ಪ್ರಶ್ನೆಪತ್ರಿಕೆ ಸೋರಿಕೆ ಕೇಸ್ನಲ್ಲಿ ಯಾರು ರಾಜೀನಾಮೆ ಕೊಟ್ಟರು? ಕಾಂಗ್ರೆಸ್ನವರ ಕಾಲದಲ್ಲಿ ಹಗರಣಗಳ ಸರಮಾಲೆ ನಡೆದಿದೆ. ಇವರು ಮಾಡಿದ ಕೆಲಸವೇನು ನಾವು ಮಾಡಿದ ಕೆಲಸವೇನು? ಸಿಐಡಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಆರಗ ಜ್ಞಾನೇಂದ್ರ
Published On - 5:52 pm, Tue, 5 July 22