ರಾಜಣ್ಣರನ್ನು ನಿಂದಿಸಿದರೇ ಅಹಿಂದ ಸಮಾಜ ಸುಮ್ಮನೇ ಇರಲ್ಲ, ಇದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತೆ: ಅಹಿಂದ ಮುಖಂಡನ ಖಡಕ್ ವಾರ್ನಿಂಗ್

| Updated By: ವಿವೇಕ ಬಿರಾದಾರ

Updated on: Jul 03, 2022 | 3:59 PM

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಬಗ್ಗೆ ರಾಜಣ್ಣ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಮಾಜಿ ಶಾಸಕ ರಾಜಣ್ಣ ಪರ 30 ಕ್ಕು ಹೆಚ್ಚು  ಅಹಿಂದ ಮುಖಂಡರು ತುಮಕೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಕೆ.ಎನ್.ರಾಜಣ್ಣಗೆ ಹೆಚ್​.ಡಿ.ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ದೇವೇಗೌಡರ ಬಗ್ಗೆ ಉದ್ದೇಶಪೂರ್ವಕವಾಗಿ ಹೇಳಿಕೆ ಕೊಟ್ಟಿಲ್ಲ ಎಂದು ಅಹಿಂದ ಮುಖಂಡರು ಹೇಳಿದ್ದಾರೆ.

ರಾಜಣ್ಣರನ್ನು ನಿಂದಿಸಿದರೇ ಅಹಿಂದ ಸಮಾಜ ಸುಮ್ಮನೇ ಇರಲ್ಲ, ಇದಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತೆ: ಅಹಿಂದ ಮುಖಂಡನ ಖಡಕ್ ವಾರ್ನಿಂಗ್
ಅಹಿಂದ ಸಮಾಜ ಸುದ್ದಿಗೋಷ್ಠಿ
Follow us on

ತಮಕೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Devegowda) ಅವರ ಬಗ್ಗೆ ರಾಜಣ್ಣ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಮಾಜಿ ಶಾಸಕ ರಾಜಣ್ಣ (K N Rajanna) ಪರ 30ಕ್ಕೂ ಹೆಚ್ಚು ಅಹಿಂದ ಮುಖಂಡರು ತುಮಕೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಕೆ.ಎನ್.ರಾಜಣ್ಣಗೆ ಹೆಚ್​.ಡಿ.ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ದೇವೇಗೌಡರ ಬಗ್ಗೆ ಉದ್ದೇಶಪೂರ್ವಕವಾಗಿ ಹೇಳಿಕೆ ಕೊಟ್ಟಿಲ್ಲ ಎಂದು ಅಹಿಂದ ಮುಖಂಡರು ಹೇಳಿದ್ದಾರೆ. ಬಾಯಿತಪ್ಪಿನಿಂದ ಆ ಮಾತು ಬಂದಿದೆ. ಉದ್ದೇಶಪೂರ್ವಕವಾಗಿ ರಾಜಣ್ಣ ಆ ಮಾತು ಆಡಿಲ್ಲ. ದೇವೇಗೌಡರು ಕೂಡ ಯಡಿಯೂರಪ್ಪರನ್ನ (Yadiyurappa) ಬಾಸ್ಟರ್ಡ್ ಅಂದಿದ್ದರು. ಕುಮಾರಸ್ವಾಮಿ (HD Kumaraswamy) ಕೂಡ ಸಂಸದೆ ಹೇಮಲತಾಗೆ (MP Hemalatha) ಅವಹೇಳನ ಮಾಡಿದ್ದರು. ಆಗ ಆಗದಂತಹ ಪ್ರತಿಭಟನೆಗಳು ಈಗ ಆಗುತ್ತಿದೆ. ಇದರ ಹಿಂದೆ ಅಹಿಂದ ಮುಖಂಡನ ತೆಜೋವದೆಯ ಪಿತೂರಿ ಇದೆ ಎಂದರು.

ಇದನ್ನು ಓದಿ: ಸಮಾಜವಾದಿ ಪಕ್ಷದ ಎಲ್ಲಾ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ ಸಂಸ್ಥೆಗಳನ್ನು ವಿಸರ್ಜಿಸಿದ ಅಖಿಲೇಶ್ ಯಾದವ್

ರಾಜಣ್ಣ ಹೀಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಹೋರಾಟ ಮಾಡೊದು, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕುವುದು ಸರಿಯಲ್ಲ. ತಳಮಟ್ಟದಲ್ಲಿ ನೂರಾರು ಸಮಾಜಗಳಿವೆ. ತಳಮಟ್ಟದ ಸಮಾಜವನ್ನ ರಾಜಣ್ಣನವರು ಕಾಪಾಡುತ್ತಿದ್ದಾರೆ. 40 ವರ್ಷದಿಂದ ಕೈ ಹಿಡಿದಿದ್ದಾರೆ. ಅವರ ವಿಚಾರಕ್ಕೆ ಧಕ್ಕೆ ಬಂದರೆ ಹೋರಾಟ ಮಾಡಲಾಗುತ್ತದೆ.ಯಾವುದೇ ವ್ಯಕ್ತಿ ಸಮಾಜ ವಿರುದ್ಧ ನಾವು ಹೋಗಲ್ಲ. ರಾಜಣ್ಣರನ್ನ ನಿಂದಿಸಿದರೇ ನಾವು ಸುಮ್ಮನೇ ಇರಲ್ಲ. ತಳಮಟ್ಟದವರು ರಾಜಕೀಯದಲ್ಲಿ ಇರಬಾರದಾ ? ರಾಜಣ್ಣರ ಮೈ ಮೇಲೆ ಬೀಳುತ್ತೇವೆ  ಎನ್ನೋದು ಸೋಲಿಸುತ್ತೇವೆ ಅನ್ನೋದು ತಪ್ಪು.  ರಾಜಣ್ಣ ಎಲ್ಲಾ ಸಮಾಜದ ಪರವಾಗಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಅಹಿಂದ ಮುಖಂಡ ಧನ್ಯಕುಮಾರ್ ಹೇಳಿದ್ದಾರೆ.

ರಾಜಣ್ಣ ಮೊನ್ನೆ ಕಾರ್ಯಕ್ರಮವೊಂದರಲ್ಲಿ ಕೊನೆ ಚುನಾವಣೆ ಅಂತಾ ಹೇಳಿದ್ದಾರೆ. ವಯೋಸಹಜವಾಗಿ ಹೇಳಿದ್ದಾಗ, ಕಾರ್ಯಕರ್ತವೊಬ್ಬ ದೇವೇಗೌಡರ ಬಗ್ಗೆ ಹೇಳಿರುವುದು ಸತ್ಯ. ರಾಜಣ್ಣ ಮಾತನಾಡಿದ್ದಕೆ ಈಗಾಗಲೇ ರಾಜಣ್ಣ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಮುಂದುವರೆದರೇ ಅಹಿಂದ ಸಮಾಜ ಸುಮ್ಮನೇ ಇರಲ್ಲ ಉತ್ತರ ಕೊಡಬೇಕಾಗುತ್ತೆ.

ಇದನ್ನು ಓದಿ: ರಾಹುಲ್ ಗಾಂಧಿ ಬಗ್ಗೆ ತಪ್ಪಾದ ಸುದ್ದಿಯ ವಿಡಿಯೊ ಶೇರ್ ಮಾಡಿರುವ ಬಿಜೆಪಿ ಕ್ಷಮೆ ಕೇಳಬೇಕು: ಕಾಂಗ್ರೆಸ್ ಒತ್ತಾಯ

ಚುನಾವಣೆ ಗಮನದಲ್ಲಿಟ್ಟುಕೊಂಡು ಗದಪ್ರಹಾರ ಮಾಡುವುದನ್ನು ನಿಲ್ಲಿಸಬೇಕು. ರಾಜಣ್ಣ ತೇಜೋವದೆ ಮಾಡೋದನ್ನ ಅಹಿಂದ ಸಂಘಟನೆ ಖಂಡಿಸುತ್ತದೆ. ಜೆಡಿಎಸ್ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆ ರಾಜಣ್ಣ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಲಾಗಿತ್ತು ಎಂದು ಅಹಿಂದ ಮುಖಂಡ ಅಂಜಿನಪ್ಪ ಹೇಳಿದರು.

ಪ್ರಜ್ವಲ್ ರೇವಣ್ಣ ಈ ಹಿಂದೆಯೇ ಜೆಡಿಎಸ್ ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇದೆ ಅಂತಾ ಹೇಳಿದ್ದಿರಾ. ನಿಮ್ಮಲ್ಲಿ ಭ್ರಷ್ಟ ಪಕ್ಷ ಇಟ್ಟುಕೊಂಡು ರಾಜಣ್ಣ ಮೇಲೆ ಮಾತನಾಡಬೇಡಿ. ದಯವಿಟ್ಟು ನಿಮ್ಮ ಮಾತನ್ನ ವಾಪಸ್ ತೆಗೆದುಕೊಳ್ಳಿ. ಜೊತೆಗೆ 2004 ರಲ್ಲಿ ರಾಜಣ್ಣ ಜೆಡಿಎಸ್ ನಲ್ಲಿ ಇದ್ದಿದ್ದಕ್ಕೆ ಜಿಲ್ಲೆಯಲ್ಲಿ 9 ಸ್ಥಾನ ಗೆದ್ದಿದ್ದವು ಪ್ರಜ್ವಲ್ ರೇವಣ್ಣರಿಗೆ ಅಹಿಂದ ಮುಖಂಡರು ಟಾಂಗ್‌ ಕೊಟ್ಟರು.