ರಾಹುಲ್ ಗಾಂಧಿ ಬಗ್ಗೆ ತಪ್ಪಾದ ಸುದ್ದಿಯ ವಿಡಿಯೊ ಶೇರ್ ಮಾಡಿರುವ ಬಿಜೆಪಿ ಕ್ಷಮೆ ಕೇಳಬೇಕು: ಕಾಂಗ್ರೆಸ್ ಒತ್ತಾಯ
ಕ್ಲಿಪ್ ದುರುದ್ದೇಶಪೂರಿತವಾಗಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ನನ್ನ ಪಕ್ಷದ ಸಹೋದ್ಯೋಗಿಗಳು ಎಚ್ಚರಿಸಿದ್ದರೂ ರಾಥೋಡ್ ಅವರು ಅದನ್ನು ಅಳಿಸಿ ಮತ್ತು ಮತ್ತೆ ಅಪ್‌ಲೋಡ್ ಮಾಡಿದ್ದಾರೆ.
ಝೀ ನ್ಯೂಸ್ ಸುದ್ದಿ ವಾಹಿನಿಯಲ್ಲಿ ರಾಹುಲ್ ಗಾಂಧಿಯವರ (Rahul Gandhi) ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಬಿಜೆಪಿ(BJP) ನಾಯಕರು ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ವಿಡಿಯೊದಲ್ಲಿ ರಾಹುಲ್ ಗಾಂಧಿ ಉದಯಪುರ ಕೊಲೆ (Udaipur Murder) ಆರೋಪಿಗಳನ್ನು ಮಕ್ಕಳು ಎಂದು ಹೇಳಿದ್ದಾರೆ ಎಂದು ತೋರಿಸಲಾಗಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಜುಲೈ 1 ರಂದು ಪ್ರಸಾರವಾದ ಝೀ ನ್ಯೂಸ್ ವರದಿಯನ್ನು ಉಲ್ಲೇಖಿಸಿದ್ದಾರೆ.ಇದರಲ್ಲಿ ರಾಹುಲ್ ಗಾಂಧಿ ಅವರು ಮಕ್ಕಳು ಎಂದು ಹೇಳುತ್ತಿದ್ದು, ಉದಯಪುರ ಹಂತಕರನ್ನು ಅವರು ಮಕ್ಕಳು ಎಂದು ಹೇಳಿರುವುದಾಗಿ ತಪ್ಪಾಗಿ ತೋರಿಸಲಾಗಿತ್ತು. ಕಳೆದ ವಾರ ಕೇರಳದ ವಯನಾಡ್‌ನಲ್ಲಿರುವ ತಮ್ಮ ಕಚೇರಿಯ ಮೇಲೆ ದಾಳಿ ಮಾಡಿದ ಎಸ್‌ಎಫ್‌ಐ ಕಾರ್ಯಕರ್ತರ ಬಗ್ಗೆ ರಾಹುಲ್ ಮಕ್ಕಳು ಎಂದು ಹೇಳಿದ್ದಾರೆ. “ಇನ್ನೂ ಹೆಚ್ಚಿನ ಕಳವಳಕಾರಿ ಸಂಗತಿಯೆಂದರೆ, ಸಂಸದರಾದ ರಾಜ್ಯವರ್ಧನ್ ರಾಥೋಡ್, ಸುಬ್ರತ್ ಪಾಠಕ್ ಸಂಸದ, ಕಮಲೇಶ್ ಸೈನಿ, ಶಾಸಕರು ಮತ್ತು ಇತರರು ಸೇರಿದಂತೆ ನಿಮ್ಮ ಪಕ್ಷದ ಹಲವಾರು ಸಹೋದ್ಯೋಗಿಗಳು ಉತ್ಸಾಹದಿಂದ ಮತ್ತು ಪರಿಶೀಲನೆಯಿಲ್ಲದೆ ಉದ್ದೇಶಪೂರ್ವಕವಾಗಿ ಕಟ್ಟುಕಥೆಗಳನ್ನು ಪ್ರಕಟಿಸಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ ಎಂದು ಜೈರಾಮ್ ರಮೇಶ್ ಬರೆದಿದ್ದಾರೆ.
ಮೂಲ ವಿಡಿಯೊದಲ್ಲಿ ರಾಹುಲ್ ತಮ್ಮ ವಯನಾಡ್ ಕಚೇರಿಯ ಮೇಲಿನ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ನಡೆಸಿದ ಹಿಂಸಾಚಾರದ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ಕಾಮೆಂಟ್‌ನಂತೆ ತೋರಿಸಲಾಗಿದೆ ಎಂದು ರಮೇಶ್ ಶನಿವಾರ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಕ್ಲಿಪ್ ದುರುದ್ದೇಶಪೂರಿತವಾಗಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ನನ್ನ ಪಕ್ಷದ ಸಹೋದ್ಯೋಗಿಗಳು ಎಚ್ಚರಿಸಿದ್ದರೂ ರಾಥೋಡ್ ಅವರು ಅದನ್ನು ಅಳಿಸಿ ಮತ್ತು ಮತ್ತೆ ಅಪ್‌ಲೋಡ್ ಮಾಡಿದ್ದಾರೆ. ಅವರ ಕ್ರಮಗಳು ಉದ್ದೇಶಪೂರ್ವಕವಾಗಿದೆ. ಮಾಜಿ ಕಾಂಗ್ರೆಸ್ ಅಧ್ಯಕ್ಷರನ್ನು ದೂಷಿಸಲು, ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಮತ್ತು ಈಗಾಗಲೇ ಸೂಕ್ಷ್ಮವಾದ, ಕೋಮುವಾದಿ ಪರಿಸ್ಥಿತಿಯನ್ನು ಮತ್ತಷ್ಟು ಧ್ರುವೀಕರಿಸಲು ಇದು ನಿಮ್ಮ ಪಕ್ಷದ ಕಾರ್ಯತಂತ್ರದ ಭಾಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
ನೀವು ಮತ್ತು ನಿಮ್ಮ ಪಕ್ಷದ ಸಹೋದ್ಯೋಗಿಗಳು ಇಂತಹ ಸುಳ್ಳುಗಳನ್ನು ಹರಡುವುದನ್ನು ನಿಲ್ಲಿಸುತ್ತೀರಿ ಎಂದು ನಾವು ನಿರೀಕ್ಷಿಸುತ್ತೇವೆ. ಇದಲ್ಲದೆ, ಸತ್ಯದ ಕಡೆಗೆ ಇಂತಹ ಅಜಾಗರೂಕ ನಿರ್ಲಕ್ಷ್ಯದಿಂದ ವರ್ತಿಸಿದ ನಿಮ್ಮ ಸಹೋದ್ಯೋಗಿಗಳ ಪರವಾಗಿ ನೀವು ತಕ್ಷಣ ಕ್ಷಮೆಯಾಚಿಸುವಿರಿ ಎಂದು ನಾನು ನಿರೀಕ್ಷಿಸುತ್ತೇನೆ. ಕ್ಷಮೆಯಾಚಿಸದಿದ್ದರೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು. “ನಾವು ಈಗಾಗಲೇ ಮೂಲ ಪ್ರಸಾರಕರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಪ್ರಾರಂಭಿಸಿದ್ದೇವೆ” ಎಂದು ರಮೇಶ್ ಹೇಳಿದರು.
कल हमारे शो DNA में राहुल गांधी का बयान उदयपुर की घटना से जोड़ कर ग़लत संदर्भ में चल गया था, ये एक मानवीय भूल थी जिसके लिए हमारी टीम क्षमाप्रार्थी हैं, हम इसके लिए खेद जताते हैं pic.twitter.com/YGs7kfbKKi
— Rohit Ranjan (@irohitr) July 2, 2022
ಝೀ ನ್ಯೂಸ್ ಶನಿವಾರದಂದು ಈ ದೋಷಕ್ಕಾಗಿ ಕ್ಷಮೆಯಾಚಿಸಿದೆ. ಝೀ ನ್ಯೂಸ್ ನಿರೂಪಕ ರೋಹಿತ್ ರಂಜನ್, “ನಮ್ಮ ಶೋ ಡಿಎನ್‌ಎಯಲ್ಲಿ ನಾವು ತಪ್ಪಾದ ಸಂದರ್ಭದೊಂದಿಗೆ ಸುದ್ದಿಯನ್ನು ಪ್ರಸ್ತುತಪಡಿಸಿದ್ದೇವೆ. ಇದಕ್ಕೆ ನಾವು ವಿಷಾದಿಸುತ್ತೇವೆ” ಎಂದು ಹೇಳಿದರು.
ವಯನಾಡ್‌ನಲ್ಲಿರುವ ತಮ್ಮ ಕಚೇರಿಯ ಮೇಲಿನ ದಾಳಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗಾಂಧಿ, “ಅವರು ಮಕ್ಕಳು. ಇದು ಒಳ್ಳೆಯದಲ್ಲ. ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅವರ ಬಗ್ಗೆ ನನಗೆ ಯಾವುದೇ ಕೋಪ ಅಥವಾ ದ್ವೇಷವಿಲ್ಲ. ಅವರು ಮೂರ್ಖತನದ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಯಾವುದೇ ನಿರ್ದಿಷ್ಟ ಘಟನೆಯನ್ನು ಉಲ್ಲೇಖಿಸದೆ ಶನಿವಾರ ಟ್ವೀಟ್ ಮಾಡಿದ್ದು , “ಪ್ರಚಾರ ಮತ್ತು ಸುಳ್ಳುಗಳು ಬಿಜೆಪಿ-ಆರ್‌ಎಸ್‌ಎಸ್‌ನ ಅಡಿಪಾಯ. ದೇಶವನ್ನು ದ್ವೇಷದ ಬೆಂಕಿಯಲ್ಲಿ ನಲುಗಿಸಿದ ಬಿಜೆಪಿ-ಆರ್‌ಎಸ್‌ಎಸ್‌ನ ಇತಿಹಾಸ ಇಡೀ ಭಾರತಕ್ಕೆ ತಿಳಿದಿದೆ. ಈ ದೇಶದ್ರೋಹಿಗಳು ಭಾರತವನ್ನು ಒಡೆಯಲು ಏನೇ ಮಾಡಿದರೂ, ಕಾಂಗ್ರೆಸ್ ಒಂದಾಗಲು ಹೆಚ್ಚಿನ ಕೆಲಸವನ್ನು ಮಾಡುತ್ತಲೇ ಇರುತ್ತದೆ ಎಂದಿದ್ದಾರೆ.
Published On - 3:05 pm, Sun, 3 July 22