HD Devegowda: ಗೌಡರ ಕುಟುಂಬದ ಬಗ್ಗೆ ಮಾತಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ, ದೇವೇಗೌಡರ ಬಗ್ಗೆ ರಾಜಣ್ಣ ಕ್ಷಮೆ ಕೇಳಿದ್ದಾರೆ : ಸಿದ್ದರಾಮಯ್ಯ ಸ್ಪಷ್ಟನೆ

Siddaramaiah: ಅಸೆಂಬ್ಲಿ ಚುನಾವಣೆ ಎದುರಿಗೇ ಇರುವಾಗ ಹೆಚ್​ ಡಿ ದೇವೇಗೌಡರ ಕುಟುಂಬದ ವಿರುದ್ಧ ಮಾತಾಡಬೇಡಿ ಎಂದು ಯಾರೂ ಕೂಡ ನನಗೆ ಹೇಳಿಲ್ಲ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಇತ್ತೀಚೆಗೆ ಭೇಟಿಯಾದಾಗ ಈ ಕುರಿತು ಚರ್ಚೆನೇ ಆಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

HD Devegowda: ಗೌಡರ ಕುಟುಂಬದ ಬಗ್ಗೆ ಮಾತಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ, ದೇವೇಗೌಡರ ಬಗ್ಗೆ ರಾಜಣ್ಣ  ಕ್ಷಮೆ ಕೇಳಿದ್ದಾರೆ : ಸಿದ್ದರಾಮಯ್ಯ ಸ್ಪಷ್ಟನೆ
ದೇವೇಗೌಡರ ಕುಟುಂಬದ ಬಗ್ಗೆ ಮಾತಾಡಬೇಡಿ ಎಂದು ಹೈಕಮಾಂಡ್ ಹೇಳಿಲ್ಲ, ದೇವೇಗೌಡರ ಬಗ್ಗೆ ರಾಜಣ್ಣ ಕ್ಷಮೆ ಕೇಳಿದ್ದಾರೆ : ಸಿದ್ದರಾಮಯ್ಯ ಸ್ಪಷ್ಟನೆ
TV9kannada Web Team

| Edited By: sadhu srinath

Jul 02, 2022 | 2:35 PM

ಬೆಂಗಳೂರು: ದಾವಣಗೆರೆಯಲ್ಲಿ ಆಯೋಜಿಸಿರುವ ತಮ್ಮ ಕುರಿತಾದ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ನನಗೆ 75 ವರ್ಷ ತುಂಬುತ್ತಿದೆ ಅದಕ್ಕೆ ಈ ಕಾರ್ಯಕ್ರಮ. ಇದು ನನ್ನ‌ ಸ್ನೇಹಿತರು ಮಾಡ್ತಿರುವ ವಿಶೇಷವಾದ ಕಾರ್ಯಕ್ರಮ. ಯಡಿಯೂರಪ್ಪ 77ನೇ ಬರ್ತ್ ಡೇ ಮಾಡಿಕೊಂಡರು. ನಾನು ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಯಡಿಯೂರಪ್ಪ ಯಾಕೆ ಬರ್ತ್​​​ಡೇ ಮಾಡಿಕೊಂಡರು? 75ನೇ ವರ್ಷ ಅಮೃತ ಮಹೋತ್ಸವ ಇದ್ದಂತೆ. ಅದಕ್ಕೆ ನಮ್ಮ‌ ಸ್ನೇಹಿತರು, ಅಭಿಮಾನಿಗಳು‌ ಮಾಡ್ತಿದ್ದಾರೆ. ನಾನೂ ಇದನ್ನ ಒಪ್ಪಿಕೊಂಡಿದ್ದೇನೆ ಎಂದ ಸಿದ್ದರಾಮಯ್ಯ ಅವರು ಇದು ನನ್ನ ಶಕ್ತಿ ಪ್ರದರ್ಶನವಲ್ಲ ಎಂದಿದ್ದಾರೆ.

ನಾನು ರಾಜಕೀಯಕ್ಕೆ ಬಂದಿದ್ದು 1984 ರಲ್ಲಿ. ಇದೊಂದು ಜೀವನದಲ್ಲಿ ಮೈಲಿಗಲ್ಲು. ಅದಕ್ಕಾಗಿ ನಾನು ಒಪ್ಪಿಕೊಂಡಿದ್ದೇನೆ. ಹೊಟ್ಟೆಕಿಚ್ಚಿನಿಂದ ಅವರು ಮಾಡಿಕೊಳ್ತಿದ್ದಾರೆ. ಅಶೋಕ್ ದೊಡ್ಡ ದೊಡ್ಡ ಜಾಹಿರಾತು ಕೊಟ್ಟಿದ್ರಲ್ಲ. ಅದರ ಬಗ್ಗೆ ನೀವು ಕೇಳ್ರಪ್ಪ. ನನ್ನ ಹುಟ್ಟುಹಬ್ಬಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಸೇರಿದಂತೆ ಎಲ್ಲಾ ರಾಜ್ಯದ ನಾಯಕರು ಬರ್ತಾರೆ. ನಾನು ಬಿಜೆಪಿಯವರನ್ನ ಕರೆದಿಲ್ಲ, ನಾನ್ಯಾಕೆ ಅವರನ್ನ ಕರೆಯಲಿ? ದೇಶಪಾಂಡೆ ಒಂದು ಕಮಿಟಿ ಮಾಡಿಕೊಂಡಿದ್ದಾರೆ. ಅವರು ಬೇಕಾದರೇ ಕರೆಯಬಹುದು ಎಂದು ಸಿದ್ದರಾಮಯ್ಯ ಸೂಕ್ಷ್ಮವಾಗಿ ಹೇಳಿದರು.

ಇನ್ನು ಅಸೆಂಬ್ಲಿ ಚುನಾವಣೆ ಎದುರಿಗೇ ಇರುವಾಗ ಹೆಚ್​ ಡಿ ದೇವೇಗೌಡರ ಕುಟುಂಬದ ವಿರುದ್ಧ ಮಾತಾಡಬೇಡಿ ಎಂದು ಯಾರೂ ಕೂಡ ನನಗೆ ಹೇಳಿಲ್ಲ. ನಮಗ್ಯಾಕೆ ಹೇಳ್ತಾರೆ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಇತ್ತೀಚೆಗೆ ಭೇಟಿಯಾದಾಗ ಈ ಕುರಿತು ಚರ್ಚೆನೇ ಆಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

ದೇವೇಗೌಡ ಫ್ಯಾಮಿಲಿ ಟಾರ್ಗೆಟ್ ಮಾಡಬೇಡಿ, ಅದರಿಂದ ಕಾಂಗ್ರೆಸ್ಸಿಗೆ ಆಗುವ ಲಾಭ ಏನೂ ಇಲ್ಲ: ರಾಹುಲ್ ಗಾಂಧಿ ಕಿವಿಮಾತು

ದೇವೆಗೌಡರ ಬಗ್ಗೆ ರಾಜಣ್ಣ ಹಗುರವಾಗಿ ಮಾತನಾಡಿದ ವಿಚಾರ…

ದೇವೇಗೌಡರ ಬಗ್ಗೆ ಕೆ.ಎನ್.ರಾಜಣ್ಣ ಆಕ್ಷೇಪಾರ್ಹ ಹೇಳಿಕೆ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಕ್ಷಮೆ ಕೇಳಿದ್ದಾರೆ, ಅದು ಮುಗಿದ ಅಧ್ಯಾಯ ಎಂದರು. ಅದರ ಬಗ್ಗೆ ನಾನು‌ ಮಾತನಾಡಲ್ಲ ಎಂದ ಸಿದ್ದರಾಮಯ್ಯ HDD ಸಾವಿನ ಬಗ್ಗೆ ಸಿದ್ದರಾಮಯ್ಯ ಬಿ ಟೀಂ ಮಾತಾಡಿದೆ ಎಂಬ HDK ಹೇಳಿಕೆಗೆ ಪ್ರತಿಕ್ರಿಯಿಸಲು ಸಹ ಸಿದ್ದರಾಮಯ್ಯ ನಿರಾಕರಿಸಿದರು. ಆದೆರೆ, ಈ ರೀತಿಯ ಸುಳ್ಳಿನ ಬಗ್ಗೆ ಮಾತಾಡಲ್ಲ ಎಂದು ಸಿದ್ದರಾಮಯ್ಯ ಸೇರಿಸಿದರು.

ಪ್ರಧಾನಿ ಮೋದಿ ಸರ್ಕಾರದ ಎಂಟು ದುರಂತಗಳು ಎಂದು ಸಿದ್ದರಾಮಯ್ಯ ಈ ಡಿಸಾಸ್ಟರ್ಗಳ ಪಟ್ಟಿ ಕೊಟ್ಟಿದ್ದಾರೆ: 1) ದೇಶವನ್ನ ಸಾಲದ ಸುಳಿಗೆ ಸಿಲುಕಿಸಿದ್ದು, ರೂಪಾಯಿ ಬೆಲೆ ಪಾತಾಳಕ್ಕೆ ಕುಸಿದಿರೋದು.. 2) ಬೆಲೆ ಏರಿಕೆಯು ಹಿಂದೆಂದೂ ಇಲ್ಲದ ಮಟ್ಟಕ್ಕೆ ಮುಟ್ಟಿದೆ.. 3) ನಿರುದ್ಯೋಗ ತಾರಕಕ್ಕೇರಿರೋದು.. 4) ರಾಜ್ಯಗಳ ಆರ್ಥಿಕತೆ ಕುಸಿದು ಹೋಗ್ತಿದೆ, ಒಕ್ಕೂಟ ವ್ಯವಸ್ಥೆ ಶಿಥಿಲವಾಗ್ತಿದೆ.. 5) ಡಿ ಮಾನಿಟೈಸೇಷನ್ – ಜಿಎಸ್ ಟಿ, ಕೋವಿಡ್ ಸಮಯದ ಎಡಬಿಡಂಗಿ ನಿರ್ವಹಣೆ ಗಳು.. 6) ಕಷ್ಟಪಟ್ಟು ಕಟ್ಟಿದ್ದ ಲಾಭಾದಯಕ ಸಂಸ್ಥೆ, ಕಂಪನಿ ಕಾರ್ಖಾನೆ ಖಾಸಗಿಯವರಿಗೆ ಮಾರಾಟ ಮಾಡಲಾಗ್ತಿದೆ.. 7) ರೈತ, ಮಹಿಳಾ, ‌ಕಾರ್ಮಿಕ ವಿರೋಧಿ ಕಾನೂನಗಳನ್ನ ಜಾರಿಗೆ ತಂದಿದ್ದಾರೆ.. 8) ಜನರನ್ನು ಬಡತನದ ದವಡೆಗೆ ತಳ್ಳಿದ್ದಾರೆ, ಅಂಬಾನಿ ಅದಾನಿಗಳಂಥ ಕಾರ್ಪೋರೆಟ್ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗ್ತಿದೆ…

ಇದನ್ನೂ ಓದಿ: ಪಾದ ಸಾಮುದ್ರಿಕ ಶಾಸ್ತ್ರ: ಪಾದದಲ್ಲಿ ಯಾವ ಸ್ವರೂಪದ ರೇಖೆಗಳಿದ್ದರೆ ನಿಮಗೆ ಎಂತಹ ಅದೃಷ್ಟ ಲಭಿಸುತ್ತದೆ ಎಂಬುದನ್ನು ತಿಳಿಯಿರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada