ದೇವೇಗೌಡ ಫ್ಯಾಮಿಲಿ ಟಾರ್ಗೆಟ್ ಮಾಡಬೇಡಿ, ಅದರಿಂದ ಕಾಂಗ್ರೆಸ್ಸಿಗೆ ಆಗುವ ಲಾಭ ಏನೂ ಇಲ್ಲ: ರಾಹುಲ್ ಗಾಂಧಿ ಕಿವಿಮಾತು

ಜೆಡಿಎಸ್ ಅಧಿನಾಯಕರಾದ ಹೆಚ್​ ಡಿ ದೇವೇಗೌಡ ಮತ್ತು ಹೆಚ್​ ಡಿ ಕುಮಾರಸ್ವಾಮಿ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡಬೇಡಿ. ಅಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಆಗುವ ನಷ್ಟವೇ ಜಾಸ್ತಿ. ಎಐಸಿಸಿ ತಂಡ ಸಿದ್ದಪಡಿಸಿರುವ ಸಮೀಕ್ಷೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರಾಹುಲ್ ಗಾಂಧಿ ಸೂಕ್ಷ್ಮವಾಗಿ ಸಿದ್ದರಾಮಯ್ಯಗೆ ಹೇಳಿದ್ದಾರೆ.

ದೇವೇಗೌಡ ಫ್ಯಾಮಿಲಿ ಟಾರ್ಗೆಟ್ ಮಾಡಬೇಡಿ, ಅದರಿಂದ ಕಾಂಗ್ರೆಸ್ಸಿಗೆ ಆಗುವ ಲಾಭ ಏನೂ ಇಲ್ಲ: ರಾಹುಲ್ ಗಾಂಧಿ ಕಿವಿಮಾತು
ದೇವೇಗೌಡ ಫ್ಯಾಮಿಲಿ ಟಾರ್ಗೆಟ್ ಮಾಡಬೇಡಿ: ರಾಹುಲ್ ಗಾಂಧಿ ಕಿವಿಮಾತು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 30, 2022 | 6:34 PM

ದೆಹಲಿ: ಹೆಚ್​ ಡಿ ದೇವೇಗೌಡ ಫ್ಯಾಮಿಲಿ ಟಾರ್ಗೆಟ್ ಮಾಡದಂತೆ ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಿವಿಮಾತು ಹೇಳಿದ್ದಾರೆ. ಜೆಡಿಎಸ್ ಅಧಿನಾಯಕರಾದ ಹೆಚ್​ ಡಿ ದೇವೇಗೌಡ ಮತ್ತು ಹೆಚ್​ ಡಿ ಕುಮಾರಸ್ವಾಮಿ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡಬೇಡಿ. ವೈಯಕ್ತಿಕ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಆಗುವ ಲಾಭ ಏನೂ ಇಲ್ಲ. ಅಂತಹ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಆಗುವ ನಷ್ಟವೇ ಜಾಸ್ತಿ. ಎಐಸಿಸಿ ತಂಡ ಸಿದ್ದಪಡಿಸಿರುವ ಸಮೀಕ್ಷೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರಾಹುಲ್ ಗಾಂಧಿ ಸೂಕ್ಷ್ಮವಾಗಿ ಸಿದ್ದರಾಮಯ್ಯಗೆ ಹೇಳಿದ್ದಾರೆ.

ದೇವೇಗೌಡರ ಕುಟುಂಬ ನಿಮ್ಮನ್ನು ಟಾರ್ಗೆಟ್‌ ಮಾಡಿದರೂ, ನೀವು ಉತ್ತರ ಕೊಡಬೇಡಿ. ಕಾಂಗ್ರೆಸ್ ಒಕ್ಕಲಿಗ ನಾಯಕರಿಂದ ಅಂತಹುದಕ್ಕೆ ಪ್ರತಿಕ್ರಿಯೆ ಕೊಡಿಸುವಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.

ವೈಯಕ್ತಿಕ ಹೇಳಿಕೆಗಳಿಂದ ಹಳೆ ಮೈಸೂರು ಭಾಗದಲ್ಲಿ ಹಿನ್ನಡೆ ಸಾಧ್ಯತೆಯಿದೆ. ಹೆಚ್​ ಡಿ ದೇವೇಗೌಡ ಮತ್ತು ಹೆಚ್​ ಡಿ ಕುಮಾರಸ್ವಾಮಿ ಅವರುಗಳನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದರಿಂದಲೇ ಕಳೆದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಗೊಂಡಿದೆ. ಹೀಗಾಗಿ ನಿನ್ನೆ ದೆಹಲಿ ಭೇಟಿ ವೇಳೆ ರಾಹುಲ್ ಗಾಂಧಿ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಇದನ್ನೂ ಓದಿ:

ಸಾಲುಮರದ ತಿಮ್ಮಕ್ಕಗೆ ಸಚಿವ​ ಸ್ಥಾನಮಾನ ಪ್ರಕಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ:

ಭ್ರಷ್ಟಾಚಾರ ಪ್ರಕರಣ: ಹೈಕೋರ್ಟ್​ ತಪರಾಕಿ ಬಳಿಕ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್​​ಗೆ ಎಸಿಬಿ ಫುಲ್ ಗ್ರಿಲ್!

 

Published On - 6:22 pm, Thu, 30 June 22