AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra Politics: ದೇವೇಂದ್ರ ಫಡ್ನವಿಸ್​ಗೆ ಮಹಾರಾಷ್ಟ್ರ ಸಿಎಂ ಪಟ್ಟ ಫಿಕ್ಸ್; ಯಾರಿಗೆಲ್ಲ ಸಿಗಲಿದೆ ಸಚಿವ ಸ್ಥಾನ?​

ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮರಳಲು ಸಿದ್ಧರಾಗಿದ್ದಾರೆ. ಆ ಬಂಡಾಯ ಬಣದ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಲಿದ್ದಾರೆ. ಮಹಾರಾಷ್ಟ್ರದ ನೂತನ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ.

Maharashtra Politics: ದೇವೇಂದ್ರ ಫಡ್ನವಿಸ್​ಗೆ ಮಹಾರಾಷ್ಟ್ರ ಸಿಎಂ ಪಟ್ಟ ಫಿಕ್ಸ್; ಯಾರಿಗೆಲ್ಲ ಸಿಗಲಿದೆ ಸಚಿವ ಸ್ಥಾನ?​
ದೇವೇಂದ್ರ ಫಡ್ನವಿಸ್- ಏಕನಾಥ್ ಶಿಂಧೆ
TV9 Web
| Updated By: ಸುಷ್ಮಾ ಚಕ್ರೆ|

Updated on: Jun 30, 2022 | 4:09 PM

Share

ಮುಂಬೈ: ಬಂಡಾಯವೆದ್ದ ಶಾಸಕರ ಮನವೊಲಿಕೆ ಮಾಡಲು ವಿಫಲರಾಗಿ ಶಿವಸೇನೆ ನಾಯಕ ಉದ್ಧವ್ ಠಾಕ್ರೆ (Uddhav Thackeray) ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra CM) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ (Devendra Fadnavis) ಪ್ರಮಾಣವಚನ ಸ್ವೀಕಾರ ಮಾಡುವುದು ಬಹುತೇಕ ಖಚಿತವಾಗಿದೆ. ಬಂಡಾಯ ಶಾಸಕರ ಬಣದ ನಾಯಕ ಏಕನಾಥ್ ಶಿಂಧೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು.

ಮಹಾರಾಷ್ಟ್ರದ ರಾಜಕಾರಣದ ನಾಟಕೀಯ ಬೆಳವಣಿಗೆಗಳ ಬಳಿಕ ಬಿಜೆಪಿಯ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮರಳಲು ಸಿದ್ಧರಾಗಿದ್ದಾರೆ. ಆ ಬಂಡಾಯ ಬಣದ ನೇತೃತ್ವ ವಹಿಸಿದ್ದ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗಲಿದ್ದಾರೆ. ದೇವೇಂದ್ರ ಫಡ್ನವಿಸ್ ಮತ್ತು ಏಕನಾಥ್ ಶಿಂಧೆ ಅವರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿಯಾಗಲಿದ್ದಾರೆ. ದೇವೇಂದ್ರ ಫಡ್ನವಿಸ್ ಅವರು ನಾಳೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ನಾಳೆ ಅವರ ಜೊತೆಗೆ ಕೆಲವೇ ಕೆಲವು ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

“ಸಚಿವ ಸ್ಥಾನಗಳ ವಿವರಗಳ ಬಗ್ಗೆ ಬಿಜೆಪಿಯೊಂದಿಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಅದು ಶೀಘ್ರದಲ್ಲೇ ಇತ್ಯರ್ಥವಾಗಲಿದೆ. ಅಲ್ಲಿಯವರೆಗೆ, ದಯವಿಟ್ಟು ಮಂತ್ರಿ ಪಟ್ಟಿಗಳು ಮತ್ತು ಅದರ ಬಗ್ಗೆ ವದಂತಿಗಳನ್ನು ನಂಬಬೇಡಿ” ಎಂದು ಏಕನಾಥ್ ಶಿಂಧೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Maharashtra Politics: ರೆಸಾರ್ಟ್​ ರಾಜಕೀಯದಿಂದ ಉದ್ಧವ್ ಠಾಕ್ರೆ ರಾಜೀನಾಮೆವರೆಗೆ; ಮಹಾರಾಷ್ಟ್ರ ರಾಜಕಾರಣದ ಮುಖ್ಯಾಂಶ ಇಲ್ಲಿದೆ

ತಮಗೆ 170 ಶಾಸಕರ ಬೆಂಬಲವಿದೆ ಎಂದು ಬಿಜೆಪಿ ನಾಯಕ ಗಿರೀಶ್ ಮಹಾಜನ್ ಹೇಳಿದ್ದಾರೆ. ಮಹಾರಾಷ್ಟ್ರದ ನೂತನ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ.

ಬಿಜೆಪಿ ಸಚಿವರು: ದೇವೇಂದ್ರ ಫಡ್ನವಿಸ್ (ಮುಖ್ಯಮಂತ್ರಿ) ಚಂದ್ರಕಾಂತ ಪಾಟೀಲ ಸುಧೀರ್ ಮುಂಗಂತಿವಾರ್ ಗಿರೀಶ್ ಮಹಾಜನ್ ಆಶಿಶ್ ಶೇಲಾರ್ ಪ್ರವೀಣ್ ದಾರೆಕರ್ ಚಂದ್ರಶೇಖರ್ ಬಾವನಕುಲೆ ವಿಜಯಕುಮಾರ್ ದೇಶಮುಖ್ ಅಥವಾ ಸುಭಾಷ್ ದೇಶಮುಖ್ ಗಣೇಶ ನಾಯ್ಕ ರಾಧಾಕೃಷ್ಣ ವಿಖೆ ಪಾಟೀಲ್ ಸಂಭಾಜಿ ಪಾಟೀಲ್ ನೀಲಂಗೇಕರ ಮಂಗಲ್ ಪ್ರಭಾತ್ ಲೋಧಾ ಸಂಜಯ್ ಕುಟೆ ರವೀಂದ್ರ ಚವ್ಹಾಣ ಡಾ. ಅಶೋಕ್ ಉಯ್ಕೆ ಸುರೇಶ ಖಾಡೆ ಜಯಕುಮಾರ್ ರಾವಲ್ ಅತುಲ್ ಸೇವ್ ದೇವಯಾನಿ ಫರಾಂಡೆ ರಣಧೀರ್ ಸಾವರ್ಕರ್ ಮಾಧುರಿ ಮಿಸಾಲ್

ಸಚಿವರು: ಪ್ರಸಾದ್ ಲಾಡ್ ಜಯಕುಮಾರ ಗೋರೆ ಪ್ರಶಾಂತ್ ಠಾಕೂರ್ ಮದನ್ ಯರವರ್ ಮಹೇಶ್ ಲಾಂಡಗೆ ಅಥವಾ ರಾಹುಲ್ ಕುಲ್ ನಿಲಯ್ ನಾಯಕ್ ಗೋಪಿಚಂದ್ ಪಡಲ್ಕರ್ ಬಂಟಿ ಬಂಗಾಡಿಯಾ

ಏಕನಾಥ್ ಶಿಂಧೆ ಬಣದವರು: ಏಕನಾಥ್ ಶಿಂಧೆ (ಉಪ ಮುಖ್ಯಮಂತ್ರಿ) ಗುಲಾಬರಾವ್ ಪಾಟೀಲ್ ಉದಯ್ ಸಮಂತ್ ದಾದಾ ಭೂಸೆ ಅಬ್ದುಲ್ ಸತ್ತಾರ್ ಸಂಜಯ್ ರಾಥೋಡ್ ಶಂಭುರಾಜ ದೇಸಾಯಿ ಬಚ್ಚು ಕಾಡು ತಾನಾಜಿ ಸಾವಂತ್

ಸಚಿವರು: ದೀಪಕ್ ಕೇಸರಕರ್ ಸಂದೀಪನ್ ಬುಮ್ರೆ ಸಂಜಯ್ ಶಿರ್ಸತ್ ಭರತ್ ಗೋಗಾವಲೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಉನ್ನತ ನಾಯಕರು ತಮ್ಮ ಮುಂದಿನ ನಡೆಯ ಬಗ್ಗೆ ಕಾರ್ಯತಂತ್ರ ರೂಪಿಸಲು ದಕ್ಷಿಣ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಬುಧವಾರ ಸಭೆ ನಡೆಸಿದರು. ತಮ್ಮ ಮುಂದಿನ ಕ್ರಮವನ್ನು ಅಂತಿಮಗೊಳಿಸಲು ಮಹಾರಾಷ್ಟ್ರದ ಉನ್ನತ ಬಿಜೆಪಿ ನಾಯಕರು ಇಂದು ಸಭೆ ನಡೆಸಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ. 39 ಬಂಡಾಯ ಶಾಸಕರು ಮತ್ತು ಸ್ವತಂತ್ರರನ್ನು ಒಳಗೊಂಡಿರುವ ಶಿವಸೇನೆಯ ಏಕನಾಥ್ ಶಿಂಧೆ ಬಣದ ಬೆಂಬಲದೊಂದಿಗೆ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಎನ್ನಲಾಗಿದೆ.