ಸಂಡೇ ಲಾಕ್​ಡೌನ್​ಗೆ ಬೆಂಗಳೂರಿಗರು ಡೋಂಟ್ ಕೇರ್, ಬ್ಯಾರಿಕೇಡ್ ಹಾಕಿದ್ರೂ ಸಂಚಾರ

| Updated By:

Updated on: Jul 26, 2020 | 3:52 PM

ಬೆಂಗಳೂರು: ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರ ಕಳೆದ ವಾರ ಬೆಂಗಳೂರಿಗೆ ಬೀಗ ಹಾಕಿತ್ತು. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಲಾಕ್​ಡೌನ್ ತೆರವುಗೊಳಿಸಿ, ಸಂಡೇ ಲಾಕ್​ಡೌನ್​ನ ಮುಂದುವರಿಸಿತ್ತು. ಹೀಗಾಗಿಯೇ ನಿನ್ನೆ ರಾತ್ರಿಯಿಂದ ಸಂಡೇ ಲಾಕ್​ಡೌನ್ ಶುರುವಾಗಿದ್ದು, ನಾಳೆ ಬೆಳಗಿನವರೆಗೆ ಎಲ್ಲವೂ ಬಂದ್ ಆಗಿರಬೇಕಿತ್ತು. ಆದರೆ ಅದ್ಯಾವುದು ಆಗಿಲ್ಲ. ಬ್ಯಾರಿಕೇಡ್ ಹಾಕಿದ್ರೂ ಡೋಂಟ್ ಕೇರ್ ಕೊರೊನಾ ಏಟಿಗೆ ಬೆಂಗಳೂರಿನ ರಸ್ತೆಗಳು ಬಿಕೋ ಅನ್ನಬೇಕಿತ್ತು ಆದರೆ ಜನ ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗಳಿದಿದ್ದಾರೆ. ಆದರೆ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್​ಗಳಿಲ್ಲದೆ […]

ಸಂಡೇ ಲಾಕ್​ಡೌನ್​ಗೆ ಬೆಂಗಳೂರಿಗರು ಡೋಂಟ್ ಕೇರ್, ಬ್ಯಾರಿಕೇಡ್ ಹಾಕಿದ್ರೂ ಸಂಚಾರ
Follow us on

ಬೆಂಗಳೂರು: ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರ ಕಳೆದ ವಾರ ಬೆಂಗಳೂರಿಗೆ ಬೀಗ ಹಾಕಿತ್ತು. ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಲಾಕ್​ಡೌನ್ ತೆರವುಗೊಳಿಸಿ, ಸಂಡೇ ಲಾಕ್​ಡೌನ್​ನ ಮುಂದುವರಿಸಿತ್ತು. ಹೀಗಾಗಿಯೇ ನಿನ್ನೆ ರಾತ್ರಿಯಿಂದ ಸಂಡೇ ಲಾಕ್​ಡೌನ್ ಶುರುವಾಗಿದ್ದು, ನಾಳೆ ಬೆಳಗಿನವರೆಗೆ ಎಲ್ಲವೂ ಬಂದ್ ಆಗಿರಬೇಕಿತ್ತು. ಆದರೆ ಅದ್ಯಾವುದು ಆಗಿಲ್ಲ.

ಬ್ಯಾರಿಕೇಡ್ ಹಾಕಿದ್ರೂ ಡೋಂಟ್ ಕೇರ್
ಕೊರೊನಾ ಏಟಿಗೆ ಬೆಂಗಳೂರಿನ ರಸ್ತೆಗಳು ಬಿಕೋ ಅನ್ನಬೇಕಿತ್ತು ಆದರೆ ಜನ ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗಳಿದಿದ್ದಾರೆ. ಆದರೆ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್​ಗಳಿಲ್ಲದೆ ಸಂಪೂರ್ಣ ಸ್ತಬ್ಧವಾಗಿದೆ.

ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಹಿನ್ನೆಲೆಯಲ್ಲಿ K.R.ಮಾರ್ಕೆಟ್‌ ಓಪನ್ ಇಲ್ಲದಿದ್ರೂ ರಸ್ತೆ ಬದಿ, ಕೆ.ಆರ್.ಮಾರ್ಕೆಟ್‌ ಸುತ್ತಮುತ್ತ ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆ. ಲಾಲ್‌ಬಾಗ್‌ ಕ್ಲೋಸ್‌ ಆಗಿದ್ರೂ ಪಾರ್ಕ್‌ ಹೊರಗೆ ಜನರು ವಾಕಿಂಗ್‌ ಮಾಡುತ್ತಿದ್ದಾರೆ. ಬ್ಯಾರಿಕೇಡ್ ಹಾಕಿದ್ರೂ ಲಾಲ್‌ಬಾಗ್‌ ಸುತ್ತಮುತ್ತ ಎಂದಿನಂತೆ ವಾಹನಗಳ ಸಂಚಾರ ಕಂಡು ಬಂತು.

ಈ ಬಾರಿಯ ಸಂಡೇ ಲಾಕ್​ಡೌನ್​ಗೆ ಜನ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಪ್ರತಿ ದಿನದಂತೆ ರಸ್ತೆಗಿಳಿಯುತ್ತಿದ್ದಾರೆ. ಈಗಾಗಲೇ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ ಇದರ ನಡುವೆ ಈ ರೀತಿ ಜನರು ವರ್ತಿಸುತ್ತಿರುವುದು ಮುಂದೆ ದೊಡ್ಡ ಕಂಟಕಕ್ಕೆ ಆಹ್ವಾನ ನೀಡಿದಂತಾಗುತ್ತೆ.


Published On - 8:42 am, Sun, 26 July 20