‘ವೀಕೆಂಡ್ ಅಂತ ಅನಗತ್ಯವಾಗಿ ಹೊರಗೆ ಓಡಾಡಬೇಡಿ, ಲಾಕ್ಡೌನ್ ಬಿಗಿಯಾಗಿರುತ್ತೆ’
ಬೆಂಗಳೂರು: ಲಾಕ್ಡೌನ್ ಸಡಿಲಗೊಳಿಸಿದ್ದಾರೆಂದು ವೀಕೆಂಡ್ಗೆ ಏನಾದ್ರು ಪ್ಲಾನ್ ಮಾಡಲು ಮುಂದಾಗಬೇಡಿ. ಯಾಕಂದ್ರೆ ಈಗ ನಾವು ಲಾಕ್ಡೌನ್ 4ರಲ್ಲಿದ್ದೀವಿ. ಸೋಮವಾರದಿಂದ ಶನಿವಾರದವರೆಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೆ ಭಾನುವಾರ ಎಂದಿನಂತೆ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತೆ. ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತೆ. ಅನಗತ್ಯವಾಗಿ ಯಾರು ಹೊರಗೆ ಓಡಾಡಬಾರದು. ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಕ್ಲೋಸ್ ಮಾಡಲಾಗುತ್ತೆ. ಹಣ್ಣು, ತರಕಾರಿ, ಮಾಂಸ, ಡಾಕ್ಟರ್, ನರ್ಸ್ಗಳಿಗೆ, ಆ್ಯಂಬುಲೆನ್ಸ್ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಬೆಂಗಳೂರಿನಿಂದ ಶ್ರಮಿಕ ರೈಲು […]
ಬೆಂಗಳೂರು: ಲಾಕ್ಡೌನ್ ಸಡಿಲಗೊಳಿಸಿದ್ದಾರೆಂದು ವೀಕೆಂಡ್ಗೆ ಏನಾದ್ರು ಪ್ಲಾನ್ ಮಾಡಲು ಮುಂದಾಗಬೇಡಿ. ಯಾಕಂದ್ರೆ ಈಗ ನಾವು ಲಾಕ್ಡೌನ್ 4ರಲ್ಲಿದ್ದೀವಿ. ಸೋಮವಾರದಿಂದ ಶನಿವಾರದವರೆಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದ್ರೆ ಭಾನುವಾರ ಎಂದಿನಂತೆ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತೆ.
ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತೆ. ಅನಗತ್ಯವಾಗಿ ಯಾರು ಹೊರಗೆ ಓಡಾಡಬಾರದು. ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಕ್ಲೋಸ್ ಮಾಡಲಾಗುತ್ತೆ. ಹಣ್ಣು, ತರಕಾರಿ, ಮಾಂಸ, ಡಾಕ್ಟರ್, ನರ್ಸ್ಗಳಿಗೆ, ಆ್ಯಂಬುಲೆನ್ಸ್ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಬೆಂಗಳೂರಿನಿಂದ ಶ್ರಮಿಕ ರೈಲು ಹೋಗಿದೆ. ಭಾನುವಾರವೂ ಶ್ರಮಿಕ ರೈಲು ಹೊರಡುತ್ತೆ. ಇದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
Published On - 5:56 pm, Fri, 22 May 20