
ಹಾವೇರಿ: ರಾಜ್ಯಾದ್ಯಂತ ಇಂದಿನಿಂದ ಕಾಲೇಜು ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸ್ಯಾನಿಟೈಸ್ ಮಾಡಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಹಾವೇರಿ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ ಸಿದ್ದತೆ ಕಂಡು ಬಂದಿಲ್ಲ.
ಸರ್ಕಾರ ಕಾಲೇಜು ತೆರೆಯಲು ಅನುಮತಿ ನೀಡಿದರೂ ಸಿಬ್ಬಂದಿ ಮಾತ್ರ ಯಾವುದೇ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಕಾಲೇಜಿನ ಕೊಠಡಿಗಳ ಮುಂದೆ ಮದ್ಯದ ಬಾಟಲಿ, ನೀರಿನ ಬಾಟಲಿಗಳು ಬಿದ್ದಿವೆ. ಇನ್ನೂ ಕೊಠಡಿಗಳಿಗೆ ಸ್ಯಾನಿಟೈಸರ್ ಕೂಡ ಮಾಡಿಲ್ಲ. ಇಂದಿನಿಂದ ತರಗತಿಗಳು ಶುರುವಾಗಬೇಕಿತ್ತು.
ಆದರೆ ಸಿಬ್ಬಂದಿ ಕೂಡ ಕಾಲೇಜಿನತ್ತ ಸುಳಿದಿಲ್ಲ. ಕಾಲೇಜು ಬೀಗ ಹಾಕಲಾಗಿದೆ. ನಿನ್ನೆ ಕಾಲೇಜಿನ ಕೊಠಡಿ ಹಾಗೂ ಅಂಗಳದಲ್ಲಿ ಕಸಗುಡಿಸಿದ್ದು ಬಿಟ್ರೆ ಈವರೆಗೂ ಸ್ಯಾನಿಟೈಸರ್ ಹೊಡೆದಿಲ್ಲ. ಈ ರೀತಿಯ ವಾತಾವರಣ ಹಾವೇರಿ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುಂಡು ಬಂದಿದೆ.