AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಳಿಗೂ ಪೂಜೆ ಹುಲಿಗೂ ಪೂಜೆ! ದೀಪಾವಳಿಯಂದು ಹೀಗೊಂದು ವಿಶಿಷ್ಟ ಆಚರಣೆ

ಉತ್ತರ ಕನ್ನಡ: ದೀಪಾವಳಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ? ಒಂದೊಂದೆಡೆ ಒಂದೊಂದು ಸಂಪ್ರದಾಯ, ಒಂದೊಂದು ತಿಂಡಿ ತಿನಿಸು. ಆಚರಣೆಗಳಲ್ಲೂ ದೀಪಾವಳಿ ವಿಶಿಷ್ಟವಾಗಿದೆ. ದೀಪಾವಳಿ ಆಚರಣೆ ಪರಿಸರದ ಜೊತೆ ಬೆಸೆದುಕೊಂಡಿದೆ. ಹೇಗೆ ಏನು ಎತ್ತ ಕುತೂಹಲವಾಯಿತೇ? ಇಲ್ಲಿದೆ ನೋಡಿ ಫೋಟೋ ಸ್ಟೋರಿ! ಮಲೆನಾಡ ಭಾಗದಲ್ಲಿ ದೀಪಾವಳಿಯಂದು ಆಕಳನ್ನು ಅಲಂಕರಿಸುತ್ತಾರೆ. ಅಡಿಕೆಯ ಸರ ತೊಡಿಸಿ ಪೂಜಿಸುತ್ತಾರೆ. ಜೊತೆಗೆ ಹುಲಿಯಪ್ಪನ ಪೂಜೆ ಮಾಡುತ್ತಾರೆ! ಹುಲಿಯಪ್ಪ ಎಂದರೆ ಕಾಡಿನಲ್ಲಿರುವ ಹುಲಿ. ಹುಲ್ಲು ಮೇಯಲು ಸಾಕಿದ ಆಕಳನ್ನು ಹೊರಗೆ ಬಿಟ್ಟಾಗ ತಿನ್ನದೇ ಕಾಪಾಡು ಎಂದು […]

ಆಕಳಿಗೂ ಪೂಜೆ ಹುಲಿಗೂ ಪೂಜೆ! ದೀಪಾವಳಿಯಂದು ಹೀಗೊಂದು ವಿಶಿಷ್ಟ ಆಚರಣೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Nov 17, 2020 | 10:59 AM

Share

ಉತ್ತರ ಕನ್ನಡ: ದೀಪಾವಳಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ? ಒಂದೊಂದೆಡೆ ಒಂದೊಂದು ಸಂಪ್ರದಾಯ, ಒಂದೊಂದು ತಿಂಡಿ ತಿನಿಸು. ಆಚರಣೆಗಳಲ್ಲೂ ದೀಪಾವಳಿ ವಿಶಿಷ್ಟವಾಗಿದೆ. ದೀಪಾವಳಿ ಆಚರಣೆ ಪರಿಸರದ ಜೊತೆ ಬೆಸೆದುಕೊಂಡಿದೆ. ಹೇಗೆ ಏನು ಎತ್ತ ಕುತೂಹಲವಾಯಿತೇ? ಇಲ್ಲಿದೆ ನೋಡಿ ಫೋಟೋ ಸ್ಟೋರಿ!

ಮಲೆನಾಡ ಭಾಗದಲ್ಲಿ ದೀಪಾವಳಿಯಂದು ಆಕಳನ್ನು ಅಲಂಕರಿಸುತ್ತಾರೆ. ಅಡಿಕೆಯ ಸರ ತೊಡಿಸಿ ಪೂಜಿಸುತ್ತಾರೆ. ಜೊತೆಗೆ ಹುಲಿಯಪ್ಪನ ಪೂಜೆ ಮಾಡುತ್ತಾರೆ! ಹುಲಿಯಪ್ಪ ಎಂದರೆ ಕಾಡಿನಲ್ಲಿರುವ ಹುಲಿ. ಹುಲ್ಲು ಮೇಯಲು ಸಾಕಿದ ಆಕಳನ್ನು ಹೊರಗೆ ಬಿಟ್ಟಾಗ ತಿನ್ನದೇ ಕಾಪಾಡು ಎಂದು ಹುಲಿಯ ಬಳಿಯೇ ಪ್ರಾರ್ಥಿಸುತ್ತಾರೆ!

ಗುರಿಗಾಯಿ ಎಂಬ ವಿಶಿಷ್ಟ ಆಟ! 40 ಅಡಿ ದೂರದಲ್ಲಿ ಸುಲಿದ ತೆಂಗಿನಕಾಯಿ ಇಡುತ್ತಾರೆ. ಸ್ಪರ್ಧಾಳುಗಳು ಕಲ್ಲುಗಳಿಂದ ಅದನ್ನು ಹೊಡೆದು ಒಡೆಯಬೇಕು. ಪ್ರತಿ ಕಲ್ಲಿಗೂ ದರ ನಿಗದಿ ಮಾಡಲಾಗುತ್ತದೆ. ಗೆದ್ದವರಿಗೆ ಬಹುಮಾನವಾಗಿ ಒಡೆದ ಕಾಯನ್ನೇ ನೀಡಲಾಗುತ್ತದೆ ಎಂದು ಶಿರಸಿಯ ಸೌಮ್ಯಾ ಭಟ್ ವಿವರಿಸಿದರು.

“ವರ್ಕ್ ಫ್ರಾಮ್ ಹೋಮ್ ನೀಡಿರುವದರಿಂದ ದೀಪಾವಳಿಯ ಸಾಂಪ್ರದಾಯಿಕ ಆಚರಣೆಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಹುಲಿಯಪ್ಪನ ಪೂಜೆ, ಗುರಿಕಾಯಿ ಆಟಗಳು ಬಾಲ್ಯವನ್ನು ನೆನಪಿಸುತ್ತವೆ.” -ಸೌಮ್ಯಾ ಭಟ್, ಶಿರಸಿ

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್