
ಬೆಂಗಳೂರು: ಹಾಲ್‌ಟಿಕೆಟ್ ಇದ್ದರೂ ಪರೀಕ್ಷಾ ಕೇಂದ್ರದಲ್ಲಿ ನಂಬರ್ ಇಲ್ಲದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರದಾಡಿದ ಪರಿಸ್ಥಿತಿ ಫ್ರೇಜರ್ಟೌನ್ನ ಪರೀಕ್ಷಾ ಕೇಂದ್ರ ಒಂದರಲ್ಲಿ ನಡೆಯಿತು.
ಪರೀಕ್ಷೆ ಬರೆಯಲು ಹಾಜರಾಗಿದ್ದ ಇಬ್ಬರು ವಿದ್ಯಾರ್ಥಿನಿಯರ ಬಳಿ ಹಾಲ್‌ಟಿಕೆಟ್ ಇದ್ರೂ ಪರೀಕ್ಷಾ ಕೇಂದ್ರದಲ್ಲಿ ಅವರ ನಂಬರ್ ನಮೂದಿಸಲಾಗಿರಲಿಲ್ಲ. ಜೊತೆಗೆ ವಿದ್ಯಾರ್ಥಿಗಳಿಗೆ ಸಹಕಾರ ನೀಡದ ಸಿಬ್ಬಂದಿ ಪರೀಕ್ಷಾ ಕೇಂದ್ರದಲ್ಲಿ ನಿಮ್ಮ ನಂಬರ್ ಇಲ್ಲ, ನಿಮ್ಮ ಶಿಕ್ಷಕರನ್ನು ಕರೆದುಕೊಂಡು ಬನ್ನೆ ಎಂದು ಹೇಳಿ ಸುಮ್ಮನಾದರಂತೆ. ಇದರಿಂದ ಮತ್ತಷ್ಟು ಹೆದರಿಕೊಂಡ ವಿದ್ಯಾರ್ಥಿನಿಯರಿಗೆ ದಿಕ್ಕು ತೋಚದೆ ಕಣ್ಣೀರು ಹಾಕುವ ಸ್ಥಿತಿ ಎದುರಾಯಿತು.
Published On - 9:44 am, Thu, 25 June 20