ದೀಪಾವಳಿಯನ್ನ ಕತ್ತಲೆಯಲ್ಲಿಯೇ ಕಳೆದಿದ್ದ ಸಾರಿಗೆ ಸಿಬ್ಬಂದಿಗೆ ಸಂಕ್ರಾಂತಿ ಹಬ್ಬಕ್ಕೂ ಇಲ್ಲ ಸಂಬಳ

|

Updated on: Jan 13, 2021 | 7:53 AM

ಮಹಾಮಾರಿ ಕೊರೊನಾ ಬರೋಕಿಂತ ಹಿಂದೆ 1ನೇ ತಾರೀಖಿಗೆ ಕಚೇರಿ ಸಿಬ್ಬಂದಿಗೆಲ್ಲರಿಗೂ ಸಂಬಳ ಆಗ್ತಿತ್ತಂತೆ. ಆದ್ರೆ ಈಗ ಜನವರಿ 13 ಆದ್ರೂ ಸಾರಿಗೆ ಇಲಾಖೆ ಸಿಬ್ಬಂದಿಗೆ ವೇತನ ನೀಡಿಲ್ಲ.

ದೀಪಾವಳಿಯನ್ನ ಕತ್ತಲೆಯಲ್ಲಿಯೇ ಕಳೆದಿದ್ದ ಸಾರಿಗೆ ಸಿಬ್ಬಂದಿಗೆ ಸಂಕ್ರಾಂತಿ ಹಬ್ಬಕ್ಕೂ ಇಲ್ಲ ಸಂಬಳ
ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆಗೆ ಒಪ್ಪಿಗೆ ನೀಡಿದ ರಾಜ್ಯ ಸರ್ಕಾರ
Follow us on

ಬೆಂಗಳೂರು: ದೀಪಾವಳಿಯನ್ನ ಕತ್ತಲೆಯಲ್ಲಿಯೇ ಕಳೆದಿದ್ದಾಯ್ತು. ಇದೀಗ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಸರದಿ. ಆದ್ರೆ ಈ ಹಬ್ಬಕ್ಕೂ ಸಾರಿಗೆ ನೌಕರರಿಗೆ ಸಂಬಳದ ಭಾಗ್ಯ ಇಲ್ಲ. ಜನವರಿ 13 ಆದ್ರೂ ಸಾರಿಗೆ ಇಲಾಖೆ ಸಿಬ್ಬಂದಿಗೆ ವೇತನ ನೀಡಿಲ್ಲವಂತೆ.

ಮಹಾಮಾರಿ ಕೊರೊನಾ ಬರೋಕಿಂತ ಹಿಂದೆ 1ನೇ ತಾರೀಖಿಗೆ ಕಚೇರಿ ಸಿಬ್ಬಂದಿಗೆಲ್ಲರಿಗೂ ಸಂಬಳ ಆಗ್ತಿತ್ತಂತೆ. 4ನೇ ತಾರೀಖಿಗೆ ಡಿಪೋ ಮೆಕ್ಯಾನಿಕ್‌, ಸಿಬ್ಬಂದಿಗೆ ಹಾಗೂ 7ನೇ ತಾರೀಖಿಗೆ ಡ್ರೈವರ್, ಕಂಡಕ್ಟರ್ಸ್‌ಗೆ ವೇತನವಾಗ್ತಿತ್ತು. ಆದ್ರೆ ಕೊವಿಡ್ ಸೋಂಕು ಬಂದ ಬಳಿಕ ಈ ಶಿಸ್ತು ತಪ್ಪಿಹೋಗಿದೆ. ದೀಪಾವಳಿಯಲ್ಲೂ ವೇತನವಿಲ್ಲದೆ ಸಿಬ್ಬಂದಿ ಹಬ್ಬ ಆಚರಿಸಿದ್ದರು. ಈಗ ಸಂಕ್ರಾಂತಿ ಹಬ್ಬ ಬಂದರೂ ವೇತನವಾಗಿಲ್ಲ.

KSRTCಯಲ್ಲಿ 38 ಸಾವಿರ ನೌಕರರಿದ್ದಾರೆ. BMTCಯಲ್ಲಿ 36 ಸಾವಿರ ನೌಕರರು ಕಾರ್ಯ ನಿರ್ವಹಿಸ್ತಿದ್ದಾರೆ. ಈಶಾನ್ಯ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ನೌಕರರು ಸೇರಿ ಒಟ್ಟು ಒಂದು ಲಕ್ಷದ ಮೂವತ್ತು ಸಾವಿರ ನೌಕರರಿದ್ದಾರೆ. ಇಷ್ಟೂ ಕುಟುಂಬಗಳು ಸಂಕ್ರಾಂತಿಗೆ ಸಂಬಳ ಇಲ್ಲದೇ ಹಬ್ಬ ಆಚರಣೆ ಮಾಡಲು ಕಷ್ಟ ಪಡುವಂತಾಗಿದೆ. ವೇತನ ನೀಡದ ಸಾರಿಗೆ ನಿಗಮಗಳ ಕ್ರಮಕ್ಕೆ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಿಬ್ಬಂದಿ ಮುಷ್ಕರ ಅಂತ್ಯ -ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ, ಯಾವುದೇ ಕ್ಷಣ ಬಸ್​ ರೈಟ್.. ರೈಟ್​!