NZ vs Pakistan ಟೆಸ್ಟ್: 431 ರನ್​ ಗಳಿಸಿದ ನ್ಯೂಜಿಲೆಂಡ್.. ಆದರೆ ಸುದ್ದಿಯಲ್ಲಿರುವುದು ಯಾವುದು ಗೊತ್ತಾ!?

|

Updated on: Dec 28, 2020 | 4:53 PM

ಆಟ ನಡೆಯುವ ವೇಳೆ ಮೈದಾನದಲ್ಲಿ ಈ ರೀತಿಯ ವರ್ತನೆಗಳು ಈ ಹಿಂದೆಯೂ ಸಹ ನಡೆದಿವೆ. 2019 ರ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್​ ನಡುವಿನ ವಿಶ್ವಕಪ್ ಫೈನಲ್‌ ಪಂದ್ಯ ನಡೆಯುವ ವೇಳೆಯಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮೈದಾನದ ತುಂಬೆಲ್ಲಾ ಓಡಾಡಿ ಸುದ್ದಿಯಾಗಿದ್ದ.

NZ vs Pakistan ಟೆಸ್ಟ್: 431 ರನ್​ ಗಳಿಸಿದ ನ್ಯೂಜಿಲೆಂಡ್.. ಆದರೆ ಸುದ್ದಿಯಲ್ಲಿರುವುದು ಯಾವುದು ಗೊತ್ತಾ!?
ಆಟದ ಸಮಯದಲ್ಲಿ ಬೆತ್ತಲೆಯಾಗಿ ಓಡಿದ ವ್ಯಕ್ತಿ
Follow us on

ವೆಲ್ಲಿಂಗ್ಟನ್: ಬೇ ಓವೆಲ್​ನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊದಲನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟ್​ ಮಾಡಿದ ನ್ಯೂಜಿಲೆಂಡ್ ತಂಡ ಕೇನ್ ವಿಲಿಯಮ್ಸನ್ ಅವರ ಅಮೋಘ ಶತಕದ ನೆರವಿನಿಂದ 431 ರನ್​ಗಳ ಭಾರಿ ಮೊತ್ತ ಕಲೆ ಹಾಗಿದೆ.

ನ್ಯೂಜಿಲೆಂಡ್​ ನೀಡಿರುವ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿರುವ ಪಾಕಿಸ್ತಾನ 143 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆದರೆ ಈ ಪಂದ್ಯ ಸುದ್ದಿಯಲ್ಲಿರುವುದು ಕೇವಲ ಈ ಕಾರಣಕ್ಕಾಗಿ ಅಲ್ಲ. ಬದಲಾಗಿ ಆಟದ ವೇಳೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮೈದಾನದ ತುಂಬೆಲ್ಲಾ ಓಡಾಡಿ, ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದಾನೆ.

ಮೊದಲನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಶತಕದ ಸನಿಹದಲ್ಲಿ ಬ್ಯಾಟ್​ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತನ್ನ ಮೈಮೇಲಿನ ಎಲ್ಲಾ ಉಡುಪುಗಳನ್ನು ಕಳಚಿದ ಯುವಕ ಪೂರ ಬೆತ್ತಲೆಯಾಗಿ ಮೈದಾನದೊಳಕ್ಕೆ ನುಗ್ಗಿದ್ದಾನೆ. ಈ ವೇಳೆ ಯುವಕನ ಹುಚ್ಚಾಟದಿಂದ ಬೆಚ್ಚಿದ ಆಟಗಾರರು ದಂಗಾಗಿ ಹೋಗಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ಸೆಕ್ಯುರಿಟಿ ಗಾರ್ಡ್‌ಗಳು ಯುವಕನನ್ನು ಹಿಡಿಯಲು ಬೆನ್ನಟ್ಟಿದ್ದಾರೆ. ಆದರೆ ಸೆಕ್ಯುರಿಟಿ ಗಾರ್ಡ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಯುವಕ ಮೈದಾನದ ತುಂಬೆಲ್ಲಾ ಓಡಾಡಿದ್ದಾನೆ. ಯುವಕನನ್ನ ಬೆನ್ನಟ್ಟಿದ ಸೆಕ್ಯುರಿಟಿ ಗಾರ್ಡ್‌ಗಳು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣದಿಂದಾಗಿ ಪಂದ್ಯ ಕೆಲ ಸಮಯ ನಿಂತು ಹೋಗಿತ್ತು. ಹಾಗಾಗಿ ಪಂದ್ಯ ನಿಗದಿತ ಸಮಯ ಮುಗಿದ ಕಾರಣ ಕೇನ್ ವಿಲಿಯಮ್ಸನ್ ಮೊದಲನೇ ದಿನದಾಟದಲ್ಲಿ ತಮ್ಮ ಶತಕ ಪೂರೈಸಲು ಸಾಧ್ಯವಾಗಲಿಲ್ಲ.

ಈಗ ಯುವಕನ ಈ ಹುಚ್ಚಾಟ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಕೆಲವು ನೆಟ್ಟಿಗರಿಗೆ ಭರಪೂರ ಮನರಂಜನೆ ನೀಡಿದರೆ.. ಇನ್ನೂ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಬೆತ್ತಲೆಯಾಗಿ ಓಡಿದ ಯುವಕನನ್ನ ಹಿಡಿದ ಸೆಕ್ಯುರಿಟಿ ಗಾರ್ಡ್‌ಗಳು ಕೋಪದಿಂದ ಆತನನ್ನು ರಭಸವಾಗಿ ನೆಲಕ್ಕೆ ತಳ್ಳಿದ್ರು. ಇದನ್ನು ಟೀಕಿಸಿರುವ ನೆಟ್ಟಿಗರು ಭದ್ರತಾಧಿಕಾರಿಗಳ ಈ ಕ್ರಮಕ್ಕೆ ತೀವ್ರ ಅಸಮಾದಾನ ಹೊರಹಾಕಿದ್ದಾರೆ.

ಇಂಡೋ- ಆಸಿಸ್​ ಪಂದ್ಯದಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡಾಡಿದ್ದ

ಈ ರೀತಿಯ ವರ್ತನೆ ಇದೇ ಮೊದಲಲ್ಲಾ..
ಆಟ ನೆಡೆಯುವ ವೇಳೆ ಮೈದಾನದಲ್ಲಿ ಈ ರೀತಿಯ ವರ್ತನೆಗಳು ಈ ಹಿಂದೆ ಸಹ ನಡೆದಿವೆ. 2019 ರ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್​ ನಡುವಿನ ವಿಶ್ವಕಪ್ ಫೈನಲ್‌ ಪಂದ್ಯ ನಡೆಯುವ ವೇಳೆಯಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮೈದಾನದ ತುಂಬೆಲ್ಲಾ ಓಡಾಡಿ ಸುದ್ದಿಯಾಗಿದ್ದ.

2008 ರ ಸಿಬಿ ಸರಣಿಯ, ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ, ಆಸ್ಟ್ರೇಲಿಯಾದ ಇನ್ನಿಂಗ್ಸ್ ಸಮಯದಲ್ಲಿ ಬೆತ್ತಲೆಯಾಗಿ ವ್ಯಕ್ತಿಯೊಬ್ಬ ಮೈದಾನದೊಳಕ್ಕೆ ನುಗಿದ್ದ. ಭದ್ರತಾ ಪಡೆಗಳು ಅವನನ್ನು ಬೆನ್ನಟ್ಟಿದರು. ಆದರೆ ಬೆತ್ತಲೆ ವ್ಯಕ್ತಿ ಆಂಡ್ರ್ಯೂ ಸೈಮಂಡ್ಸ್​ ನಿಂತಿದ್ದ ಕಡೆಗೆ ಓಡಿಹೋಗಿದ್ದ. ಆತನನ್ನು ಗಮನಿಸಿದ ಸೈಮಂಡ್ಸ್​ ತಮ್ಮ ಕೈ ಅಡ್ಡ ನೀಡಿ ಆ ವ್ಯಕ್ತಿಯನ್ನ ನೆಲಕ್ಕುರುಳಿಸಿದರು. ನಂತರ ಭದ್ರತಾ ಸಿಬ್ಬಂದಿ ಆತನನ್ನು ಕರೆದೊಯ್ದಿದ್ದರು. ಈ ಘಟನೆ ಕಂಡ ಭಾರತೀಯ ಆಟಗಾರರು ಮನಸಾರೆ ನಕ್ಕರು.

ಕ್ರೈಸ್ಟ್‌ಚರ್ಚ್‌ನಲ್ಲಿ 2015 ರಲ್ಲಿ ನಡೆದಿದ್ದ ಇಂಗ್ಲೆಂಡ್-ಸ್ಕಾಟ್‌ಲ್ಯಾಂಡ್ ವಿಶ್ವ ಕಪ್ ಪಂದ್ಯದ ಸಮಯದಲ್ಲೂ ಸಹ ಈ ರೀತಿಯ ಘಟನೆ ನಡೆದಿತ್ತು. ಸ್ಕಾಟ್ಲೆಂಡ್‌ ಆಟಗಾರನ ವಿಕೆಟ್​ ಬಿದ್ದ ಯಶಸ್ಸನ್ನು ಇಂಗ್ಲೆಂಡ್​ ವ್ಯಕ್ತಿಯೊಬ್ಬ ಈ ರೀತಿ ಸೆಲೆಬರೆಟ್​ ಮಾಡಿದ್ದ.

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಲಾರ್ಡ್ಸ್, 1996: 1996 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಸಮಯದಲ್ಲಿ, ಮಹಿಳೆಯೊಬ್ಬರು ಬೆತ್ತಲೆಯಾಗಿ ಮೈದಾನದ ತುಂಬೆಲ್ಲಾ ಓಡಾಡಿದ್ದರು.ಬೆತ್ತಲೆಯಾಗಿದ್ದ ಮಹಿಳೆಯನ್ನು ಹಿಡಿಯಲು ಸೆಕ್ಯುರಿಟಿ ಗಾರ್ಡ್​ಗಳು ಹೆಚ್ಚು ಶ್ರಮವಹಿಸಬೇಕಾಯಿತು. ಇದು ಬಹುಶಃ ಕ್ರಿಕೆಟ್ ಪಂದ್ಯವೊಂದರಲ್ಲಿ ಮಹಿಳೆಯೊಬ್ಬರು ಬೆತ್ತಲೆಯಾಗಿ ಓಡಿದ ಮೊದಲ ಘಟನೆ ಇದಾಗಿದೆ.

ಹೀಗೆ ಹಲವು ಬಾರಿ ಪಂದ್ಯ ವೀಕ್ಷಿಸಲು ಬಂದ ಪ್ರೇಕ್ಷಕರು ತಮ್ಮ ತಂಡ ಯಶಸ್ಸು ಪಡೆದಾಗ ಅಥವಾ ಪಂದ್ಯದಲ್ಲಿ ಸೋತಾಗ ತಮ್ಮ ಪ್ರತಿಕ್ರಿಯೆಯನ್ನು ಹೀಗೆ ವಿಚಿತ್ರ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಪಂದ್ಯದಲ್ಲಿ ಬೆತ್ತಲೆಯಾಗಿ ಮೈದಾನದಲ್ಲಿ ಓಡಿದ ಮಹಿಳೆ

Published On - 3:38 pm, Mon, 28 December 20