ನಿವೃತ್ತರಾಗುತ್ತಿರುವ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ಗೆ ಸರ್ಕಾರದ ವತಿಯಿಂದ ಸನ್ಮಾನ; ಯಡಿಯೂರಪ್ಪರಿಂದ ಶ್ಲಾಘನೆ
ಹಿಂದಿನ ಸಿಎಸ್ ರತ್ನಪ್ರಭಾ ನಿವೃತ್ತಿಯ ನಂತರ 2018ರ ಜೂನ್ನಲ್ಲಿ ವಿಜಯ ಭಾಸ್ಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1983ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದು, ಅವರನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇಡೀ ಸಚಿವ ಸಂಪುಟದ ಪರವಾಗಿ ಸನ್ಮಾನಿಸಿದರು.
ಹಿಂದಿನ ಸಿಎಸ್ ರತ್ನಪ್ರಭಾ ನಿವೃತ್ತಿಯ ನಂತರ 2018ರ ಜೂನ್ನಲ್ಲಿ ವಿಜಯ ಭಾಸ್ಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1983ನೇ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ.. ಇವರು ಸಿಎಸ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ 64 ಸಚಿವ ಸಂಪುಟ ಸಭೆಗಳನ್ನು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯಭಾಸ್ಕರ್ರನ್ನು ಶ್ಲಾಘಿಸಿದರು. ಇಡೀ ಸರ್ಕಾರದ ಪರವಾಗಿ ಶಾಲು ಹೊದೆಸಿ, ಸ್ಮರಣಿಕೆ ಕೊಟ್ಟು ಸನ್ಮಾನಿಸಿದರು.
Published On - 3:07 pm, Mon, 28 December 20