ರಾಯಚೂರು ನಗರಸಭೆಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ರಾಯಚೂರು ನಗರಸಭೆಗೆ ಬರೋಬ್ಬರಿ 30 ಕೋಟಿಗೂ ಹೆಚ್ಚು ಹಣ ಮೋಸವಾಗಿದೆ ಎಂಬ ಆರೋಪ ಕೇಳಿಬಂದಿದೆ. ನಗರಸಭೆ ವ್ಯಾಪ್ತಿಯ ಆಸ್ತಿಗಳಿಗೆ ಈ ಖಾತೆ ಮಾಡಿಕೊಡುವ ನೆಪದಲ್ಲಿ ನಗರದ ವಿವಿಧೆಡೆ ಸರ್ಕಾರಿ ಭೂಮಿಯಲ್ಲಿ ಗುಡಿಸಲು, ಶೆಡ್ ಹಾಕೊಂಡಿದ್ದವರಿಗೂ ಈ ಖಾತೆ ಕೊಟ್ಟು ಅಕ್ರಮ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಇನ್ನು ರಾಯಚೂರು ಜಿಲ್ಲಾ ನಗರಾಭಿವೃದ್ಧಿ ಕೋಶ ನಡೆಸಿರುವ ತನಿಖೆಯಲ್ಲಿ ಅಕ್ರಮ ಬಯಲಾಗಿತ್ತು. ಹೀಗಾಗಿ ಅಕ್ರಮದಲ್ಲಿ ಶಾಮೀಲಾದ ಹಿಂದಿನ ಪೌರಾಯುಕ್ತ ಮತ್ತು ನಗರಸಭೆ ಸಿಬ್ಬಂದಿ ವಿರುದ್ಧ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿಗಳು ರಾಯಚೂರಿನ ಸದರಬಜಾರ್ ಠಾಣೆಗೆ ದೂರನ್ನು ಕೂಡ ಸಲ್ಲಿಸಿದ್ದರು. ಆದ್ರೆ ದೂರು ಸಲ್ಲಿಸಿ ತಿಂಗಳಾದ್ರೂ ಎಫ್ಐಆರ್ ದಾಖಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಈ ಬಗ್ಗೆ ರಾಯಚೂರು ಎಸ್ಪಿರನ್ನ ಕೇಳಿದ್ರೆ, ಈ ದೂರಿಗೆ ಸಂಬಂಧಪಟ್ಟಂತೆ ದಾಖಲೆಗಳು, ಅಡಿಟ್ ವರದಿ ನೀಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತೆ ಅಂತಿದ್ದಾರೆ. ಒಟ್ನಲ್ಲಿ ಕೋಟಿ ಕೋಟಿ ಅಕ್ರಮದ ಆರೋಪ ಕೇಳಿ ಬಂದಿರೋ ಹಿನ್ನೆಲೆಯಲ್ಲಿ ಈಗಲಾದ್ರೂ ಸಂಬಂಧಪಟ್ಟವ್ರು ಅಲರ್ಟ್ ಆಗಬೇಕಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಇದನ್ನೂ ಓದಿ: ರಾಯಚೂರು ನಗರಸಭೆ ಚುನಾವಣೆಯಲ್ಲಿ ಕುರುಡು ಕಾಂಚಾಣ, ವಿನಯ್ ಕುಮಾರ್ ವಿರುದ್ಧ ಆರೋಪ