ದಾವಣಗೆರೆ: ಮಹಾರಾಷ್ಟದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ದೇಶದ ಡೆಡ್ಲಿ ಡೈರಿಯಲ್ಲಿ ಮಹಾರಾಷ್ಟ ಮೊದಲ ಸ್ಥಾನವನ್ನ ಪಡೆದಿದೆ. ಕೊರೊನಾ ಹಾಟ್‌ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಜೀವನ ಮಾಡೋದು ಬಹಳ ಕಷ್ಟವಾಗಿದೆ. ಅಲ್ಲದೇ ಕೊರೊನಾ ಆತಂಕ ಬೇರೆ. ಹೀಗಾಗಿ ಮಾಹಾರಾಷ್ಟ್ರದಲ್ಲಿ ವಾಸವಿದ್ದ ದಾವಣಗೆರೆ ಮೂಲದ ಮಹಿಳೆ ಮೂರು ವರ್ಷದ ಮಗು ಜೊತೆ ಈ ತಿಂಗಳ 7 ರಂದು ದಾವಣಗೆರೆಗೆ ಬಂದಿದ್ರೂ. ಬಂದವರೇ ನೇರವಾಗಿ ಅವರು ದಾವಣಗೆರೆ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಹೋಗಿದ್ರು. ಅಲ್ಲಿ ತಾಯಿ ಮತ್ತು ಮಗುವಿನ ಗಂಟಲು ದ್ರವ ಸಂಗ್ರಹಿಸಲಾಯಿತ್ತು. ವರದಿ ಬರುವ ತನಕ ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕು ಎಂದು ವೈದ್ಯರು ಹೇಳಿ ಕಳುಹಿಸಿದರು.
ನಂತರ 7ನೇ ತಾರೀಕಿನಂದು ತಾಯಿಗೆ ನೆಗೆಟಿವ್ ಬಂದಿದೆ, ಮಗುವಿಗೆ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಇಡಿ ಕುಟುಂಬ ಆತಂಕಗೊಂಡಿತ್ತು. ತಾಯಿ ಮಗುವನ್ನ ಕರೆದುಕೊಂಡು ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಹೋದ್ರು. ಅಲ್ಲಿ ಜನರಲ್ ವಾರ್ಡ್ನಲ್ಲಿ ಮಗುವನ್ನ ಇಡಲಾಗಿತ್ತು. ಇದಾದ ಎರಡು ದಿನಗಳಲ್ಲಿ ಅಂದ್ರೆ 10 ತಾರೀಕಿನಂದು ಮಗುವನ್ನ ಕರೆದುಕೊಂಡು ಹೋಗಲು ಹೇಳಿದರು. ವರದಿಯಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಇಲ್ಲಾ ಎಂದು ಬಂದಿದೆ. ಆದ್ರೂ ಕುಟುಂಬಸ್ಥರ ಮನೆಯ ಬಳಿ ಬ್ಯಾರಿಕೇಡ್ ಹಾಕಿ ಹಿಂಸೆ ನೀಡುತ್ತಿದ್ದಾರಂತೆ.
ಬೆಂಗಳೂರಿನಿಂದ ಬಂದ ವರದಿಯಲ್ಲೂ ಮುಗುವಿಗೆ ಯಾವುದೇ ಕೊರೊನಾ ಲಕ್ಷಣ ಇಲ್ಲ ಎಂದು ಬಂದಿದೆ ಇನ್ನು ಮುಗುವಿಗೆ ಕೊರೊನಾ ಬಂದಿದೆ ಅನ್ನೋದಕ್ಕೆ ಸಾಕ್ಷಿಯಾಗಿ ಮೊಬೈಲ್‌ಗೆ ಮ್ಯಾಸೇಜ್ ಬಂದಿಲ್ಲ. ಅಷ್ಟೇ ಅಲ್ಲ ಮಗುವಿನ ಹೆಸರು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಸೋಂಕಿತರ ಪಟ್ಟಿಯಲ್ಲಿ ಇಲ್ಲ. ಜೊತೆಗೆ ಆಸ್ಪತ್ರೆಯಿಂದ ಬಿಡುಗಡೆ ಆದವರ ಪಟ್ಟಿಯಲ್ಲೂ ಮುಗುವಿನ ಹೆಸರು ಇಲ್ಲಾ. ಆದ್ರೆ ಕೊವಿಡ್ ಆಸ್ಪತ್ರೆ ಸಿಬ್ಬಂದಿ ಮಾತ್ರ ಪಾಸಿಟಿವ್ ಎಂದು ಆ್ಯಂಬುಲೆನ್ಸ್ ಮೂಲಕ ಚಿಕ್ಕವನ್ನ ಮಗುವನ್ನ ಕರೆದುಕೊಂಡು ಹೋಗಿದ್ದಾರೆ. ನಂತರ ಕರೆದುಕೊಂಡು ಹೋಗಲು ಹೇಳಿದ್ದಾರೆ. ಆದ್ರೆ ಮಗುವಿಗೆ ಕೊರೊನಾ ಇಲ್ಲದಿದ್ದರೂ ಯಾಕೆ ಕೆರೆದುಕೊಂಡು ಹೋದ್ರೂ ಅನ್ನೋದೆ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.
ಈ ಪ್ರಕರಣದಲ್ಲಿ ಯಾರದ್ದು ಎಡವಟ್ಟು ಅನ್ನೋದನ್ನ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಈ ಗೊಂದಲದ ಪ್ರಕರಣಕ್ಕೆ ಅಂತ್ಯ ಹಾಡಬೇಕಿದೆ.
Published On - 7:18 am, Tue, 21 July 20