ಅಧಿಕಾರಿಗಳಿಗೆ ಮನುಷ್ಯತ್ವವೇ ಇಲ್ವಾ? ಕ್ವಾರಂಟೈನಿಗಳಿಗೆ ಹಳಸಿದ ಅನ್ನ ನೀಡೋದಾ..

| Updated By: ಸಾಧು ಶ್ರೀನಾಥ್​

Updated on: Jul 07, 2020 | 12:15 PM

ಬಾಗಲಕೋಟೆ: ರಾಜ್ಯ ಸರ್ಕಾರ ಕೊರೊನಾ ವಿರುದ್ಧ ಇನ್ನಿಲ್ಲದ ಹೋರಾಟ ಮಾಡ್ತಿದ್ರೆ, ಬಾಗಲಕೋಟೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಅಧಿಕಾರಿಗಳು ಮಾನವಿಯತೇಯನ್ನೇ ಮರೆತು ಕ್ವಾರಂಟೈನ್‌ನಲ್ಲಿರೋರಿಗೆ ಹಳಸಿದ ಅನ್ನ ನೀಡಿದ ಅಮಾನವೀಯ ಘಟನೆ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮೂಗನೂರಿನ 30ಗ್ರಾಮಸ್ಥರನ್ನ ಹುನಗುಂದ ಪಟ್ಟಣದ ಆರ್‌ಎಮ್‌ಎಸ್‌ಎ ಶಾಲೆಯ ಕ್ವಾರಂಟೈನ್‌ ಕೇಂದ್ರಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಆದ್ರೆ ಇಲ್ಲಿನ ಅಧಿಕಾರಿಗಳು ಕ್ವಾರಂಟೈನ್‌ನಲ್ಲಿರೋರಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ನೀಡುತ್ತಿಲ್ಲ. ಪ್ರತಿ ದಿನವೂ ಮಧ್ಯಾಹ್ನದ ಊಟವನ್ನ ಸಂಜೆ ನಾಲ್ಕು ಗಂಟೆಯ ಸಮಯಕ್ಕೆ ನೀಡುತ್ತಿದ್ದಾರೆ. ಹಳಸಿದ ಅನ್ನಕ್ಕೆ […]

ಅಧಿಕಾರಿಗಳಿಗೆ ಮನುಷ್ಯತ್ವವೇ ಇಲ್ವಾ? ಕ್ವಾರಂಟೈನಿಗಳಿಗೆ ಹಳಸಿದ ಅನ್ನ ನೀಡೋದಾ..
Follow us on

ಬಾಗಲಕೋಟೆ: ರಾಜ್ಯ ಸರ್ಕಾರ ಕೊರೊನಾ ವಿರುದ್ಧ ಇನ್ನಿಲ್ಲದ ಹೋರಾಟ ಮಾಡ್ತಿದ್ರೆ, ಬಾಗಲಕೋಟೆಯ ಕ್ವಾರಂಟೈನ್‌ ಕೇಂದ್ರದಲ್ಲಿ ಅಧಿಕಾರಿಗಳು ಮಾನವಿಯತೇಯನ್ನೇ ಮರೆತು ಕ್ವಾರಂಟೈನ್‌ನಲ್ಲಿರೋರಿಗೆ ಹಳಸಿದ ಅನ್ನ ನೀಡಿದ ಅಮಾನವೀಯ ಘಟನೆ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಮೂಗನೂರಿನ 30ಗ್ರಾಮಸ್ಥರನ್ನ ಹುನಗುಂದ ಪಟ್ಟಣದ ಆರ್‌ಎಮ್‌ಎಸ್‌ಎ ಶಾಲೆಯ ಕ್ವಾರಂಟೈನ್‌ ಕೇಂದ್ರಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಆದ್ರೆ ಇಲ್ಲಿನ ಅಧಿಕಾರಿಗಳು ಕ್ವಾರಂಟೈನ್‌ನಲ್ಲಿರೋರಿಗೆ ಸಮಯಕ್ಕೆ ಸರಿಯಾಗಿ ಊಟ ತಿಂಡಿ ನೀಡುತ್ತಿಲ್ಲ. ಪ್ರತಿ ದಿನವೂ ಮಧ್ಯಾಹ್ನದ ಊಟವನ್ನ ಸಂಜೆ ನಾಲ್ಕು ಗಂಟೆಯ ಸಮಯಕ್ಕೆ ನೀಡುತ್ತಿದ್ದಾರೆ.

ಹಳಸಿದ ಅನ್ನಕ್ಕೆ ವಗ್ಗರಣೆ
ಇದಲ್ಲೆಕ್ಕಿಂತಲೂ ಹೇಯ ಕೃತ್ಯ ಅಂದ್ರೆ ಇಲ್ಲಿನ ಜನರಿಗೆ ಅಧಿಕಾರಿಗಳು ಹಳಸಿದ ಅನ್ನವನ್ನ ನೀಡುತ್ತಿರೋದು. ಹಳಸಿದ ಅನ್ನಕ್ಕೆ ವಗ್ಗರಣೆ ಹಾಕಿ ಅದನ್ನೇ ಕ್ವಾರಂಟೈನಿಗಳಿಗೆ ತಿನ್ನಲು ಕೊಡುತ್ತಿದ್ದಾರೆ. ಬೇರೆ ದಾರಿ ಕಾಣದೆ ಹಸಿವಿನಿಂದ ಅನಿವಾರ್ಯವಾಗಿ ಗ್ರಾಮಸ್ಥರು ಇದೇ ಹಳಸಿದ ಅನ್ನವನ್ನೇ ತಿನ್ನುತ್ತಿದ್ದಾರೆ. ಇನ್ನು ತಹಸಿಲ್ದಾರ್‌ ಅವರಂತೂ ಒಮ್ಮೆಯೂ ಇತ್ತ ಬಂದಿಲ್ಲ ಇದು ಕ್ವಾರಂಟೈನ್‌ನಲ್ಲಿರೋರಿಗೆ ಆಕ್ರೋಶ ತರಿಸಿದೆ.

Published On - 11:58 am, Tue, 7 July 20