ವ್ಯವಹಾರ ವಿಚಾರಕ್ಕೆ ಶುರುವಾದ ಗಲಾಟೆ ಸಾವಿನಲ್ಲಿ ಅಂತ್ಯ, ಎಲ್ಲಿ?
ಉಡುಪಿ: ವ್ಯವಹಾರ ವಿಚಾರದಲ್ಲಿ ಶುರುವಾದ ಜಗಳದಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಮಾಡಿರುವ ಘಟನೆ ಪಟ್ಟಣದ ಲಕ್ಷ್ಮೀನಗರದಲ್ಲಿ ನಡೆದಿದೆ. ಕೊಲೆಯಾದ ಯುವಕ 28 ವರ್ಷದ ಯೋಗೀಶ್ ಎಂದು ತಿಳಿದುಬಂದಿದೆ. ಯೋಗೀಶ್ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿದ್ದರು. ನಿನ್ನೆ ತಡರಾತ್ರಿ ನಡೆದ ಘಟನೆಯಲ್ಲಿ ಐವರು ಜನರ ಗುಂಪೊಂದು ಯೋಗೀಶ್ ಜೊತೆಗೆ ವ್ಯವಹಾರದ ವಿಚಾರವಾಗಿ ಗಲಾಟೆ ಆರಂಭಿಸಿತ್ತಂತೆ. ಈ ಮಧ್ಯೆ ಈ ಐವರು ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಸ್ಥಳೀಯರು ಯೋಗೀಶ್ನನ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ […]
ಉಡುಪಿ: ವ್ಯವಹಾರ ವಿಚಾರದಲ್ಲಿ ಶುರುವಾದ ಜಗಳದಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಕೊಲೆಮಾಡಿರುವ ಘಟನೆ ಪಟ್ಟಣದ ಲಕ್ಷ್ಮೀನಗರದಲ್ಲಿ ನಡೆದಿದೆ. ಕೊಲೆಯಾದ ಯುವಕ 28 ವರ್ಷದ ಯೋಗೀಶ್ ಎಂದು ತಿಳಿದುಬಂದಿದೆ. ಯೋಗೀಶ್ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿದ್ದರು.
ನಿನ್ನೆ ತಡರಾತ್ರಿ ನಡೆದ ಘಟನೆಯಲ್ಲಿ ಐವರು ಜನರ ಗುಂಪೊಂದು ಯೋಗೀಶ್ ಜೊತೆಗೆ ವ್ಯವಹಾರದ ವಿಚಾರವಾಗಿ ಗಲಾಟೆ ಆರಂಭಿಸಿತ್ತಂತೆ. ಈ ಮಧ್ಯೆ ಈ ಐವರು ಯುವಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಸ್ಥಳೀಯರು ಯೋಗೀಶ್ನನ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಚಿಕಿತ್ಸೆ ಫಲಿಸದೆ ಯೋಗೀಶ್ ಇಂದು ಸಾವನ್ನಪ್ಪಿದ್ದಾರೆ. ಇನ್ನು ಘಟನೆ ಸಂಬಂಧಪಟ್ಟಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಪೊಲೀಸರು ಮುಂದಾಗಿದ್ದಾರೆ.