ಬೆಂಗಳೂರು: ರಾಜ್ಯದಲ್ಲಿ ಸಂಡೇ ಲಾಕ್ ಡೌನ್ ಇದ್ದರೂ ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಜನರು ಹರಿದು ಬರುತ್ತಿದ್ದು, ಅವರನ್ನು ರಾಜ್ಯ ಗಡಿಯಲ್ಲಿಯೇ ವಾಪಸ್ ಕಳಿಸಲಾಗುತ್ತಿದೆ.
ಹೌದು ಸಂಡೇ ಲಾಕ್ ಡೌನ್ ಇದ್ದರೂ ಸಹ ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ತಮಿಳರು ರಾಜ್ಯದ ಕಡೆಗೆ ಬರ್ತಾ ಇದ್ದಾರೆ. ಹೀಗಾಗಿ ಲಾಕ್‌ಡೌನ್ ಇರೋದ್ರಿಂದ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡದೇ ಅವರನ್ನ ಗಡಿಯಲ್ಲಿಯೇ ವಾಪಸ್ ಕಳಿಸಲಾಗುತ್ತಿದೆ.
ಕೆಲವರು ತಮ್ಮ ಬಳಿ ಇ-ಪಾಸ್ ಇದೆ ಎಂದು ಬರ್ತಾ ಇದ್ದಾರೆ. ಆವರನ್ನು ಕೂಡಾ ಇ ಪಾಸ್ ಇದ್ದರೂ ಸಹ ಸಂಡೇ ಲಾಕ್ ಡೌನ್ ಹಿನ್ನಲೆಯಲ್ಲಿ ಅಧಿಕಾರಿಗಳು ಒಳ ಪ್ರವೇಶಿಸಲು ಬಿಡುತ್ತಿಲ್ಲ. ಕೇವಲ ವೈದ್ಯಕೀಯ ತುರ್ತುಪರಿಸ್ಥಿತಿ ಇದ್ದವರಿಗೆ ಮಾತ್ರ ಒಳ ಬಿಡಲಾಗ್ತಾ ಇದೆ. ಇನ್ನುಳಿದಂತೆ ಇತರರನ್ನು ಮತ್ತೆ ತಮಿಳುನಾಡಿಗೆ ವಾಪಸ್ ಕಳಿಸಲಾಗುತ್ತಿದೆ.
Published On - 12:58 pm, Sun, 26 July 20