ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ: ಒಳ್ಳೆಯದೋ, ಕೆಟ್ಟದ್ದೋ ದೇವರು ತೀರ್ಮಾನ ಮಾಡ್ತಾರೆ ಎಂದ ರೇವಣ್ಣ

HD Revanna | ರಮೇಶ್ ಜಾರಕಿಹೊಳಿ‌ ನಾಯಕ ಸಮುದಾಯದಲ್ಲಿ‌ ಕಷ್ಟಪಟ್ಟು ಬೆಳೆದ ನಾಯಕ. ಹಾಗಾಗಿ ಧೈರ್ಯವಾಗಿರು, ಹೆದರಬೇಡಾ ಎಂದು ಹೇಳಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಹೇಳಿದ್ದೇವೆ ಎಂದು ಹೆಚ್​ಡಿ ರೇವಣ್ಣ ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ: ಒಳ್ಳೆಯದೋ, ಕೆಟ್ಟದ್ದೋ ದೇವರು ತೀರ್ಮಾನ ಮಾಡ್ತಾರೆ ಎಂದ ರೇವಣ್ಣ
ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ: ಒಳ್ಳೆಯದೋ, ಕೆಟ್ಟದ್ದೋ ದೇವರು ತೀರ್ಮಾನ ಮಾಡ್ತಾರೆ ಎಂದ ರೇವಣ್ಣ
Edited By:

Updated on: Mar 12, 2021 | 3:31 PM

ಹಾಸನ: ಇತ್ತೀಚೆಗೆ ಸಿಡಿ ಬಿಡುಗಡೆ ಬಳಿಕ‌ ಜೆಡಿಎಸ್ ನಾಯಕ ರೇವಣ್ಣ ಮೊದಲು ನನಗೆ ಫೋನ್ ಮಾಡಿದ್ದರು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ‌ಗೆ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಜಾರಕಿಹೊಳಿ‌ ನಾಯಕ ಸಮುದಾಯದಲ್ಲಿ‌ ಕಷ್ಟಪಟ್ಟು ಬೆಳೆದ ನಾಯಕ. ಹಾಗಾಗಿ ಧೈರ್ಯವಾಗಿರು, ಹೆದರಬೇಡಾ ಎಂದು ಹೇಳಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಹೇಳಿದ್ದೇವೆ ಎಂದು ಹೆಚ್​ಡಿ ರೇವಣ್ಣ ತಿಳಿಸಿದ್ದಾರೆ.

ಇಲ್ಲಿ ಪಕ್ಷ ಮುಖ್ಯ ಅಲ್ಲ, ಒಳ್ಳೆಯದೋ ಕೆಟ್ಟದ್ದೋ ದೇವರು ತೀರ್ಮಾನ ಮಾಡ್ತಾರೆ. ನೋವಲ್ಲಿರೋ‌ ವ್ಯಕ್ತಿಗೆ ಧೈರ್ಯವಾಗಿರು ಎಂದು ಹೇಳಿದ್ರೆ ತಪ್ಪೇನಿದೆ? ನೋವಿನಲ್ಲಿರೊ ಮನುಷ್ಯನಿಗೆ ಧೈರ್ಯ ಹೇಳೋದು ಧರ್ಮ ಅಲ್ಲವೇ? ರಾಜಕೀಯ ಬರುತ್ತೆ, ಹೋಗುತ್ತದೆ. ಎಲ್ಲವನ್ನೂ ರಾಜಕೀಯ ಕ್ಕೆ ಬಳಸಿಕೊಳ್ಳಬಾರದು ಎಂದು ಮಾಜಿ ಸಚಿವ ರೇವಣ್ಣ ಹಾಸನದಲ್ಲಿ ಮಾರ್ಮಿಕವಾಗಿ ಹೇಳಿದ್ದಾರೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ: ಓರ್ವನನ್ನು ವಶಕ್ಕೆ ಪಡೆದ ಎಸ್​ಐಟಿ

Published On - 3:27 pm, Fri, 12 March 21