60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ?; ಮೋದಿಗೆ ಅಧಿಕಾರ ನೆತ್ತಿಗೇರಿದೆ -ಸಿದ್ದರಾಮಯ್ಯ

|

Updated on: Jan 26, 2021 | 4:33 PM

60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ? ಸುಪ್ರೀಂ ಕೋರ್ಟ್​ನವರೇ ಆ 3ಕಾಯ್ದೆಗಳಿಗೆ ಸ್ಟೇ ಕೊಟ್ಟಿದ್ದಾರೆ. ಆ ಕಾಯ್ದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ?; ಮೋದಿಗೆ ಅಧಿಕಾರ ನೆತ್ತಿಗೇರಿದೆ -ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Follow us on

ಬೀದರ್: ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಎಂದು ಜಿಲ್ಲೆಯ ಹುಮ್ನಾಬಾದ್​ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರೈತರು ತಮ್ಮ ಹೋರಾಟದ ಬಗ್ಗೆ ಮೊದಲೇ ಸೂಚನೆ ನೀಡಿದ್ದರು. ಹಾಗಾಗಿ, ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಜನರ ಮೂಲಭೂತ ಹಕ್ಕು ಎಂದು ಸಿದ್ದರಾಮಯ್ಯ ಹೇಳಿದರು.

2 ತಿಂಗಳಿನಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ರೈತರ ಸಮಸ್ಯೆ ಇವತ್ತಿನವರೆಗೂ ಬಗೆಹರಿದಿಲ್ಲ. 11 ಸುತ್ತಿನ ಮಾತುಕತೆ ನಡೆದಿದೆ. ಕೇಂದ್ರದವರು ಕಾಟಾಚಾರಕ್ಕೆ ಮಾತುಕತೆಗೆ ಕರೆದಿದ್ದರು. 60 ದಿನ ಚಳುವಳಿ ಮಾಡೋಕೆ ರೈತರಿಗೆ ಹುಚ್ಚು ಹಿಡಿದಿದೆಯಾ? ಸುಪ್ರೀಂ ಕೋರ್ಟ್​ನವರೇ ಆ 3ಕಾಯ್ದೆಗಳಿಗೆ ಸ್ಟೇ ಕೊಟ್ಟಿದ್ದಾರೆ. ಆ ಕಾಯ್ದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದು ಸಿದ್ದರಾಮಯ್ಯ ಹೇಳಿದರು.

‘ಮೋದಿ ಹಠ ಮಾಡ್ತಿದಾರೆ, ಅಧಿಕಾರ ಅವರ ನೆತ್ತಿಗೇರಿದೆ’
ಮೋದಿ ಹಠ ಮಾಡ್ತಿದಾರೆ, ಅಧಿಕಾರ ಅವರ ನೆತ್ತಿಗೇರಿದೆ. ಇದು ಸರ್ವಾಧಿಕಾರದ ಲಕ್ಷಣ. ಸೈನ್ಯ ಮತ್ತು ಪೊಲೀಸರ ಮೂಲಕ ರೈತರ ಚಳುವಳಿ ಹತ್ತಿಕ್ಕುವುದನ್ನು ಜನ ಸಹಿಸುವುದಿಲ್ಲ. ಬಿಜೆಪಿಯವರಿಗೆ ಇದು ತಿರುಗುಬಾಣವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

‘ಬಿ.ಸಿ ಪಾಟೀಲ್​ನಂತವರು ಸಚಿವರಾಗಿರುವುದು ಈ ದೇಶದ ದುರ್ದೈವ’
ಪ್ರತಿಭಟನಾಕಾರರು ಭಯೋತ್ಪಾದಕರು, ಕಾಂಗ್ರೆಸ್​ನವರು ಎಂಬ ಸಚಿವ ಬಿ.ಸಿ ಪಾಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಸಂವಿಧಾನ ಗೊತ್ತಿಲ್ಲದವರು ಈ ಥರ ಮಾತನಾಡುತ್ತಾರೆ. ಬಿ.ಸಿ. ಪಾಟೀಲ್​ನಂತವರು ಸಚಿವರಾಗಿರುವುದು ಈ ದೇಶದ ದುರ್ದೈವ. ಸಚಿವ ಬಿ.ಸಿ ಪಾಟೀಲ್ ಸಂವಿಧಾನ ಓದಿಕೊಳ್ಳಲಿ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದರು.

 

ದೆಹಲಿಯಲ್ಲಿ ಧರಣಿ ಮಾಡುವ ರೈತರು ಭಯೋತ್ಪಾದಕರು, ಇವರಿಗೆ ಪಾಕ್​ ಬೆಂಬಲ ಇದೆ: ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಿತ ಹೇಳಿಕೆ