ಗದಗ:ಮೂರ್ಛೆ ಹೋಗುವ ಔಷಧಿ ಸಿಂಪಡಿಸಿ ರಾತ್ರೋರಾತ್ರಿ 35ಕ್ಕೂ ಹೆಚ್ಚು ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ಗದಗದ ಜಿಲ್ಲೆಯಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ಗಾಳಪ್ಪ ಗುಡಿಸಲಮನಿ ಎಂಬುವವರಿಗೆ ಸೇರಿದ 35 ಹೆಚ್ಚು ಕುರಿಗಳನ್ನು ಮಧ್ಯರಾತ್ರಿ ದುಷ್ಕರ್ಮಿಗಳು ಮೂರ್ಛೆ ಹೋಗುವ ಔಷಧಿ ಸಿಂಪಡಿಸಿ ಕಳ್ಳತನ ಮಾಡಿದ್ದಾರೆ.
ಮೇಕೆಗಳ ಮಾಲೀಕರ ಮನೆ ಗ್ರಾಮದ ಹೊರವಲಯದಲ್ಲಿರುವುದರಿಂದ ಕಳ್ಳರಿಗೆ ಮೇಕೆಗಳನ್ನು ಕದ್ದು ಪರಾರಿಯಾಗಲು ಸುಲಭವಾಗಿದ್ದು, ಸದ್ಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.