ಬೆಂಗಳೂರು: ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಗೂಂಡಾಗಿರಿ ಪ್ರಕರಣ ಸಂಬಂಧ ಗಲಾಟೆ ತಡೆಯಲು ಹೋದ ಸ್ಥಳೀಯರ ಮೇಲೂ ಹಲ್ಲೆ ಮಾಡಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ. ಆದ್ರೆ ನಿನ್ನೆ ಗಲಾಟೆ ಮಾಡಿದವರು ನಮ್ಮ ಏರಿಯಾದವರು ಅಲ್ಲ. ಪಕ್ಕದ ಏರಿಯಾದ ಪುಂಡರು ಬಂದು ಇಲ್ಲಿ ಗಲಾಟೆ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಲಾಟೆ ತಡೆಯಲು ಹೋದಾಗ ಪುಂಡರು ನಮ್ಮ ಮೇಲೂ ಹಲ್ಲೆ ಮಾಡಿದ್ದಾರೆ. ಅವರು ನಮ್ಮ ಏರಿಯಾದ ಹೆಸರನ್ನೇ ಹಾಳು ಮಾಡಿದ್ದಾರೆ. ಪೊಲೀಸರು ಅವರ ಕುಟುಂಬವನ್ನು ಬಿಟ್ಟು ನಮ್ಮ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಗಲಾಟೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಮನೆಯಲ್ಲಿ ತಿನ್ನೋಕ್ಕೆ ಅನ್ನ ಇಲ್ದೆ ಬೀದಿಗೆ ಬಿದ್ದಿರುವ ಪುಂಡರು ಗಲಾಟೆ ಮಾಡಿದ್ದಾರೆ ಎಂದು ಟಿವಿ9ಗೆ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.