ಬೆಂಗಳೂರು: ಪಾದರಾಯನಪುರದಲ್ಲಿ ಗೂಂಡಾಗಿರಿ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಘಟನೆ ನಡೆದ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಯಾರೇ ಆಗಲಿ ಅವರನ್ನು ಕ್ವಾರಂಟೈನ್‌ಗೆ ಶಿಫ್ಟ್ ಮಾಡಿ.
ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಬಹಳ ಕಠೋರವಾದ, ಕಠಿಣವಾದ ಕ್ರಮ ಕೈಗೊಳ್ಳಿ. ನಿರ್ದಾಕ್ಷಿಣ್ಯವಾದ ಕ್ರಮ ಕೈಗೊಳ್ಳಲು ಹಿಂಜರಿಯಬೇಡಿ ಎಂದು ಪೊಲೀಸರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.
ಈ ವೇಳೆ ಡಿಸಿಪಿ ರಮೇಶ್ ಬಾನೋತ್‌ಗೆ ಬಸವರಾಜ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು. ರೀ ರಮೇಶ್ ಸ್ವಲ್ಪ ಸರಿಯಾಗಿ ಕೆಲಸ ಮಾಡಿ. ಯಾಕೆ ನೀವು ನಿನ್ನೆ ಘಟನಾ ಸ್ಥಳಕ್ಕೆ ಬರಲಿಲ್ಲ. ಕೊರೊನಾ ಬಿಟ್ಟರೆ ನಿಮಗೆ ಬೇರೆ ಕೆಲಸ ಏನಿದೆ ಎಂದು ಗ್ರಹ ಸಚಿವರು ಪ್ರಶ್ನಿಸಿದ್ದಾರೆ. ನಿನ್ನೆ ಹಿರಿಯ ಅಧಿಕಾರಿಗಳು ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಕ್ಲಾಸ್ ತೆಗೆದುಕೊಂಡರು.
Published On - 10:29 am, Mon, 20 April 20