ಬೆಂಗಳೂರು: ಕೊರೊನಾ ವರದಿಯ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳ ಮೊಂಡುತನ ಮುಂದುವರೆದಿದೆ. ಕೊರೊನಾ ಟೆಸ್ಟ್ ಮಾಡಿಸಿ ಏಳು ದಿನ ಕಳೆದರೂ ರಿಪೋರ್ಟ್ ನೀಡದೆ ಸತಾಯಿಸುತ್ತಿರುವ ಪ್ರಸಂಗ ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ನೆಡೆದಿದೆ.
ರಿಪೋರ್ಟ್ ಬಗ್ಗೆ ವಿಚಾರಿಸಿದರೆ ನಿಮಗೆ ಇಷ್ಟೊಂದು ಅರ್ಜೆಂಟ್ ಆಗಿ ವರದಿ ಯಾಕೆ ಬೇಕು ಎಂದು ಆಸ್ಪತ್ರೆ ಸಿಬ್ಬಂದಿಯೇ ರಾಕೇಶ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರಂತೆ. ಇದರಿಂದ ಭಯಭೀತಗೊಂಡಿರುವ ರಾಜೇಶ್, ಸೋಂಕು ತಗುಲುವ ಭೀತಿಯಲ್ಲೆ ಜೀವನ ನೆಡೆಸುವಂತ್ತಾಗಿದೆ. ಈ ಬಗ್ಗೆ ಟಿವಿ9 ಸುಗುಣ ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದರೆ, ಅವರಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾವು ಅದನ್ನು ಪರಿಶೀಲನೆ ಮಾಡುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.