ಆ್ಯಡಮ್ ಪಾಷಾ.. ಪುರುಷರ ಜೈಲಿಗೋ ಅಥವಾ ಮಹಿಳಾ ಜೈಲಿಗೋ: ಎದುರಾಯ್ತು ‘ದೊಡ್ಡ ಸಮಸ್ಯೆ’!?
ಅನಿಕಾ ಜೊತೆಗಿನ ಡ್ರಗ್ಸ್ ಲಿಂಕ್ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾದ ಬಿಗ್ ಬಾಸ್ ಖ್ಯಾತಿಯ ಆ್ಯಡಮ್ ಪಾಷಾ ವಿಷಯದಲ್ಲಿ ಅಲ್ಲಿನ ಜೈಲಾಧಿಕಾರಿ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಬುಧವಾರ ಆ್ಯಡಮ್ ಪಾಷಾನನ್ನು ನ್ಯಾಯಾಂಗ ಬಂಧನಕ್ಕೆ (ಜೆಸಿ) ಒಪ್ಪಿಸಿತು. ಅದರಂತೆ ಆ್ಯಡಮ್ ಪಾಷಾನನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡುವಾಗ ದೊಡ್ಡ ಡ್ರಾಮಾ ನಡೆದಿದೆ. ಆರೋಪಿ ಪಾಷಾನನ್ನು ಯಾವ ಸೆಲ್ಗೆ ಹಾಕಬೇಕು ಅಂತಾ ಆಳವಾದ ಚರ್ಚೆ ನಡೆಯಿತು. ಆ್ಯಡಮ್ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ ನಾನು […]

ಅನಿಕಾ ಜೊತೆಗಿನ ಡ್ರಗ್ಸ್ ಲಿಂಕ್ನಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾದ ಬಿಗ್ ಬಾಸ್ ಖ್ಯಾತಿಯ ಆ್ಯಡಮ್ ಪಾಷಾ ವಿಷಯದಲ್ಲಿ ಅಲ್ಲಿನ ಜೈಲಾಧಿಕಾರಿ ಸಮಸ್ಯೆಯೊಂದನ್ನು ಎದುರಿಸುವಂತಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಬುಧವಾರ ಆ್ಯಡಮ್ ಪಾಷಾನನ್ನು ನ್ಯಾಯಾಂಗ ಬಂಧನಕ್ಕೆ (ಜೆಸಿ) ಒಪ್ಪಿಸಿತು. ಅದರಂತೆ ಆ್ಯಡಮ್ ಪಾಷಾನನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡುವಾಗ ದೊಡ್ಡ ಡ್ರಾಮಾ ನಡೆದಿದೆ. ಆರೋಪಿ ಪಾಷಾನನ್ನು ಯಾವ ಸೆಲ್ಗೆ ಹಾಕಬೇಕು ಅಂತಾ ಆಳವಾದ ಚರ್ಚೆ ನಡೆಯಿತು.
ಆ್ಯಡಮ್ ನಾನು ಲಿಂಗ ಪರಿವರ್ತನೆಯಾಗಿಲ್ಲ. ನಾನು ಗಂಡು. ಆದರೆ ನಾನು ಯುವತಿಯರ ವಸ್ತ್ರಗಳನ್ನು ಧರಿಸುತ್ತೇನೆ ಅಷ್ಟೆ..! ಕಾರಣ ನಾನೊಬ್ಬ ಡ್ರ್ಯಾಗ್ ಕ್ವೀನ್ ಅಂತಾ ಪಾಷಾ ಜೈಲಾಧಿಕಾರಿ ತಿಳಿಸಿದ್ದಾನೆ.
ಆದ್ರೆ ಪಾಷಾನನ್ನು ಗಂಡು ಕೈದಿಗಳ ಸೆಲ್ಗೆ ಹಾಕೋದಾ..? ಇಲ್ಲಾ ಪಾಷಾನನ್ನು ಹೆಣ್ಣು ಕೈದಿಗಳ ಸೆಲ್ಗೆ ಹಾಕೋದಾ..? ಎಂದು ಕೆಲ ಕಾಲ ಜೈಲು ಅಧಿಕಾರಿಗಳು ಗೊಂದಕ್ಕಿಡಾದರು. ಈ ಮಧ್ಯೆ, ಸದ್ಯ ಜೈಲಿನಲ್ಲಿ ಆತನನ್ನು ಮಂಗಳಮುಖಿಯರ ಸೆಲ್ಗೆ ಹಾಕೋದು ಕಷ್ಟ ಎಂದೂ ತರ್ಕಿಸಲಾಯಿತು.
ಅದಕ್ಕೂ ಆ್ಯಡಮ್ ಪಾಷಾ ನಾನು ಮಂಗಳಮುಖಿಯಲ್ಲ ಅಂತಾ ಮಾಹಿತಿ ಒದಗಿಸಿದ್ದಾನೆ. ಕೊನೆಗೆ ಆ್ಯಡಮ್ ಪಾಷಾನನ್ನು ಪ್ರತ್ಯೇಕ ಸೆಲ್ಗೆ ಹಾಕಿ, ಜೈಲು ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದುಬಂದಿದೆ.
Published On - 2:19 pm, Thu, 22 October 20




