ರಸ್ತೆ ದಾಟುವ ವೇಳೆ ಟಿಪ್ಪರ್ ಲಾರಿ ಬಡಿದು ಪಾದಚಾರಿ ಯುವಕ ಸ್ಥಳದಲ್ಲೇ ದುರ್ಮರಣ

ಹೊಸಕೋಟೆ: ಟಿಪ್ಪರ್ ಲಾರಿ ಹರಿದು ಪಾದಚಾರಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ. ಮೇಡಹಳ್ಳಿ ನಿವಾಸಿ ಸಂಜು(24) ಮೃತ ದುರ್ದೈವಿ. ಅಪಘಾತದ ಬಳಿಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ಕೊಟ್ಟು, ಪರಿಶೀಲನೆ ನಡೆಸಿದರು.

ರಸ್ತೆ ದಾಟುವ ವೇಳೆ ಟಿಪ್ಪರ್ ಲಾರಿ ಬಡಿದು ಪಾದಚಾರಿ ಯುವಕ ಸ್ಥಳದಲ್ಲೇ ದುರ್ಮರಣ
Edited By:

Updated on: Oct 31, 2020 | 9:59 AM

ಹೊಸಕೋಟೆ: ಟಿಪ್ಪರ್ ಲಾರಿ ಹರಿದು ಪಾದಚಾರಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ. ಮೇಡಹಳ್ಳಿ ನಿವಾಸಿ ಸಂಜು(24) ಮೃತ ದುರ್ದೈವಿ.

ಅಪಘಾತದ ಬಳಿಕ ಸ್ಥಳದಲ್ಲೇ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ಕೊಟ್ಟು, ಪರಿಶೀಲನೆ ನಡೆಸಿದರು.