ಆ ಕಡೆ ಮದ್ಯಕ್ಕಾಗಿ ಸಾಲು, ಪಕ್ಕದಲ್ಲೇ ಕುಡಿಯುವ ನೀರಿಗೂ ಸಾಲು! ಎಲ್ಲಿ?

|

Updated on: May 04, 2020 | 2:20 PM

ಬೆಂಗಳೂರು: ಮದ್ಯದಂಗಡಿಗಳು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ರಾತ್ರೋ ರಾತ್ರಿ ಕಿಲೋಮೀಟರ್ ಗಟ್ಟಲೆ ಮದ್ಯಪ್ರಿಯರು ಕ್ಯೂನಿಂತ ದೃಶ್ಯಗಳನ್ನು ನೀವು ಸಾಮಾನ್ಯವಾಗಿ ನೋಡಿದ್ದೀರಿ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಆ ದೃಶ್ಯಗಳು ವೈರಲ್ ಆಗಿವೆ. ಆದರೆ ಮದ್ಯದ ಮಧ್ಯೆಯು ಜನ ಇಲ್ಲಿಯೂ ಕ್ಯೂ ನಿಂತಿದ್ದಾರೆ. ಆದರೆ ಅವರು ನಿಂತಿರುವುದು ಮದ್ಯ ಖರೀದಿಗಾಗಿ ಅಲ್ಲ ನೀರಿಗಾಗಿ. ಬಿರು ಬಿಸಿಲು ಲೆಕ್ಕಿಸದೆ ಎಣ್ಣೆ ಪ್ರಿಯರು ಬಾರ್ ಮುಂದೆ ನಿಂತಿದ್ದಾರೆ. ಸಾಮಾಜಿಕ ಅಂತರವೇ ಇಲ್ಲದೇ ಮದ್ಯಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಬಳೆಪೇಟೆಯಲ್ಲಿ […]

ಆ ಕಡೆ ಮದ್ಯಕ್ಕಾಗಿ ಸಾಲು, ಪಕ್ಕದಲ್ಲೇ ಕುಡಿಯುವ ನೀರಿಗೂ ಸಾಲು! ಎಲ್ಲಿ?
Follow us on

ಬೆಂಗಳೂರು: ಮದ್ಯದಂಗಡಿಗಳು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ರಾತ್ರೋ ರಾತ್ರಿ ಕಿಲೋಮೀಟರ್ ಗಟ್ಟಲೆ ಮದ್ಯಪ್ರಿಯರು ಕ್ಯೂನಿಂತ ದೃಶ್ಯಗಳನ್ನು ನೀವು ಸಾಮಾನ್ಯವಾಗಿ ನೋಡಿದ್ದೀರಿ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಆ ದೃಶ್ಯಗಳು ವೈರಲ್ ಆಗಿವೆ. ಆದರೆ ಮದ್ಯದ ಮಧ್ಯೆಯು ಜನ ಇಲ್ಲಿಯೂ ಕ್ಯೂ ನಿಂತಿದ್ದಾರೆ. ಆದರೆ ಅವರು ನಿಂತಿರುವುದು ಮದ್ಯ ಖರೀದಿಗಾಗಿ ಅಲ್ಲ ನೀರಿಗಾಗಿ.

ಬಿರು ಬಿಸಿಲು ಲೆಕ್ಕಿಸದೆ ಎಣ್ಣೆ ಪ್ರಿಯರು ಬಾರ್ ಮುಂದೆ ನಿಂತಿದ್ದಾರೆ. ಸಾಮಾಜಿಕ ಅಂತರವೇ ಇಲ್ಲದೇ ಮದ್ಯಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಬಳೆಪೇಟೆಯಲ್ಲಿ ಎಲ್ಲಾ ಅಂಗಡಿಗಳು ಓಪನ್ ಆಗಿರುವ ಕಾರಣ ಕುಡಿಯುವ ನೀರಿಗಾಗಿ ಜನ ಕ್ಯಾನ್​ಗಳನ್ನ ಹಿಡಿದು ನಿಂತಿದ್ದಾರೆ. ಬಳೆಪೇಟೆಯಲ್ಲಿ ಒಂದು ಕಡೆ ಮದ್ಯಕ್ಕಾಗಿ ಜನರ ಸರತಿ ಸಾಲು ಮತ್ತೊಂದು ಕಡೆ ಕುಡಿಯುವ ನೀರಿಗಾಗಿ ಸಾಲುಗಟ್ಟಿರೋ ಜನರ ದೃಶ್ಯ ಕಂಡುಬಂತ್ತು.

Published On - 2:06 pm, Mon, 4 May 20