ಬೆಂಗಳೂರು: ದೀಪಾವಳಿ ಬಂದರೆ ಸಾಕು ವ್ಯಾಪಾರಿ ಹಾಗೂ ವರ್ತಕರಿಗೆ ಹೊಸ ಲೆಕ್ಕದ ಪುಸ್ತಕ ಕೊಳ್ಳುವ ಸಮಯ. ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ತಮ್ಮ ಮೇಲೆ ಸದಾ ಇರಲಿ ಎಂದು ವರ್ತಕರು ಅಂದಿನ ದಿನ ಹೊಸ ಲೆಕ್ಕದ ಪುಸ್ತಕವನ್ನು ಖರೀದಿಸಿ ದೇವಿಯ ಮುಂದೆ ಪೂಜೆಗೆ ಇಡುತ್ತಾರೆ. ನಂತರ ಅದರಲ್ಲಿ, ಮುಂದಿನ ಹಣಕಾಸು ವರ್ಷದ ಲೆಕ್ಕಾಚಾರವನ್ನು ಬರೆಯುತ್ತಾರೆ.
ಹಾಗಾಗಿ, ಇಲ್ಲಿ ಲೆಕ್ಕದ ಪುಸ್ತಕ ಖರೀದಿಗೆ ಜನಜಂಗುಳಿಯೇ ಕಂಡುಬಂತು. ಕಳೆದ 23 ವರ್ಷಗಳಿಂದ ಲೆಕ್ಕದ ಪುಸ್ತಕ ಮಾರಾಟ ಮಾಡುತ್ತಿರುವ ಷಾ ಜಸ್ರಾಜ್ ಜೈನ್ ಅಂಗಡಿ ಎದುರು ಜನ ಪುಸ್ತಕ ಖರೀದಿಸಲು ಇಂದು ಬೆಳಗ್ಗೆಯಿಂದ ಸಾಲುಗಟ್ಟಿರುವುದು ಕಂಡುಬಂತು.
ಅಂದ ಹಾಗೆ, ಇಂದು ಸಂಜೆ 4.30 ರಿಂದ 7 ಗಂಟೆಯವರೆಗೆ ಬಹಳ ಒಳ್ಳೆಯ ಸಮಯವಂತೆ. ಹಾಗಾಗಿ, ಲೆಕ್ಕದ ಪುಸ್ತಕ ಖರೀದಿಗಿ ಜನ ಮುಗ್ಗಿಬಿದ್ದರು. ದೀಪಾವಳಿಯ ಲಕ್ಷ್ಮೀ ಪೂಜೆಗೆ ಇಲ್ಲಿ ಖರೀದಿ ಮಾಡುವ ಲೆಕ್ಕದ ಪುಸ್ತಕವನ್ನಿಟ್ಟು ಪೂಜೆ ಮಾಡಿದ್ರೆ ಅದೃಷ್ಟ ಒಲಿಯುತ್ತಂತೆ. ಹೀಗಾಗಿ, ಬೇರೆ ಬೇರೆ ಜಿಲ್ಲೆಗಳಿಂದಲೂ ಇಲ್ಲಿ ಲೆಕ್ಕದ ಪುಸ್ತಕ ಖರೀದಿ ಮಾಡಲು ವ್ಯಾಪಾರಿಗಳು ಬಂದಿದ್ದಾರೆ.
Published On - 5:04 pm, Thu, 12 November 20