ಅರ್ನಾಬ್ ಗೋಸ್ವಾಮಿ ಒಪ್ಪಂದಕ್ಕೂ ಮೊದಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಮುಂಬೈ ಡಿಸೈನರ್!
ಮುಂಬೈ: ಅನ್ವಯ್ ನಾಯಕ್ ಅವರ ಸಾವಿಗೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇನ್ನಿತರ ಇಬ್ಬರು ವ್ಯಕ್ತಿಗಳು ಕಾರಣ ಎನ್ನುವಂತಹ ಮಾತು ಕೇಳಿ ಬಂದಿದ್ದು, ಈ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರ್ನಬ್ ಜೊತೆ ವ್ಯವಹಾರ ಮಾಡುವ ಮೊದಲೇ ಅನ್ವಯ್ ನಾಯಕ್ ಸಾಕಷ್ಟು ನಷ್ಟ ಅನುಭವಿಸಿದ್ದರು. ಅನ್ವಯ್ ನಾಯಕ್ ಹಲವು ವರ್ಷಗಳಿಂದಲೇ ತಮ್ಮ ವ್ಯವಹಾರದಲ್ಲಿ ಸಾಕಷ್ಟು ಸೋಲನ್ನು ಕಂಡಿದ್ದು, ಕೋಟಿಗಟ್ಟಲೇ ನಷ್ಟವನ್ನು ಅನುಭವಿಸಿರುವುದು ನಿಧಾನವಾಗಿ ಬೆಳಕಿಗೆ ಬಂದಿದೆ. ಈ ಮಾಹಿತಿ ಹೊರ ಬಂದ […]
ಮುಂಬೈ: ಅನ್ವಯ್ ನಾಯಕ್ ಅವರ ಸಾವಿಗೆ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಇನ್ನಿತರ ಇಬ್ಬರು ವ್ಯಕ್ತಿಗಳು ಕಾರಣ ಎನ್ನುವಂತಹ ಮಾತು ಕೇಳಿ ಬಂದಿದ್ದು, ಈ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರ್ನಬ್ ಜೊತೆ ವ್ಯವಹಾರ ಮಾಡುವ ಮೊದಲೇ ಅನ್ವಯ್ ನಾಯಕ್ ಸಾಕಷ್ಟು ನಷ್ಟ ಅನುಭವಿಸಿದ್ದರು. ಅನ್ವಯ್ ನಾಯಕ್ ಹಲವು ವರ್ಷಗಳಿಂದಲೇ ತಮ್ಮ ವ್ಯವಹಾರದಲ್ಲಿ ಸಾಕಷ್ಟು ಸೋಲನ್ನು ಕಂಡಿದ್ದು, ಕೋಟಿಗಟ್ಟಲೇ ನಷ್ಟವನ್ನು ಅನುಭವಿಸಿರುವುದು ನಿಧಾನವಾಗಿ ಬೆಳಕಿಗೆ ಬಂದಿದೆ. ಈ ಮಾಹಿತಿ ಹೊರ ಬಂದ ಹಿನ್ನೆಲೆಯಲ್ಲಿ ಅಸಲಿಗೆ ನಾಯಕ್ ಅವರ ಸಾವಿಗೆ ಕಾರಣ ಯಾರಿರಬಹುದು ಎಂಬ ಗೊಂದಲ ಈಗ ಎದುರಾಗಿದೆ.
ಬುಧವಾರ ಸುಪ್ರೀಂ ಕೋರ್ಟಿನಿಂದ ತಾತ್ಕಾಲಿಕ ಜಾಮೀನು ಪಡೆದು ಹೊರ ಬಂದಿರುವ ರಿಪಬ್ಲಿಕ್ ಟಿವಿ ಸಂಪಾದಕ ಆರ್ನಬ್ ಗೋಸ್ವಾಮಿ, ನೀತೀಶ್ ಸರ್ದಾ ಮತ್ತು ಫೀರೋಜ್ ಶೇಖ್ ಅವರುಗಳ ಹೆಸರು ಈ ಆತ್ಮಹತ್ಯೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಇದರಿಂದಾಗಿ, ಗೋಸ್ವಾಮಿ ಅವರಿಗೆ ಸ್ವಲ್ಪ ಮುಖಭಂಗವಾಗಿತ್ತು.
ನಾಯಕ್ ಅವರ ಕಂಪೆನಿ ಜೊತೆ ಗೋಸ್ವಾಮಿ ವ್ಯವಹಾರ ಪ್ರಾರಂಭಿಸಿದ್ದು 2016 ನಂತರ. ಆದರೆ ಆ ಹೊತ್ತಿಗಾಗಲೇ, ನಾಯಕ್ ಅವರ ಕಂಪೆನಿ ಕಾನ್ಕಾರ್ಡ್ ಸಾಲವು ಕೂಡ ಸುಮಾರು 20 ಕೋಟಿ ರೂ. ಗೆ ಹತ್ತಿರದಲ್ಲಿತ್ತು ಮತ್ತು ತೆರಿಗೆ ಅಧಿಕಾರಿಗಳೊಂದಿಗೆ ಹಲವಾರು ವಿವಾದಗಳನ್ನು ಹೊಂದಿತ್ತು ಎನ್ನುವುದು ತಿಳಿದು ಬಂದಿದೆ.
ನಾಯಕ್ಗೆ ನಷ್ಟ ತಂದ ಓಂ ಅಥರ್ವಾದಲ್ಲಿನ 25 % ಷೇರುಗಳು: 2006ರಲ್ಲಿ, ಈ ಮೊದಲು ಕಾನ್ಕಾರ್ಡ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ನಾಯಕ್ ಓಂ ಅಥರ್ವಾ ರಿಯಾಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಮತ್ತೊಂದು ಕಂಪನಿಯೊಂದಿಗೆ ತನ್ನನ್ನು ತೊಡಗಿಸಿಕೊಂಡರು. ನಂತರ 2012ರ ವೇಳೆಗೆ, ಓಂ ಅಥರ್ವಾ ಕಂಪನಿ ಯಾವುದೇ ಆದಾಯವಿಲ್ಲ ಎಂದು ಘೋಷಣೆ ಮಾಡಿತು.
ಆಗ ಓಂ ಅಥವಾ ಕಂಪನಿಯ ವ್ಯವಹಾರಕ್ಕೆ ಸಂಬಂಧಪಟ್ಟಂತೆ ನಾಯಕ್ ಶೇ. 25ರಷ್ಟು ಷೇರುಗಳನ್ನು ಹೊಂದಿದ್ದರು. 2012ರವರೆಗೆ ಅನ್ವಯ್ ನಾಯಕ್, ಓಂ ಅಥರ್ವಾ ರಿಯಾಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ನಿರ್ಮಾಣ ಸಂಸ್ಥೆಯಲ್ಲಿ ನಿರ್ದೇಶಕರು ಮತ್ತು ಷೇರುದಾರರಾಗಿದ್ದರು. ಆಗ ಕಂಪನಿಯ ನಷ್ಟದೊಂದಿಗೆ ನಾಯಕ್ ಕೂಡ ನಷ್ಟವನ್ನು ಹೊಂದಿದ್ದಾರೆ ಎನ್ನುವುದು ಗಮನಿಸಬೇಕಾದ ವಿಚಾರ. ಆಗ ಆ ಕಂಪೆನಿಯನ್ನು ಕಂಪೆನಿ ರಿಜಿಸ್ಟ್ರಾರ್ ಪಟ್ಟಿಯಿಂದ ಈ ಸಂಸ್ಥೆಯನ್ನು ತೆಗೆದುಹಾಕಲಾಗಿದೆ.
ಆದರೆ ಇದಕ್ಕೆ ಸಂಬಂಧಪಟ್ಟಂತೆ ಅನ್ವಯ್ ನಾಯಕ್ ಅವರ ವಕೀಲರಾದ ವೈಭವ್ ಕಾರ್ನಿಕ್ ಹೇಳೋದೇ ಬೇರೆ. ‘ಅನ್ವಯ್ ನಾಯಕ್ ಅವರು ತಮ್ಮ ವ್ಯವಹಾರದಲ್ಲಿ ಲಾಭ ನಷ್ಟ ಕಂಡಿದ್ದಿರಬಹುದು ಹಾಗೂ ತಮ್ಮ ವ್ಯವಹಾರದ ಕಾರಣದಿಂದಾಗಿ ನಷ್ಟವನ್ನು ಎದುರಿಸಿದ್ದಿರಬಹುದು. ಆದರೆ ಅವರು ಈ ಎಲ್ಲಾ ಒತ್ತಡಗಳಿಂದ ಹೊರಬಂದಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಒತ್ತಡ ಹೇರಲು ಒಂದು ಏಕೈಕ ಪ್ರಯತ್ನ ನಡೆದಿತ್ತು ಎಂಬುದರ ಕುರಿತು ನಮ್ಮಲ್ಲಿ ಪುರಾವೆಗಳಿವೆ’ ಎಂದು ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ಪರವಾಗಿ ರಾಯಗಡ್ ಅಧೀಕ್ಷಕ ಅಶೋಕ್ ದುಧೆ ಹೇಳಿಕೆ ನೀಡಿದ್ದು, ‘ ನಾವು ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ, ಹಾಗಾಗಿ ಈ ಬಗ್ಗೆ ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಸುಮಾರು 20 ಕೋಟಿ ರೂ ವ್ಯವಹಾರ: ಮುಂಬೈನ ಬಾಂಬೆ ಡೈಯಿಂಗ್ ಮಿಲ್ ಕಾಂಪೌಂಡ್ ನಲ್ಲಿ ಪ್ರಾರಂಭವಾಗಬೇಕಿದ್ದ ತಮ್ಮ ಕಚೇರಿಯ ವಿನ್ಯಾಸಕ್ಕಾಗಿ ರಿಪಬ್ಲಿಕ್ ಟಿವಿಯನ್ನು ಹೊಂದಿರುವ ಎ ಆರ್ ಟಿ ಔಟ್ ಲೇಯರ್ ಮೀಡಿಯಾ ನಾಯಕ್ದೊಂ ಅವರ ಕಂಪೆನಿ ಜೊತೆ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಈ ಮಧ್ಯೆ ಮೌಲ್ಯವರ್ಧಿತ ತೆರಿಗೆ, ಕೇಂದ್ರ ಮಾರಾಟ ತೆರಿಗೆ ಮತ್ತು ಆದಾಯ ತೆರಿಗೆ ಸೇರಿದಂತೆ 9.74 ಕೋಟಿ ರೂ.ಗಳ ಪಾವತಿಗೆ ಸಂಬಂಧಿಸಿದಂತೆ ಕಾನ್ಕಾರ್ಡ್ ಡಿಸೈನ್ಸ್ ಸಂಸ್ಥೆಯ ಮೇಲೆ ಕನಿಷ್ಠ ಏಳು ವಿವಾದಗಳು ಬಾಕಿ ಇರುವುದು ಈಗ ಹೊರಬಂದಿದೆ.
ಈ ಎಲ್ಲಾ ವಿಷಯವನ್ನು ಗಮನಿಸಿದಾಗ ನಾಯಕ್ ಆತ್ಮಹತ್ಯೆಗೆ ಬೆಲ್ ಮೇಲೆ ಹೊರ ಬಂದಿರುವ ಅರ್ನಾಬ್ ಗೋಸ್ವಾಮಿ ನಿಜವಾದ ಕಾರಣಕರ್ತರು ಹೌದೋ ಅಲ್ಲವೋ ಎನ್ನುವುದು ತೀವ್ರ ಚರ್ಚೆಗೆ ಗುರಿಯಾಗಿದ್ದು, ಸಾವಿಗೆ ಗೋಸ್ವಾಮಿ ಕಾರಣ ಅಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.