ಆರ್ಥಿಕ ಹಿಂಜರಿತ ತಡೆಯಲು ಕೇಂದ್ರದಿಂದ ಹೊಸ ಪ್ಯಾಕೇಜ್ ಘೋಷಣೆ!

ದೆಹಲಿ: ಕೊವಿಡ್ ಸಂಕಷ್ಟದಿಂದ ಆರ್ಥಿಕ ಹಿಂಜರಿತ ಎದುರಿಸುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರ ಹೊಸ ಪ್ಯಾಕೇಜ್​ಗಳನ್ನು ಘೋಷಿಸಿದೆ. ಗ್ರಾಹಕ ಬೇಡಿಕೆ ಹೆಚ್ಚಳಕ್ಕೆ LTC (ವಾರ್ಷಿಕ ಪ್ರವಾಸ ಭತ್ಯೆ) ಕಡಿತಗೊಳಿಸಿ, ಆ ಹಣವನ್ನು ಮಾರುಕಟ್ಟೆ ವಿನಿಯೋಗಕ್ಕೆ ಬಳಸಲು ಪ್ರೋತ್ಸಾಹ ನೀಡಲಾಗಿದೆ. ಈ ಮೊದಲು ಕಡಿತಗೊಳಿಸಲಾಗಿದ್ದ, ಸ್ಪೆಷಲ್ ಫೆಸ್ಟಿವಲ್ ಅಡ್ವಾನ್ಸ್ ಯೋಜನೆಯನ್ನೂ ಸಹ ಸದ್ಯದ ಅವಧಿಗೆ ಪುನರಾರಂಭಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಾಹ್ನ 12.30ಕ್ಕೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಿದರು. ಗ್ರಾಹಕ ಬೇಡಿಕೆ ಹೆಚ್ಚಳಕ್ಕೆ ಸರ್ಕಾರದ ಸೂತ್ರ ಪೂರೈಕೆ ನಿರ್ಬಂಧಗಳು ಸಡಿಲಗೊಂಡಿದ್ದರೂ ಗ್ರಾಹಕರ […]

ಆರ್ಥಿಕ ಹಿಂಜರಿತ ತಡೆಯಲು ಕೇಂದ್ರದಿಂದ ಹೊಸ ಪ್ಯಾಕೇಜ್ ಘೋಷಣೆ!
Follow us
KUSHAL V
|

Updated on: Nov 12, 2020 | 3:53 PM

ದೆಹಲಿ: ಕೊವಿಡ್ ಸಂಕಷ್ಟದಿಂದ ಆರ್ಥಿಕ ಹಿಂಜರಿತ ಎದುರಿಸುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರ ಹೊಸ ಪ್ಯಾಕೇಜ್​ಗಳನ್ನು ಘೋಷಿಸಿದೆ. ಗ್ರಾಹಕ ಬೇಡಿಕೆ ಹೆಚ್ಚಳಕ್ಕೆ LTC (ವಾರ್ಷಿಕ ಪ್ರವಾಸ ಭತ್ಯೆ) ಕಡಿತಗೊಳಿಸಿ, ಆ ಹಣವನ್ನು ಮಾರುಕಟ್ಟೆ ವಿನಿಯೋಗಕ್ಕೆ ಬಳಸಲು ಪ್ರೋತ್ಸಾಹ ನೀಡಲಾಗಿದೆ. ಈ ಮೊದಲು ಕಡಿತಗೊಳಿಸಲಾಗಿದ್ದ, ಸ್ಪೆಷಲ್ ಫೆಸ್ಟಿವಲ್ ಅಡ್ವಾನ್ಸ್ ಯೋಜನೆಯನ್ನೂ ಸಹ ಸದ್ಯದ ಅವಧಿಗೆ ಪುನರಾರಂಭಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಧ್ಯಾಹ್ನ 12.30ಕ್ಕೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಿದರು.

ಗ್ರಾಹಕ ಬೇಡಿಕೆ ಹೆಚ್ಚಳಕ್ಕೆ ಸರ್ಕಾರದ ಸೂತ್ರ ಪೂರೈಕೆ ನಿರ್ಬಂಧಗಳು ಸಡಿಲಗೊಂಡಿದ್ದರೂ ಗ್ರಾಹಕರ ಬೇಡಿಕೆಯಲ್ಲಿ ಹೆಚ್ಚಳವಾಗಿಲ್ಲ. ಗ್ರಾಹಕ ಬೇಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ, ಸರ್ಕಾರಿ ನೌಕರರ ಪ್ರಯಾಣ ರಿಯಾಯಿತಿ ದರವನ್ನು ಕಡಿತಗೊಳಿಸಿ, ಅದನ್ನು ಮಾರುಕಟ್ಟೆ ಖರೀದಿಗೆ ವಿನಿಯೋಗಿಸಲು ನೀಡಲಾಗಿದೆ. ಶೇಕಡಾ 12ರಷ್ಟು ಮತ್ತು ಅದಕ್ಕಿಂತ ಹೆಚ್ಚು GST ದರ ಹೊಂದಿರುವ ವಸ್ತುಗಳನ್ನು ಖರೀದಿಸಲು ಈ ಮೊತ್ತವನ್ನು ಬಳಸಬಹುದಾಗಿದೆ. ಕೊವಿಡ್ ಕಾರಣದಿಂದ ಜನರು ಪ್ರಯಾಣ ಮಾಡುವ ಅವಕಾಶ ಹೊಂದಿಲ್ಲ. ಹಾಗಾಗಿ, ಪ್ರಯಾಣ ರಿಯಾಯಿತಿಯನ್ನು, ಸರಕು ಖರೀದಿಗೆ ಬಳಸುವಂತೆ ಸರ್ಕಾರಿ ನೌಕರರನ್ನು ಪ್ರೋತ್ಸಾಹಿಸಲಾಗಿದೆ. ಇದರಿಂದ ಗ್ರಾಹಕ ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆಯನ್ನು ಸರ್ಕಾರ ತೋರಿದೆ. ಈ ಅವಕಾಶವನ್ನು ಮಾರ್ಚ್​ 31, 2021ರ ಒಳಗಾಗಿ ಬಳಕೆ ಮಾಡಿಕೊಳ್ಳುವಂತೆ ಸರ್ಕಾರಿ ನೌಕರರಿಗೆ ಸೂಚನೆ ನೀಡಲಾಗಿದೆ. ವ್ಯವಹಾರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಡಿಜಿಟಲ್ ಪಾವತಿ ಕ್ರಮ ಬಳಸುವಂತೆ ತಿಳಿಸಲಾಗಿದೆ.

ಮುಂಬರುವ ಹಬ್ಬಗಳಿಗೆ ಅಡ್ವಾನ್ಸ್ ಕೊಡುಗೆ ಈ ಮೊದಲು ಕಡಿತಗೊಳಿಸಲಾಗಿದ್ದ, ಸ್ಪೆಷಲ್ ಫೆಸ್ಟಿವಲ್ ಅಡ್ವಾನ್ಸ್ ಸ್ಕೀಮನ್ನು ಸದ್ಯದ ಅವಧಿಗೆ ಪುನರಾರಂಭಿಸಲಾಗಿದ್ದು ಬಡ್ಡಿ ರಹಿತ ಯೋಜನೆಯು ಎಲ್ಲಾ ಸ್ಥರದ ಸರ್ಕಾರಿ ನೌಕರರಿಗೆ ಅನ್ವಯವಾಗಲಿದೆ ಎಂದು ತಿಳಿಸಿದರು. ಈ ಯೋಜನೆ ಅಡಿಯಲ್ಲಿ ಮುಂಗಡ ಮೊತ್ತವನ್ನು ಹಣದ ರೂಪದಲ್ಲಿ ಪಡೆಯುವಂತಿಲ್ಲ. ಅಡ್ವಾನ್ಸ್ ದರವನ್ನು ನೇರವಾಗಿ ವ್ಯಾಪಾರ ವಹಿವಾಟಿಗೆ ಯಾವುದೇ ಅಂಗಡಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಪ್ರಧಾನಿ ಮೋದಿ ಆಶಯದಂತೆ ಈ ಯೋಜನೆಯ ಮೊತ್ತವನ್ನು ಕೂಡ ಡಿಜಿಟಲ್ ಪಾವತಿ ಕ್ರಮ ಬಳಸಿ ಪಡೆಯುವಂತೆ ತಿಳಿಸಲಾಗಿದೆ.