ಘರ್ಜಿಸಿದ ಆರ್ನಬ್, ತಮ್ಮ ಟಿವಿ ಸ್ಟುಡಿಯೋದಲ್ಲಿ ಹೊರಡಿಸಿದ ಮಹತ್ವದ ಘೋಷಣೆ.. ಏನು ಗೊತ್ತಾ?
ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಆರ್ನಬ್ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್ ಕೋರ್ಟ್ ಹಾಗೂ ಬಾಂಬೆ ಹೈಕೋರ್ಟ್ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್ಗೆ ಸದ್ಯ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ […]
ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಆರ್ನಬ್ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್ ಕೋರ್ಟ್ ಹಾಗೂ ಬಾಂಬೆ ಹೈಕೋರ್ಟ್ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್ಗೆ ಸದ್ಯ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ ಮುಂಬೈ ಪೊಲೀಸರತ್ತಲೇ ಕೆಂಗಣ್ಣು ಬೀರಿದೆ!
ಇನ್ನು, ತಮ್ಮ ನೆಚ್ಚಿನ ನಿರೂಪಕ ಜೈಲಿನಿಂದ ಬಿಡುಗಡೆ ಹೊಂದುತ್ತಿದ್ದಂತೆ ಆರ್ನಬ್ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತು. ಕಳೆದ ರಾತ್ರಿ 8.30ಕ್ಕೆ ತಳೋಜಾ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಆರ್ನಬ್ ಗೋಸ್ವಾಮಿಯನ್ನು ಅವರ ಅಭಿಮಾನಿಗಳು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಿ, ರಿಪಬ್ಲಿಕ್ ಟಿವಿ ಸ್ಟುಡಿಯೋಕ್ಕೆ ಕರೆದೊಯ್ದರು.
ಎಲ್ಲೆಡೆ ಮನೆ ಮಾಡಿದ್ದ ಸಂಭ್ರಮಾಚರಣೆ ಹಾಗೂ ವಿಜಯೋತ್ಸವ ಕಂಡು, ನೆರೆದಿದ್ದ ಜನರಿಗೆ T20 ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಅಂದಿನ ಭಾರತ ತಂಡದ ನಾಯಕ ಧೋನಿಯವರನ್ನು ತೆರೆದ ಬೆಸ್ಟ್ ಬಸ್ನಲ್ಲಿ ಮೆರವಣಿಗೆ ಮಾಡಿಸಿದ್ದು ನೆನಪಿಗೆ ಬಂದಿರುವ ಸಾಧ್ಯತೆಯೂ ಇತ್ತು. ಯಾವ ಮುಂಬೈ ಪೊಲೀಸರು ಕಳೆದ ವಾರ ಆರ್ನಬ್ರನ್ನು ಬಂಧಿಸಿದ್ದರೋ.. ಅದೇ ಮುಂಬೈ ಪೊಲೀಸರು ನಿನ್ನೆ ರಾತ್ರಿ ಅವರಿಗೆ ಬಂದೋಬಸ್ತ್ ಒದಗಿಸಿದರು.
ಜೈಲಿನಿಂದ ಹೊರಬಂದು ವಿಜಯ ಮೆರವಣಿಗೆಯಲ್ಲಿ ಹೊರಟ ಆರ್ನಬ್ ನೇರವಾಗಿ ತಲುಪಿದ್ದು ತಮ್ಮ ನ್ಯೂಸ್ ಚ್ಯಾನಲ್ ಸ್ಟುಡಿಯೋಗೆ. ಈ ವೇಳೆ, ಸಿಬ್ಬಂದಿ ಜೊತೆ ಮಾತನಾಡಿದ ಆರ್ನಬ್ ಗೋಸ್ವಾಮಿ ಮುಂಬರುವ ದಿನಗಳಲ್ಲಿ ಭಾರತದ ಪ್ರತಿ ರಾಜ್ಯದಲ್ಲೂ ಒಂದೊಂದು ಪ್ರಾದೇಶಿಕ ಸುದ್ದಿವಾಹಿನಿಯನ್ನು ತೆರೆಯುವುದಾಗಿ ಘೋಷಣೆ ಮಾಡಿದರು.