ದೇಶ ಸೇವೆ ಮಾಡುವ ಮನಸಿದ್ದರೆ ಬಿಜೆಪಿಗೆ ಬನ್ನಿ: ಮೋದಿ | Join BJP if you are willing to serve the nation: PM Modi

ಬಿಹಾರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಗೆಲುವು ದೊರಕಿಸಿಕೊಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮಹಾನ್ ದೇಶದ ಮಹಾನ್​ ಜನತೆಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದು ಮಾತು ಆರಂಭಿಸಿದ ಮೋದಿಯವರು, ಚುನಾವಣೆಯಲ್ಲಿ ಬಿಜೆಪಿಗೆ ಭಾರಿಮಟ್ಟದ ಯಶಸ್ಸು ದೊರಕಲು ಶ್ರಮಿಸಿದ್ದಕ್ಕಾಗಿ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ‘‘ಈ ಚುನಾವಣಾ ಉತ್ಸವದಲ್ಲಿ ನೀವೆಲ್ಲ ಬಹಳ ಉತ್ಸಾಹದಿಂದ ಭಾಗಿಯಾಗಿದ್ದೀರಿ, ನಿಮ್ಮ ದಣಿವರಿಯದ ಶ್ರಮ ಹಾಗೂ ತೋರಿದ […]

ದೇಶ ಸೇವೆ ಮಾಡುವ ಮನಸಿದ್ದರೆ ಬಿಜೆಪಿಗೆ ಬನ್ನಿ: ಮೋದಿ | Join BJP if you are willing to serve the nation: PM Modi
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 11, 2020 | 9:29 PM

ಬಿಹಾರದಲ್ಲಿ ಎನ್​ಡಿಎ ಮೈತ್ರಿಕೂಟಕ್ಕೆ ಗೆಲುವು ದೊರಕಿಸಿಕೊಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮಹಾನ್ ದೇಶದ ಮಹಾನ್​ ಜನತೆಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದು ಮಾತು ಆರಂಭಿಸಿದ ಮೋದಿಯವರು, ಚುನಾವಣೆಯಲ್ಲಿ ಬಿಜೆಪಿಗೆ ಭಾರಿಮಟ್ಟದ ಯಶಸ್ಸು ದೊರಕಲು ಶ್ರಮಿಸಿದ್ದಕ್ಕಾಗಿ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

‘‘ಈ ಚುನಾವಣಾ ಉತ್ಸವದಲ್ಲಿ ನೀವೆಲ್ಲ ಬಹಳ ಉತ್ಸಾಹದಿಂದ ಭಾಗಿಯಾಗಿದ್ದೀರಿ, ನಿಮ್ಮ ದಣಿವರಿಯದ ಶ್ರಮ ಹಾಗೂ ತೋರಿದ ಉತ್ಸಾಹಕ್ಕೆ ನಾನು ಚಿರಋಣಿಯಾಗಿದ್ದೇನೆ. ನಿನ್ನೆ ಬೆಳಗ್ಗೆಯಿಂದ ರಾತ್ರಿಯವರೆಗೆ ಜನರ ಕಣ್ಣೆಲ್ಲ ಟಿವಿ ಪರದೆಗಳ ಮೇಲಿತ್ತು. ಚುನಾವಣೆ ಕೆಲವೇ ಕಡೆ ನಡೆದರೂ ಫಲಿತಾಂಶಗಳ ಬಗ್ಗೆ ಜನರಲ್ಲಿ ಇನ್ನಿಲ್ಲದ ಕುತೂಹಲವಿತ್ತು. ಬಿಜೆಪಿ ಪರ ದೊರೆತಿರುವ ಫಲಿತಾಂಶಗಳು ಅವರಿಗೆ ನಮ್ಮ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ,’’ ಎಂದು ಪ್ರಧಾನ ಮಂತ್ರಿ ಹೇಳಿದರು.

ಬಿಹಾರ ಮತ್ತು ಬೇರೆ ರಾಜ್ಯಗಳಲ್ಲಿ ನಡೆದ ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸಿಕೊಟ್ಟ ಚುನಾವಣಾ ಆಯೋಗಕ್ಕೆ ಮೋದಿ ಧನ್ಯವಾದಗಳನ್ನರ್ಪಿಸಿದರು.

‘‘ಚುನಾವಣೆ ನಡೆದ ಕಡೆಗಳಲೆಲ್ಲ ಶಾಂತಿಯುತವಾಗಿ ಮತದಾನ ನಡೆಯುವಂತೆ ನೋಡಿಕೊಂಡ ಚುನಾವಣಾ ಆಯೋಗಕ್ಕೆ ಧನ್ಯವಾದಗಳು. ಆಯೋಗದ ಜೊತೆ ಕೈ ಜೋಡಿಸಿದ ಭದ್ರತಾ ಸಿಬ್ಬಂದಿ, ಸ್ಥಳೀಯ ಆಡಳಿತಗಳಿಗೂ ಧನ್ಯವಾದಗಳು. ಮೊದಲೆಲ್ಲ ಚುನಾವಣೆ ನಡೆದ ಮಾರನೆ ದಿನ ಬೂತ್​ಕ್ಯಾಪ್ಚರಿಂಗ್​, ರಿಗ್ಗಿಂಗ್, ಗಲಾಟೆ, ಪಕ್ಷಗಳ ಕಾರ್ಯಕರ್ತರ ನಡುವೆ ಕಿತ್ತಾಟ ಮೊದಲಾದ ಸುದ್ದಿಗಳು ನಮಗೆ ಸಿಗುತ್ತಿದ್ದವು. ನಮಗೆಲ್ಲ ಅವೇ ದೊಡ್ಡ ಸುದ್ದಿಗಳೆನಿಸುತ್ತಿದ್ದವು, ಆದರೆ ಈಗ ಸುದ್ದಿಗಳ ಸ್ವರೂಪ ಬೇರೆಯಾಗಿದೆ. ಪ್ರತಿ ಕ್ಷೇತ್ರದಲ್ಲಿ ಎಷ್ಟು ಪರ್ಸೆಂಟ್ ಮತದಾನವಾಯಿತು, ಎಷ್ಟು ಪರ್ಸೆಂಟ್ ಮಹಿಳೆಯರು ಮತ ಚಲಾಯಿಸಿದರು ಎಂಬ ಸುದ್ದಿಗಳು ನಮಗೆ ಸಿಗುತ್ತಿವೆ,’’ ಎಂದು ಮೋದಿ ಹೇಳಿದರು.

ಈ ಫಲಿತಾಂಶ ಬಿಜೆಪಿ, ಎನ್​ಡಿಎಗೆ ಮತ್ತಷ್ಟು ಬಲ ತಂದಿದೆ, ಇದು ನಮ್ಮ ಪಕ್ಷದ ಅಧ್ಯಕ್ಷರಾಗಿರುವ ನಡ್ಡಾ ಅವರ ಪರಿಶ್ರಮದ ಫಲವಾಗಿದೆ. ನಡ್ಡಾಜೀ ನೀವು ಮುನ್ನಡೆಯಿರಿ, ನಾವೆಲ್ಲ ನಿಮ್ಮ ಜೊತೆಗಿದ್ದೀವಿ. ದಕ್ಷಿಣದ ಕರ್ನಾಟಕ, ತೆಲಂಗಾಣದಲ್ಲೂ ಬಿಜೆಪಿಗೆ ಗೆಲುವು ದೊರಕಿದೆ. ಹಿಂದೊಮ್ಮೆ ಕೇವಲ 2 ಸೀಟುಗಳಿಗೆ ಸೀಮಿತವಾಗಿದ್ದ ನಮ್ಮ ಪಕ್ಷ ಈಗ ದೇಶದ ಮೂಲೆಮೂಲೆಗೂ ಹಬ್ಬಿದೆ. ಜನರು ತಮ್ಮ ಹೃದಯಗಳಲ್ಲಿ ಬಿಜೆಪಿ ಸ್ಥಳ ನೀಡಿದ್ದಾರೆ. ಪ್ರತಿ ಬಾರಿಯ ಚುನಾವಣೆಯಲ್ಲಿ ಜನರು ತಮ್ಮ ಆಶಯವನ್ನು ಸ್ಪಷ್ಟಪಡಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ನಮ್ಮ ಬೆಂಬಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ನಿನ್ನೆಯ ಫಲಿತಾಂಶವೂ ಪರಿಶ್ರಮಕ್ಕೆ ಸಂದ ಫಲವಾಗಿದೆ. ದೇಶ ಮತ್ತು ರಾಜ್ಯಗಳ ಅಭಿವೃದ್ಧಿ ನಮ್ಮ ಅಜೆಂಡಾ ಆಗಿದೆ. ಇದರ ಬಗ್ಗೆ ಗೊತ್ತಿಲ್ಲದವರಿಗೆ ಮನೆ ದಾರಿ ತೋರಿಸಿದ್ದಾರೆ,’’ ಎಂದು ಪ್ರಧಾನ ಮಂತ್ರಿಗಳು ಹೇಳಿದರು.

‘‘ನಾವು ತೆಗೆದುಕೊಳ್ಳುವ ನಿರ್ಧಾರ ದೇಶದ ಹಿತ, ಜನರ ಹಿತರಕ್ಷಣೆಯನ್ನು ಸೂಚಿಸುತ್ತದೆ. ದೇಶದಲ್ಲಿ ಈಗ ಬಿಜೆಪಿ ಮಾತ್ರ ರಾಷ್ಟ್ರೀಯ ಪಕ್ಷವಾಗಿದೆ. ಈ ಪಕ್ಷ ದೀನರು, ದಲಿತರು, ಬಡವರು, ಎಲ್ಲ ವರ್ಗದವರ ಆಶಾಕಿರಣವಾಗಿದೆ. ನಮ್ಮ ಪಕ್ಷವು ರಾಷ್ಟ್ರೀಯ ಆಕಾಂಕ್ಷೆ ಜೊತೆ ಎಲ್ಲರನ್ನೂ ಕೊಂಡೊಯ್ಯುತ್ತಿದೆ ದೇಶದ ಯುವ ಜನತೆಗೂ ಪಕ್ಷದ ಮೇಲೆ ವಿಶ್ವಾಸವಿದೆ. ದೇಶದ ಜನರ ಕನಸು ಸಾಕಾರಗೊಳಿಸಲು ಹಗಲಿರುಳೂ ನಾವು ಶ್ರಮಪಡೋಣ. ಮಹಿಳಾ ಸಬಲೀಕರಣ, ಶಿಕ್ಷಣ, ರಕ್ಷಣಾ ವ್ಯವಸ್ಥೆ, ಮತ್ತು ರೈತರು ನಮ್ಮ ಆದ್ಯತೆಗಳಾಗಿರಲಿ,’’ ಎಂದು ಮೋದಿ ಹೇಳಿದರು.

ಜನರ ಬೆಂಬಲ ಬಿಜೆಪಿ ಯಾವತ್ತೂ ಕಡಿಮೆಯಾಗಿಲ್ಲವೆಂದು ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.

‘‘ಜನತಾ ಕರ್ಫ್ಯೂನಿಂದ ಹಿಡಿದು ಈವರೆಗೂ ಜನ ನಮಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಬಿಹಾರ ಚುನಾವಣೆ ಫಲಿತಾಂಶ ನಮಗೆ ಬಹಳ ಮಹತ್ವದ್ದು. ಬಿಹಾರದ ಗೌರವ, ಆಸ್ಮಿತೆಯ ಗೆಲುವು ಇದಾಗಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ನಮ್ಮ ಗೆಲುವಿನ ಮಂತ್ರ. ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಜನರಿಗೆ ನೇಡಿರುವ ಎಲ್ಲ ಭರವಸೆ ಈಡೇರಿಸುತ್ತೇವೆ,’’ ಎಂದ ಮೋದಿ ಪರೋಕ್ಷವಾಗಿ ನಿತೀಶ್​ರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವುದನ್ನು ಖಚಿತಪಡಿಸಿದರು.

‘‘ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಆದರ, ಗೌರವ, ಭದ್ರತೆ ದೊರಕಿದೆ. ಹೀಗಾಗಿ ಮಹಿಳೆಯರು ನಮ್ಮ ಪಕ್ಷಕ್ಕೆ ಸೈಲೆಂಟ್ ಮತದಾರರಾಗಿದ್ದಾರೆ. ಕೊರೊನಾದಿಂದ ಇಡೀ ವಿಶ್ವವೇ ಸ್ತಬ್ಧಗೊಂಡಿತ್ತು. ಆದರೆ ಭಾರತದಲ್ಲಿ ನಾವು ನಿರಂತರವಾಗಿ ಯೋಜನೆಗಳನ್ನು ಘೋಷಣೆ ಮಾಡಿ ಅವುಗಳನ್ನು ಜಾರಿಗೆ ತಂದೆವು. ಹಿಂದೆ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ಕುಟುಂಬದ ಪಕ್ಷವಿತ್ತು. ಈಗ ಅಂಥ ಸ್ಥಿತಿಯಿಲ್ಲ. ರಾಷ್ಟ್ರದ ಹಿತ ಬಯಸುವವರು ಬಿಜೆಪಿ ಜೊತೆ ಬನ್ನಿ,’’ ಎಂದು ಬಿಜೆಪಿ ಮೂಲಕ ದೇಶ ಸೇವೆ ಮಾಡಲು ಮೋದಿ ಕರೆ ನೀಡಿದರು.

‘‘ಕೆಲ ಪಕ್ಷದವರು ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲು ಹೊಂಚುಹಾಕುತ್ತಿದ್ದಾರೆ. ಅಂತಹವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹತ್ಯೆಗಳಿಗೆ ಅವಕಾಶವಿಲ್ಲ,’’ ಎಂದ ಮೋದಿ, ‘‘ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿರಿ, ನಿಮ್ಮ ನಿಮ್ಮ ಕುಟುಂಬಗಳ ಬಗ್ಗೆ ಎಚ್ಚರವಹಿಸಿ, ಮುಂದೆಯೂ ನಮ್ಮ ಮಂತ್ರ ವೋಕಲ್ ಫಾರ್​ ಲೋಕಲ್ ಆಗಿರುತ್ತದೆ,’’ ಅಂತ ಹೇಳಿ ಮಾತು ಮುಗಿಸಿದರು.

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು