ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ಮದ್ಯ ಸಿಗದೆ ಕುಡುಕರು ಕಂಗಾಲಾಗಿದ್ದಾರೆ. ಆದ್ರೆ, ತುಮಕೂರು-ಕುಣಿಗಲ್ ರಸ್ತೆಯಲ್ಲಿರುವ ಮರೂರು ಹ್ಯಾಂಡ್‌ಪೋಸ್ಟ್ ಬಳಿಯ ಬಾರ್ವೊಂದರಲ್ಲಿ ಪೊಲೀಸರ ಎದುರೇ ಮದ್ಯದ ಬಾಟಲಿ ಹೊತ್ತೊಯ್ದಿರುವ ಘಟನೆ ನಡೆದಿದೆ.
ಬಾರ್ನಲ್ಲಿ ಕಳ್ಳತನ ಆಗಿತ್ತು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಹಾಗಾಗಿ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿದ್ದರು. ಪೊಲೀಸರ ಎದುರೇ MLA ಬೋರ್ಡ್ ಹಾಕಿಕೊಂಡ ಫಾರ್ಚೂನರ್ ಕಾರು, ಕೆಲ ಪ್ರಭಾವಿಗಳು ಬೈಕ್ನಲ್ಲಿ ಮದ್ಯದ ಬಾಟಲಿಗಳನ್ನು ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ರವಾನೆ ಮಾಡಲಾಗಿದೆ.
ಬಾರ್ನಲ್ಲಿ ಕಳ್ಳತನವಾದ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಆದ್ರೆ ಇಲ್ಲಿ ಪೊಲೀಸರು ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಅದೂ ಅಲ್ದೆ ಕಣ್ಣ ಮುಂದೆಯೇ ನಡೆಯುತ್ತಿದ್ರೂ ಪೊಲೀಸರು ಗಪ್ ಚುಪ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.