ಮದ್ಯದಂಗಡಿಯಲ್ಲಿ ಸ್ಟಾಕ್ ಕಡಿಮೆಯಾದ್ರೆ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್!
ಕೋಲಾರ: ಲಾಕ್ಡೌನ್ ಸಮಯದಲ್ಲಿ ಸರ್ಕಾರ ಎಷ್ಟೇ ಬಿಗಿಯಾದ ಕ್ರಮಗಳನ್ನು ಕೈಗೊಂಡ್ರೂ ಅಕ್ರಮವಾಗಿ ಕೆಲವೊಂದು ಕಡೆ ಮದ್ಯ ಮಾರಾಟ ಮಾಡುತ್ತಿರುವುದು ವರದಿಯಾಗಿದೆ. ಹಾಗಾಗಿ ಮದ್ಯದಂಗಡಿಗಳಲ್ಲಿ ಸ್ಟಾಕ್ನಲ್ಲಿ ವ್ಯತ್ಯಾಸ ಕಂಡುಬಂದ್ರೆ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್.ನಾಗೇಶ್ ಆದೇಶಿಸಿದ್ದಾರೆ. ಜಿಲ್ಲೆ, ರಾಜ್ಯದ ಗಡಿಗಳಲ್ಲಿ ಜಿಲ್ಲಾಡಳಿತದಿಂದ ತೀವ್ರ ನಿಗಾವಹಿಸಲಾಗಿದೆ. ಮೇ 3ನಂತರ ಹಂತ ಹಂತವಾಗಿ ಆದ್ಯತೆಗಳನ್ನ ಆಧರಿಸಿ ರಿಲ್ಯಾಕ್ಸ್ ಮಾಡಲಾಗುತ್ತೆ. ಹಸಿರು ವಲಯದ ಜಿಲ್ಲೆಗಳಲ್ಲೂ ಲಾಕ್ಡೌನ್ ರಿಲ್ಯಾಕ್ಸ್ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಾಗುತ್ತೆ ಎಂದು ನಾಗೇಶ್ […]

ಕೋಲಾರ: ಲಾಕ್ಡೌನ್ ಸಮಯದಲ್ಲಿ ಸರ್ಕಾರ ಎಷ್ಟೇ ಬಿಗಿಯಾದ ಕ್ರಮಗಳನ್ನು ಕೈಗೊಂಡ್ರೂ ಅಕ್ರಮವಾಗಿ ಕೆಲವೊಂದು ಕಡೆ ಮದ್ಯ ಮಾರಾಟ ಮಾಡುತ್ತಿರುವುದು ವರದಿಯಾಗಿದೆ. ಹಾಗಾಗಿ ಮದ್ಯದಂಗಡಿಗಳಲ್ಲಿ ಸ್ಟಾಕ್ನಲ್ಲಿ ವ್ಯತ್ಯಾಸ ಕಂಡುಬಂದ್ರೆ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್.ನಾಗೇಶ್ ಆದೇಶಿಸಿದ್ದಾರೆ.
ಜಿಲ್ಲೆ, ರಾಜ್ಯದ ಗಡಿಗಳಲ್ಲಿ ಜಿಲ್ಲಾಡಳಿತದಿಂದ ತೀವ್ರ ನಿಗಾವಹಿಸಲಾಗಿದೆ. ಮೇ 3ನಂತರ ಹಂತ ಹಂತವಾಗಿ ಆದ್ಯತೆಗಳನ್ನ ಆಧರಿಸಿ ರಿಲ್ಯಾಕ್ಸ್ ಮಾಡಲಾಗುತ್ತೆ. ಹಸಿರು ವಲಯದ ಜಿಲ್ಲೆಗಳಲ್ಲೂ ಲಾಕ್ಡೌನ್ ರಿಲ್ಯಾಕ್ಸ್ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಾಗುತ್ತೆ ಎಂದು ನಾಗೇಶ್ ಭರವಸೆ ನೀಡಿದರು.
ಇದೇ ವೇಳೆ ಲಾಕ್ಡೌನ್ ಸಮಯದಲ್ಲಿ ಮದ್ಯ ಸಿಗದೆ ಕುಡುಕರ ಕಾಟ ಜಾಸ್ತಿಯಾಗಿದ್ದು, ಕುಡುಕರ ಸಂಘದ ಅಧ್ಯಕ್ಷರೇ ಮದ್ಯದಂಗಡಿಗಳ ತೆರೆಯುವ ಬಗ್ಗೆ ಮನವಿ ಮಾಡಿದ್ದಾರೆ. ಮೇ 3ರ ನಂತರ ಮದ್ಯದ ಅಂಗಡಿಗಳನ್ನ ಶುರು ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಭರವಸೆ ನೀಡುವ ನಿರೀಕ್ಷೆ ಇದೆ ಎಂದು ಅಬಕಾರಿ ಸಚಿವರು ತಿಳಿಸಿದರು.
https://www.facebook.com/Tv9Kannada/videos/1290918771270351/?t=1
Published On - 2:39 pm, Tue, 21 April 20




