ವದಂತಿ ನಂಬಬೇಡಿ, ರಾಜಾಜಿನಗರದ ಇಎಸ್ಐ ಆಸ್ಪತ್ರೆ ಮುಚ್ಚಿಲ್ಲ..
ಬೆಂಗಳೂರು: ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ರಾಜಾಜಿನಗರದ ESI ಆಸ್ಪತ್ರೆಯನ್ನು ಮುಚ್ಚಲಾಗಿದೆ ಎಂದು ಕಿಡಿಗೇಡಿಗಳು ವದಂತಿಗಳನ್ನು ಹಬ್ಬುತ್ತಿದ್ದಾರೆ. ಆದ್ರೆ ಇಎಸ್ಐ ಆಸ್ಪತ್ರೆಯನ್ನು ಮುಚ್ಚಿಲ್ಲ. ಎಂದಿನಂತೆ ಆಸ್ಪತ್ರೆ ಕಾರ್ಯನಿರ್ವಹಣೆ ಮಾಡುತ್ತಿದೆ. ಆಸ್ಪತ್ರೆಗೆ ರೋಗಿಗಳು ಬರಬಹುದು ಎಂದು ಆಸ್ಪತ್ರೆಯ ಸಿಬ್ಬಂದಿ ಮನವಿ ಮಾಡಿದ್ದಾರೆ. ಸುಮಾರು ಐದಾರು ತಿಂಗಳಿಂದ ನನ್ನ ಪತ್ನಿಗೆ ಉಸಿರಾಟದ ಸಮಸ್ಯೆ ಇದೆ. ಅಂದಿನಿಂದಲೂ ESI ಆಸ್ಪತ್ರೆಯಲ್ಲಿ ತೋರಿಸುತ್ತಿದ್ದೇನೆ. ಆದ್ರೆ ನಿನ್ನೆ ಆಸ್ಪತ್ರೆಯಲ್ಲಿ ಪತ್ನಿ ಮೃತಪಟ್ಟಿದ್ದಾರೆ. ಹಳೆಯ ಅಡ್ರೆಸ್ ಪಾದರಾಯನಪುರ ಇರುವ ಕಾರಣ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ […]
ಬೆಂಗಳೂರು: ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ರಾಜಾಜಿನಗರದ ESI ಆಸ್ಪತ್ರೆಯನ್ನು ಮುಚ್ಚಲಾಗಿದೆ ಎಂದು ಕಿಡಿಗೇಡಿಗಳು ವದಂತಿಗಳನ್ನು ಹಬ್ಬುತ್ತಿದ್ದಾರೆ. ಆದ್ರೆ ಇಎಸ್ಐ ಆಸ್ಪತ್ರೆಯನ್ನು ಮುಚ್ಚಿಲ್ಲ. ಎಂದಿನಂತೆ ಆಸ್ಪತ್ರೆ ಕಾರ್ಯನಿರ್ವಹಣೆ ಮಾಡುತ್ತಿದೆ. ಆಸ್ಪತ್ರೆಗೆ ರೋಗಿಗಳು ಬರಬಹುದು ಎಂದು ಆಸ್ಪತ್ರೆಯ ಸಿಬ್ಬಂದಿ ಮನವಿ ಮಾಡಿದ್ದಾರೆ.
ಸುಮಾರು ಐದಾರು ತಿಂಗಳಿಂದ ನನ್ನ ಪತ್ನಿಗೆ ಉಸಿರಾಟದ ಸಮಸ್ಯೆ ಇದೆ. ಅಂದಿನಿಂದಲೂ ESI ಆಸ್ಪತ್ರೆಯಲ್ಲಿ ತೋರಿಸುತ್ತಿದ್ದೇನೆ. ಆದ್ರೆ ನಿನ್ನೆ ಆಸ್ಪತ್ರೆಯಲ್ಲಿ ಪತ್ನಿ ಮೃತಪಟ್ಟಿದ್ದಾರೆ. ಹಳೆಯ ಅಡ್ರೆಸ್ ಪಾದರಾಯನಪುರ ಇರುವ ಕಾರಣ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜನ ಭಯಪಟ್ಟಿದ್ದಾರೆ. ಆದ್ರೆ ಕೊರೊನಾ ಸೋಂಕು ತಗುಲಿಲ್ಲ ಎಂದು ವರದಿ ಬಂದಿದ್ದು ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಸುಳ್ಳು ಸುದ್ದಿಗಳನ್ನು ಹಬ್ಬಬೇಡಿ ಎಂದು ಮಹಿಳೆಯ ಪತಿ ಮನವಿ ಮಾಡಿದ್ದಾರೆ.
https://www.facebook.com/Tv9Kannada/videos/1482006035306413/?t=3
Published On - 5:41 pm, Tue, 21 April 20