ಮೇ 3ರ ನಂತ್ರ ಲಾಕ್‌ಡೌನ್ ತೆರವಾಗುತ್ತಾ.. ಇಲ್ವಾ?
ಕಿಲ್ಲರ್ ಕೊರೊನಾ ದೇಶದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಎಲ್ಲರನ್ನೂ ಮರಣಮೃದಂಗ ಬಾರಿಸುತ್ತಲೇ ಇದೆ. ಅದೆಷ್ಟೋ ಜನರ ಮೈ ಹೊಕ್ಕು ನರಕ ತೋರಿಸ್ತಿದೆ. ಆದ್ರೆ ಇದ್ರಿಂದ ದೇಶದಲ್ಲಿ ಆಗಿರೋ ಲಾಕ್‌ಡಾನ್ ಮೇ 3ಕ್ಕೆ ಮುಗಿಯುತ್ತಾ.. ಮೇ 3ರ ನಂತ್ರ ರಿಲೀಫ್ ಸಿಗುತ್ತಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಸದ್ಯಕ್ಕೆ ಮೇ 3ರ ನಂತ್ರ ಲಾಕ್‌ಡೌನ್ ವಿಸ್ತರಿಸೋ ಚರ್ಚೆ ನಡೆದಿಲ್ಲ. ಆದ್ರೆ ಗ್ರೀನ್ ಜೋನ್‌ಗೆ ಮಾತ್ರವೇ ರಿಲೀಫ್ ಸಿಗೋ ಸಾಧ್ಯತೆ ಇದೆ. ಮೇ 3ರ ನಂತ್ರ ಲಾಕ್‌ಡೌನ್ ತೆರವಾಗುತ್ತಾ.ಇಲ್ವಾ? ಯೆಸ್.. ಸದ್ಯ […]
ಕಿಲ್ಲರ್ ಕೊರೊನಾ ದೇಶದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಎಲ್ಲರನ್ನೂ ಮರಣಮೃದಂಗ ಬಾರಿಸುತ್ತಲೇ ಇದೆ. ಅದೆಷ್ಟೋ ಜನರ ಮೈ ಹೊಕ್ಕು ನರಕ ತೋರಿಸ್ತಿದೆ. ಆದ್ರೆ ಇದ್ರಿಂದ ದೇಶದಲ್ಲಿ ಆಗಿರೋ ಲಾಕ್‌ಡಾನ್ ಮೇ 3ಕ್ಕೆ ಮುಗಿಯುತ್ತಾ.. ಮೇ 3ರ ನಂತ್ರ ರಿಲೀಫ್ ಸಿಗುತ್ತಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಸದ್ಯಕ್ಕೆ ಮೇ 3ರ ನಂತ್ರ ಲಾಕ್‌ಡೌನ್ ವಿಸ್ತರಿಸೋ ಚರ್ಚೆ ನಡೆದಿಲ್ಲ. ಆದ್ರೆ ಗ್ರೀನ್ ಜೋನ್‌ಗೆ ಮಾತ್ರವೇ ರಿಲೀಫ್ ಸಿಗೋ ಸಾಧ್ಯತೆ ಇದೆ.
ಮೇ 3ರ ನಂತ್ರ ಲಾಕ್‌ಡೌನ್ ತೆರವಾಗುತ್ತಾ.ಇಲ್ವಾ? ಯೆಸ್.. ಸದ್ಯ ಇಡೀ ದೇಶದ 130 ಕೋಟಿ ಜನರ ಪ್ರಶ್ನೆಯೂ ಇದೇ ಆಗಿದೆ. ಕೊರೊನಾ ಅಂಕೆಗೂ ಸಿಲುಕದಂತೆ ತನ್ನ ಅಟ್ಟಹಾಸವನ್ನ ಮೆರೀತಿದೆ. ಹೆಮ್ಮಾರಿಯನ್ನ ಕಂಟ್ರೋಲ್ ಮಾಡೋದಕ್ಕಾಗಿಯೇ ಮೇ.3ರವರೆಗೂ ಲಾಕ್‌ಡೌನ್ ಮುಂದುವರಿಸಲಾಗಿದೆ. ಆದ್ರೆ, ಮೇ.3ಕ್ಕೇ ಮುಗಿಯುತ್ತಾ. ಇಲ್ಲಾ ಮತ್ತೆ ಮುಂದುವರಿಯುತ್ತಾ ಅನ್ನೋ ಪ್ರಶ್ನೆ ಮಾತ್ರ ಜನರಲ್ಲಿ ಕಾಡ್ತಿದೆ. ಸದ್ಯದ ಮಾಹಿತಿ ಪ್ರಕಾರ, ದೇಶಾದ್ಯಂತ ಘೋಷಿಸಿರೋ 40 ದಿನಗಳ ಲಾಕ್‌ಡೌನ್ ಮೇ 3ಕ್ಕೆ ಮಗಿಯುತ್ತೆ ಎನ್ನಲಾಗ್ತಿದೆ. ಆದ್ರೆ ಮೇ.3ರ ಬಳಿಕ ಏನಾಗುತ್ತೆ ಅನ್ನೋದೇ ಸದ್ಯದ ಕುತೂಹಲ.
ಮೇ 3ರ ನಂತ್ರವೂ ಇರಲ್ಲ ರೈಲು, ವಿಮಾನ ಸಂಚಾರ! ಜಪಾನ್, ಇಟಲಿ ಮಾದರಿಯಲ್ಲೇ ಭಾರತದಲ್ಲೂ ಲಾಕ್‌ಡೌನ್ ಘೋಷಿಸಿದ್ದು, ಕೊರೊನಾ ಹರಡುವಿಕೆ ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದೆ. ಆದ್ರೆ ಹೊಸ ಪ್ರಕರಣಗಳು ಪತ್ತೆ ಆಗದೇ ಇದ್ರೆ ಇಡೀ ದೇಶವೇ ನೆಮ್ಮದಿಯ ನಿಟ್ಟುಸಿರುಬಿಡಲಿದೆ. ಆದ್ರೆ ಈಗಲೂ ನಿತ್ಯ 1300 ರಿಂದ 1500 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗ್ತಿವೆ. ಇದು ಮತ್ತಷ್ಟು ಚಿಂತೆಗೀಡು ಮಾಡ್ತಿದೆ. ಹೀಗಾಗಿ ಮೇ 3ರ ನಂತ್ರವೂ ದೇಶದಲ್ಲಿ ರೈಲು ಸಂಚಾರ ಹಾಗೂ ವಿಮಾನಗಳ ಹಾರಾಟವನ್ನ ಪುನರ್ ಆರಂಭವಾಗೋ ಸಾಧ್ಯತೆಗಳಿಲ್ಲ. ಮೇ.3ರ ನಂತ್ರ ವಿಮಾನ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದ ಏರ್‌ಲೈನ್ಸ್‌ಗಳು ಈಗ ಸ್ಥಗಿತಗೊಳಿಸಿವೆ. ಇನ್ನೂ ಅಂತರ ರಾಜ್ಯ ಪ್ರಯಾಣಕ್ಕೂ ಅವಕಾಶ ಇರಲ್ಲ. ಜಿಲ್ಲೆಯೊಳಗೆ ಹಾಗೂ ನಗರದೊಳಗೆ ಸಂಚಾರಕ್ಕೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ.
ಇನ್ನು, ಮೇ.3ರ ನಂತ್ರ ದೇಶಾದ್ಯಂತ ಷರತ್ತು ವಿಧಿಸಿ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಬಹುದು. ಕೊರೊನಾ ಪಾಸಿಟಿವ್ ಕೇಸ್‌ಗಳ ಆಧಾರದ ಮೇಲೆ ರೆಡ್, ಆರೆಂಜ್, ಗ್ರೀನ್ ಜೋನ್ ಜಿಲ್ಲೆಗಳಿಂದು ವರ್ಗೀಕರಿಸಲಾಗಿದೆ. ದೇಶದ 736 ಜಿಲ್ಲೆಗಳ ಪೈಕಿ 408 ಜಿಲ್ಲೆಗಳಿಗೆ ಕೊರೊನಾ ವೈರಸ್ ಹಬ್ಬಿದೆ. ದೇಶದ 328 ಜಿಲ್ಲೆಗಳಲ್ಲಿ ಒಂದೇ ಒಂದು ಕೇಸ್ ಪತ್ತೆಯಾಗಿಲ್ಲ. 28 ದಿನಗಳ ಕಾಲ ಒಂದು ಕೇಸ್ ಪಾಸಿಟಿವ್ ಬರದ ಜಿಲ್ಲೆಗಳು ಗ್ರೀನ್ ಜೋನ್‌ನಲ್ಲಿವೆ. ಇಂಥಾ ಗ್ರೀನ್ ಜೋನ್ ಜಿಲ್ಲೆಗಳಿಗೆ ಲೌಕ್‌ಡೌನ್ ರಿಲೀಫ್ ಸಿಗಲಿದೆ.
ಯಾವ್ಯಾವ ಪ್ರದೇಶಗಳಿಗಿಲ್ಲ ರಿಲೀಫ್? ಈಗಾಗಲೇ ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿರುವ ಪ್ರದೇಶಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳು ಮುಂದುವರೆಯಲಿದೆ. ಆರೆಂಜ್ ಜೋನ್ ಜಿಲ್ಲೆಗಳಲ್ಲಿ ಹಂತಹಂತವಾಗಿ ಷರತ್ತು ವಿಧಿಸಿ ಆರ್ಥಿಕ ಚಟುವಟಿಕೆ ಪುನರ್ ಆರಂಭಕ್ಕೆ ಅವಕಾಶ ಕೊಡಬಹುದು. ರೆಡ್‌ಜೋನ್ ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮಗಳಿಂದ ಬೇಗನೇ ವಿನಾಯಿತಿ ಸಿಗಲ್ಲ. ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಇಂದೋರ್, ಜೈಪುರ ರೆಡ್‌ಜೋನ್‌ನಲ್ಲಿರುವ ಜಿಲ್ಲೆಗಳು. ಹೀಗಾಗಿ ಮೇ 3ರ ನಂತ್ರವೂ ಲಾಕ್‌ಡೌನ್ ಬಿಗಿ ನಿಯಮಗಳಿಂದ ವಿನಾಯಿತಿ ಸಿಗೋದು ಅನುಮಾನವಾಗಿದೆ.
ಮತ್ತೊಂದೆಡೆ ಜನ ಮನೆಯಿಂದ ಹೊರಗೆ ಬರ್ಬೇಕಾದ್ರೆ ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಲಿದೆ. ಇದು ಜೀವನದ ಹೊಸ ವಿಧಾನವಾಗಲಿದೆ. ಕಚೇರಿಗಳು ಕೂಡ ಮಾಸ್ಕ್ ಹಾಗೂ ಸಾಮಾಜಿಕ ಅಂತರ ನಿಯಮದೊಂದಿಗೆ ಕೆಲಸ ಮಾಡಬೇಕಾಗುತ್ತೆ.
ಮೇ 3ರ ನಂತ್ರವೂ ಮದುವೆ, ಧಾರ್ಮಿಕ ಸಮಾರಂಭಗಳಿಗೆ ನಿರ್ಬಂಧ! ಇನ್ನು, ಮೇ 3ರ ನಂತ್ರವೂ ಮದುವೆ, ಧಾರ್ಮಿಕ ಸಮಾರಂಭಗಳಿಗೆ ನಿರ್ಬಂಧ ಮುಂದುವರಿಯಲಿದೆ. ದೇಶದಲ್ಲಿ ಸದ್ಯಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಯಾವ ದಿಕ್ಕಿನಲ್ಲಿ ಸಾಗ್ತಿವೆ ಅನ್ನೋದು ಗೊತ್ತಾಗ್ತಿಲ್ಲ. ಮೇ.15ರ ನಂತ್ರ ಇದ್ರ ಬಗ್ಗೆ ಸರಿಯಾದ ವಿಶ್ಲೇಷಣೆ ನಡೆಸೋಕೆ ಸಾಧ್ಯ ಅನ್ನೋದು ಕೇಂದ್ರ ಸರ್ಕಾರದ ಅಧಿಕಾರಿಗಳ ಅಭಿಪ್ರಾಯ. ಇನ್ನು ತಜ್ಞರು ಮೇ ಮಧ್ಯಭಾಗದಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಮತ್ತಷ್ಟು ಹೆಚ್ಚಾಗಲಿದೆ ಅಂದಿರೋದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಣಯ ಸಾಧ್ಯತೆ: ದೇಶದಲ್ಲಿ ಕೊರೊನಾ ವೈರಸ್ ಸಮರ ಹೇಗೆ ನಡೆಯುತ್ತಿದೆ, ಲಾಕ್‌ಡೌನ್ ಪರಿಸ್ಥಿತಿ ಹೇಗಿದೆ ಅನ್ನೋದ್ರ ಬಗ್ಗೆ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ ವಿವಿಧ ಟಾಸ್ಕ್ ಪೋರ್ಸ್ ವರದಿ ಹಾಗೂ ರಾಜ್ಯ ಸರ್ಕಾರಗಳ ಫೀಡ್ ಬ್ಯಾಕ್ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಸದ್ಯಕ್ಕೆ ಮೇ 3ರ ನಂತ್ರವೂ ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. https://www.facebook.com/Tv9Kannada/videos/1080478938982077/
Published On - 7:05 am, Wed, 22 April 20