ಬೆಂಗಳೂರಿನಲ್ಲಿ ದಿಢೀರನೆ ವಾಲಿದ 5 ಅಂತಸ್ತಿನ PG ಕಟ್ಟಡ: ನಿವಾಸಿಗಳಲ್ಲಿ ಆತಂಕ!

|

Updated on: Feb 05, 2020 | 1:01 PM

ಬೆಂಗಳೂರು: ಹೆಬ್ಬಾಳದ ಕೆಂಪಾಪುರದಲ್ಲಿ ಐದು ಅಂತಸ್ತಿನ PG ಕಟ್ಟಡ ವಾಲಿದ್ದು, ಇದರಿಂದ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ. ಐದಂತಸ್ತಿನ ಕಟ್ಟಡ ವಾಲಿದ್ದು, ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಕಟ್ಟಡದಲ್ಲಿ ಪಿಜಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಕಟ್ಟದ ಹಿಂಭಾಗ ಮನೆ ಕಟ್ಟೋಕೆ ಹಳ್ಳ ತೆಗೆಯಲಾಗಿತ್ತು. ಬಾಬು ಎಂಬುವವರು ಮನೆ ಕಟ್ಟೋಕೆ ಸುಮಾರು 5ರಿಂದ 8 ಅಡಿ ಹಳ್ಳ ತೆಗೆದಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಟ್ಟಡ ವಾಲಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು, ಅಗ್ನಿಶಾಮಕ‌ದಳ […]

ಬೆಂಗಳೂರಿನಲ್ಲಿ ದಿಢೀರನೆ ವಾಲಿದ 5 ಅಂತಸ್ತಿನ PG ಕಟ್ಟಡ: ನಿವಾಸಿಗಳಲ್ಲಿ ಆತಂಕ!
Follow us on

ಬೆಂಗಳೂರು: ಹೆಬ್ಬಾಳದ ಕೆಂಪಾಪುರದಲ್ಲಿ ಐದು ಅಂತಸ್ತಿನ PG ಕಟ್ಟಡ ವಾಲಿದ್ದು, ಇದರಿಂದ ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ. ಐದಂತಸ್ತಿನ ಕಟ್ಟಡ ವಾಲಿದ್ದು, ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಕಟ್ಟಡದಲ್ಲಿ ಪಿಜಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಟ್ಟದ ಹಿಂಭಾಗ ಮನೆ ಕಟ್ಟೋಕೆ ಹಳ್ಳ ತೆಗೆಯಲಾಗಿತ್ತು. ಬಾಬು ಎಂಬುವವರು ಮನೆ ಕಟ್ಟೋಕೆ ಸುಮಾರು 5ರಿಂದ 8 ಅಡಿ ಹಳ್ಳ ತೆಗೆದಿದ್ದಾರೆ. ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಟ್ಟಡ ವಾಲಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು, ಅಗ್ನಿಶಾಮಕ‌ದಳ ಸಿಬ್ಬಂದಿ ಹಾಗೂ ಎಂಜಿನಿಯರ್​ಗಳು ದೌಡಾಯಿಸಿದ್ದಾರೆ.

ಇಲ್ಲಿ ಕಟ್ಟಡ ಕಟ್ಟೋಕೆ ಅನುಮತಿ ಕೊಟ್ಟಿರುವುದೇ ತಪ್ಪು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸದ್ಯ ವಾಲಿರುವ ಕಟ್ಟಡವನ್ನು ಡೆಮಾಲಿಷ್ ಮಾಡಲು ಅಧಿಕಾರಿಗಳು ಸಕಲ‌ ಸಿದ್ಧತೆ ನಡೆಸಿಕೊಂಡಿದ್ದಾರೆ.

Published On - 12:24 pm, Wed, 5 February 20