ದೇಸೂರ ಗ್ರಾಮದ ಮತಗಟ್ಟೆ ಚುನಾವಣಾ ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಪತ್ತೆ..

|

Updated on: Dec 22, 2020 | 9:56 AM

ಬೆಳಗಾವಿ ತಾಲೂಕಿನ ದೇಸೂರ ಗ್ರಾಮದ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾ ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ.

ದೇಸೂರ ಗ್ರಾಮದ ಮತಗಟ್ಟೆ ಚುನಾವಣಾ ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಪತ್ತೆ..
ಸಾಂಧರ್ಬಿಕ ಚಿತ್ರ
Follow us on

ಬೆಳಗಾವಿ: ಕರುನಾಡಲ್ಲಿ ಗ್ರಾಮ ಪಂಚಾಯಿತಿ ಮತದಾನದ ಭರಾಟೆ ಜೋರಾಗಿದೆ. ಈ ನಡುವೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಚುನಾವಣಾ ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ.

ಬೆಳಗಾವಿ ತಾಲೂಕಿನ ದೇಸೂರ ಗ್ರಾಮದ ಮತಗಟ್ಟೆಗೆ ಪಿಆರ್‌ಒ ಆಗಿ ನಿಯೋಜನೆಗೊಂಡಿದ್ದ ಅಧಿಕಾರಿ ಸುಲೇಮಾನ್ ಸನದಿ ಬಳಿ ನಿನ್ನೆ ರಾತ್ರಿ ಪಿಸ್ತೂಲ್ ಪತ್ತೆಯಾಗಿದೆ. ಇಂದು ಡಿ.22 ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಡಿ.21 ರಾತ್ರಿ ಸುಲೇಮಾನ್ ದೇಸೂರ ಮತಗಟ್ಟೆಗೆ ಕರ್ತವ್ಯಕ್ಕೆ ಲೈಸೆನ್ಸ್ ಪಿಸ್ತೂಲ್ ಜೊತೆ ಆಗಮಿಸಿದ್ದರು.

ಇದನ್ನು ಗಮನಿಸಿದ ಚುನಾವಣಾ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಧಿಕಾರಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ. ಕೊನೆಗೆ ಯಾವುದೇ ಅನಾಹುತ ಸಂಭವಿಸಬಾರದೆಂದು ಚುನಾವಣಾಧಿಕಾರಿಗೆ ಮಾಹಿತಿ ನೀಡಿ ಪಿಆರ್‌ಒ ಬದಲಾವಣೆ ಮಾಡಲಾಗಿದೆ.

ಗ್ರಾಂ.ಪ ಚುನಾವಣೆ ನಾಮಪತ್ರ ಹಿಂಪಡೆಯುವಂತೆ ಪಿಸ್ತೂಲ್ ಹಿಡಿದು ಬೆದರಿಕೆ ಒಡ್ಡಿದ ಪ್ರತಿಸ್ಪರ್ಧಿ?