
ಮೋದಿಯವರ ಮೊದಲ ಮತ್ತು 3ನೇ ಹಂತದ ಪ್ರಚಾರದಲ್ಲಿ ಬಿಹಾರದ ಮುಖ್ಯಮಂತ್ರಿ ನಿತಿಷ್ ಕುಮಾರ್ ಜೊತೆಗಿರಲಿದ್ದಾರೆ. ಅಕ್ಟೋಬರ್ 23 ರಂದು ದೆಹ್ರಿಯ ನಂತರ ಪ್ರಧಾನ ಮಂತ್ರಿಗಳು ಗಯಾ ಮತ್ತು ಭಾಗಲ್ಪುರ್ನಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.
ಮೋದಿಯವರ ಎಸಡನೇ ಸುತ್ತಿನ ಚುನಾವಣಾ ಪ್ರಚಾರ ವಿಜಯದಶಮಿ ನಂತರ ಅಕ್ಟೋಬರ್ 28ರಂದು ಶುರುವಾಗಲಿದೆ. ಅಂದು ಅವರು ದರ್ಭಂಗಾ, ಮುಜಫ್ಫರ್ಪುರ್, ಮತ್ತು ಪಾಟ್ನಾದಲ್ಲಿ ಱಲಿಗಳನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ನಂತರ ನವೆಂಬರ 1 ರಂದು ಛಾಪ್ರಾ, ಮೋತಿಹಾರಿ ಮತ್ತು ಸಮಷ್ಟಿಪುರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಹಾಗೆ ನೋಡಿದರೆ, ಅವರ ಪ್ರಚಾರ ಆಭಿಯಾನದಲ್ಲಿ ಸಮಷ್ಟಿಪುರ ಕ್ಷೇತ್ರದ ಹೆಸರಿರಲಿಲ್ಲ. ಆದರೆ ಈ ಕ್ಷೇತ್ರ ಲೋಕ ಜನಶಕ್ತಿ ಪಕ್ಷದ ಭದ್ರಕೋಟೆಯಾಗಿರುವುದರಿಂದ ಜೆಡಿ(ಯು) ನಾಯಕರು ಅಲ್ಲಿ ಚುನಾವಣಾ ಱಲಿಯನ್ನು ಉದ್ದೇಶಿಸಿ ಮಾತಾಡುವಂತೆ ಕೋರಿದ್ದಾರೆ.
ಪ್ರಧಾನ ಮಂತ್ರಿಗಳು ಕೊನೆಯ ಹಂತದ ಪ್ರಚಾರವನ್ನು ಪಶ್ಚಿಮ ಚಂಪಾರಣ, ಸಹರ್ಸಾ ಮತ್ತು ಫೋರ್ಬ್ಸ್ಗಂಜ್ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ನಡೆಸಲಿದ್ದಾರೆ.