ಇಂದು ಕಲ್ಪತರು ನಾಡಿನಲ್ಲಿ ತ್ರಿವಿಧ ದಾಸೋಹಿ ಗದ್ದುಗೆ ದರ್ಶನ ಪಡೆಯಲಿರೋ ಮೋದಿ

|

Updated on: Jan 02, 2020 | 6:51 AM

ಬೆಂಗಳೂರು: ಪ್ರಧಾನಿ ಮೋದಿ.. ಕಾಲಿಟ್ಟ ಕಡೆಯೆಲ್ಲಾ ಒಂದ್ ಹವಾ ಇರುತ್ತೆ. ಮೇನಿಯಾ ಇರುತ್ತೆ. ಮೋದಿ ಆಡೋ ಮಾತುಗಳನ್ನು ಕೇಳೋಕೆ ಅದೆಷ್ಟೋ ಜನ ಕಾತರದಿಂದ ಕಾಯ್ತಾ ಇರ್ತಾರೆ.. ಆ ರೀತಿ ಮಾತಲ್ಲೇ ಮೋಡಿ ಮಾಡೋ ಮೋದಿ ರಾಜ್ಯದಲ್ಲಿ ಎರಡು ದಿನದ ಪ್ರವಾಸ ಕೈಗೊಂಡಿದ್ದು, ಇಂದು ತುಮಕೂರಿಗೆ ಬರ್ತಿದ್ದಾರೆ. ಕಲ್ಪತರು ನಾಡಿಗಿಂದು ಪ್ರಧಾನಿ ಮೋದಿ: ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ದೆಹಲಿಯಿಂದ ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಹೀಗಾಗಿ, ಸಿಲಿಕಾನ್ ಸಿಟಿ ಮೋದಿ ಆಗಮನಕ್ಕೆ ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆಗಳು […]

ಇಂದು ಕಲ್ಪತರು ನಾಡಿನಲ್ಲಿ ತ್ರಿವಿಧ ದಾಸೋಹಿ ಗದ್ದುಗೆ ದರ್ಶನ ಪಡೆಯಲಿರೋ ಮೋದಿ
Follow us on

ಬೆಂಗಳೂರು: ಪ್ರಧಾನಿ ಮೋದಿ.. ಕಾಲಿಟ್ಟ ಕಡೆಯೆಲ್ಲಾ ಒಂದ್ ಹವಾ ಇರುತ್ತೆ. ಮೇನಿಯಾ ಇರುತ್ತೆ. ಮೋದಿ ಆಡೋ ಮಾತುಗಳನ್ನು ಕೇಳೋಕೆ ಅದೆಷ್ಟೋ ಜನ ಕಾತರದಿಂದ ಕಾಯ್ತಾ ಇರ್ತಾರೆ.. ಆ ರೀತಿ ಮಾತಲ್ಲೇ ಮೋಡಿ ಮಾಡೋ ಮೋದಿ ರಾಜ್ಯದಲ್ಲಿ ಎರಡು ದಿನದ ಪ್ರವಾಸ ಕೈಗೊಂಡಿದ್ದು, ಇಂದು ತುಮಕೂರಿಗೆ ಬರ್ತಿದ್ದಾರೆ.

ಕಲ್ಪತರು ನಾಡಿಗಿಂದು ಪ್ರಧಾನಿ ಮೋದಿ:
ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ದೆಹಲಿಯಿಂದ ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಹೀಗಾಗಿ, ಸಿಲಿಕಾನ್ ಸಿಟಿ ಮೋದಿ ಆಗಮನಕ್ಕೆ ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಖಾಕಿಯೂ ಸನ್ನದ್ಧವಾಗಿದೆ. ಮಾನವ ರಹಿತ ಏರಿಯಲ್ ಸಿಸ್ಟಮ್ಸ್​ಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಡ್ರೋನ್, ಬಲೂನ್ಸ್, ಏರ್ ಕ್ರಾಫ್ಟ್ ಸಿಸ್ಟಮ್ಸ್​ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಆದೇಶ ಹೊರಡಿಸಿದ್ದಾರೆ.

ಹಾಗಾದ್ರೆ, ಪ್ರಧಾನಿ ಮೋದಿಯ 2 ದಿನಗಳ ಪ್ರವಾಸದಲ್ಲಿ ಕಾರ್ಯಕ್ರಮದ ಪಟ್ಟಿ ಹೀಗಿದೆ:
ಮಧ್ಯಾಹ್ನ 1.20 ಕ್ಕೆ ಯಲಹಂಕ ಏರ್​ಫೋರ್ಸ್ ಸ್ಟೇಷನ್​ಗೆ ಆಗಮನ
ಮಧ್ಯಾಹ್ನ 1.25ಕ್ಕೆ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಪ್ರಯಾಣ
ಮಧ್ಯಾಹ್ನ 2 ಗಂಟೆಗೆ ತುಮಕೂರು ವಿವಿ ಹೆಲಿಪ್ಯಾಡ್​ನಲ್ಲಿ ಲ್ಯಾಂಡಿಂಗ್
ಮಧ್ಯಾಹ್ನ 2.05ಕ್ಕೆ ಹೆಲಿಪ್ಯಾಡ್​ನಿಂದ ಸಿದ್ಧಗಂಗಾ ಮಠಕ್ಕೆ ಪ್ರಯಾಣ
ಮಧ್ಯಾಹ್ನ 2.15 ಕ್ಕೆ ಮಠಕ್ಕೆ ಭೇಟಿ, ‘ಅಕ್ಷರದಾಸೋಹಿ’ ಗದ್ದುಗೆ ದರ್ಶನ
ಮಧ್ಯಾಹ್ನ 3.30 ನಿಮಿಷಕ್ಕೆ ಸರ್ಕಾರಿ ಜೂ. ಕಾಲೇಜು ಮೈದಾನಕ್ಕೆ ಆಗಮನ
ಕಿಸಾನ್ ಸಮ್ಮಾನ್ ಯೋಜನೆ ಅಡಿ 6 ಕೋಟಿ ರೈತರಿಗೆ ನೇರ ವರ್ಗಾವಣೆ
ಅನ್ನದಾತರಿಗೆ ಕೃಷಿ ಕರ್ಮನ್ ಪ್ರಶಸ್ತಿ ವಿತರಣೆ
ಮೀನು ಸಾಕಾಣಿಕೆದಾರರ ಸೌಲಭ್ಯಗಳ ವಿತರಣೆ ಸಮಾರಂಭಕ್ಕೆ ಚಾಲನೆ
ಸಂಜೆ 5.10ಕ್ಕೆ ಹೆಲಿಪ್ಯಾಡ್​ಗೆ ಆಗಮಿಸಿ ಬೆಂಗಳೂರಿನತ್ತ ಪ್ರಯಾಣ
ಸಂಜೆ 5.50 ಕ್ಕೆ ಬೆಂಗಳೂರಿನ ಹೆಚ್ಎಎಲ್ ಏರ್​ಪೋರ್ಟ್​ಗೆ ಆಗಮನ
ಸಂಜೆ 5.50 ಕ್ಕೆ ಡಿಆರ್​ಡಿಒ ಯುವ ವಿಜ್ಞಾನಿಗಳ ಕಾರ್ಯಕ್ರಮದಲ್ಲಿ ಭಾಗಿ
ಸಂಜೆ 7.05ಕ್ಕೆ ನಿಮಿಷಕ್ಕೆ ಡಿಆರ್​ಡಿಒದಿಂದ ರಸ್ತೆ ಮೂಲಕ ನಿರ್ಗಮನ
ಸಂಜೆ 7.20 ಕ್ಕೆ ರಾಜಭವನಕ್ಕೆ ಪ್ರಧಾನಿ ಮೋದಿ ಆಗಮನಿಸಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಇದು ಇಂದಿನ ವೇಳಾಪಟ್ಟಿಯಾದ್ರೆ, ನಾಳೆ ಜಿಕೆವಿಕೆ ಮತ್ತು 107ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ದೆಹಲಿ ಫ್ಲೈಟ್ ಏರಲಿದ್ದಾರೆ. ಮೋದಿ ಪ್ರವಾಸದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಹದ್ದಿನ ಕಣ್ಣಿಟ್ಟಿದೆ.