ಫೇಸ್​ಬುಕ್​ನಲ್ಲಿ ಸ್ನೇಹ ಬೆಳೆಸಿ, ಕೆಲಸ ಮಾಡ್ತಿದ್ದ ಸ್ಥಳಕ್ಕೆ ಬಂದು ಯುವತಿಯ ಬಟ್ಟೆ ಹರಿದ.. ಟಾರ್ಚರ್ ಕೊಟ್ಟ ಖದೀಮ ಬಂಧನ

| Updated By: ಸಾಧು ಶ್ರೀನಾಥ್​

Updated on: Feb 02, 2021 | 10:10 AM

ಶ್ರವಣ್‌ಕುಮಾರ್ ಎಂಬ ವ್ಯಕ್ತಿ ತನಗೆ ಮಾರಣಾಂತಿಕ ಕಾಯಿಲೆ ಇದೆ. ಹೆಚ್ಚು ದಿನ ಬದುಕುವುದಿಲ್ಲ ಎಂದು ನಂಬಿಸಿ ಸಿಂಪತಿಯನ್ನು ಹುಟ್ಟಿಸಿ ಫೇಸ್ ಬುಕ್​ನಲ್ಲಿ ಯುವತಿಯ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯ ನಂಬರ್ ಪಡೆದು ಸಲಿಗೆ ಬೆಳಸಿ ಪರಿಚಯವಾದ ಸ್ವಲ್ಪ ದಿನದ ನಂತರ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಲು ಶುರು ಮಾಡಿದ್ದ.

ಫೇಸ್​ಬುಕ್​ನಲ್ಲಿ ಸ್ನೇಹ ಬೆಳೆಸಿ, ಕೆಲಸ ಮಾಡ್ತಿದ್ದ ಸ್ಥಳಕ್ಕೆ ಬಂದು ಯುವತಿಯ ಬಟ್ಟೆ ಹರಿದ.. ಟಾರ್ಚರ್ ಕೊಟ್ಟ ಖದೀಮ ಬಂಧನ
ಶ್ರವಣ್‌ಕುಮಾರ್
Follow us on

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಯುವತಿಯ ಪರಿಚಯ ಮಾಡಿಕೊಂಡು ಆಕೆಗೆ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದ್ದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಶ್ರವಣ್‌ಕುಮಾರ್ ಬಂಧಿತ ವ್ಯಕ್ತಿ.

ಘಟನೆ ಹಿನ್ನೆಲೆ
ಶ್ರವಣ್‌ಕುಮಾರ್ ಎಂಬ ವ್ಯಕ್ತಿ ತನಗೆ ಮಾರಣಾಂತಿಕ ಕಾಯಿಲೆ ಇದೆ. ಹೆಚ್ಚು ದಿನ ಬದುಕುವುದಿಲ್ಲ ಎಂದು ನಂಬಿಸಿ ಸಿಂಪತಿಯನ್ನು ಹುಟ್ಟಿಸಿ ಫೇಸ್ ಬುಕ್​ನಲ್ಲಿ ಯುವತಿಯ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಕೆಯ ನಂಬರ್ ಪಡೆದು ಸಲಿಗೆ ಬೆಳಸಿ ಪರಿಚಯವಾದ ಸ್ವಲ್ಪ ದಿನದ ನಂತರ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಲು ಶುರು ಮಾಡಿದ್ದ. ತನ್ನ ಜೊತೆ ಒಂದು ರಾತ್ರಿ ಕಳೆಯುವಂತೆ ಟಾರ್ಚರ್ ಮಾಡಿದ್ದ. ನೊಂದ ಯುವತಿ ಶ್ರವಣ್​ಗೆ ಬುದ್ಧಿ ಹೇಳಿದರೂ ಕೇಳದೆ ಕಿರುಕುಳ ನೀಡಿದ್ದಾನೆ. ಕೊನೆಗೆ ಬೇಸತ್ತ ಯುವತಿ ಆತನ ನಂಬರ್ ಬ್ಲಾಕ್ ಮಾಡಿದ್ಳು.

ಆದ್ರೂ ಟಾರ್ಚರ್ ನಿಂತಿಲ್ಲ. ಬ್ಲಾಕ್‌ ಲಿಸ್ಟ್‌ನಿಂದ ತನ್ನ ನಂಬರ್ ರಿಮೂವ್ ಮಾಡುವಂತೆ ಮತ್ತೆ ಕಿರುಕುಳ ನೀಡಿದ್ದಾನೆ. ಯುವತಿ ಕೆಲಸ ಮಾಡ್ತಿದ್ದ ಸ್ಥಳಕ್ಕೆ ತೆರಳಿ ಆಕೆಯ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಶ್ರವಣ್‌ ಕುಮಾರ್ ವಿರುದ್ಧ ಯುವತಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ‌ ದೂರು ನೀಡಿದ್ದಾಳೆ. ದೂರು ಆಧರಿಸಿ ಪೊಲೀಸರು ಶ್ರವಣ್​ನನ್ನು ಬಂಧಿಸಿದ್ದಾರೆ.

ಫೇಸ್​ಬುಕ್​ ಪರಿಚಯ: 35 ವರ್ಷದ ಪುರುಷನನ್ನು ಮದುವೆಯಾದ 81 ವರ್ಷ ವಯಸ್ಸಿನ ಅಜ್ಜಿ!

Published On - 8:14 am, Tue, 2 February 21