ಬೆಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಗೆ ವಾಹನವೊಂದು ಗುದ್ದಿ ಗಾಯಗಳಾಗಿರುವ ಘಟನೆ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನಡೆದಿದೆ. ಹೈಕೋರ್ಟ್ ಎದುರು ಇರುವ ವಿಧಾನಸೌಧದ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ.
ವಿಧಾನಸೌಧವನ್ನ ಪ್ರವೇಶಿಸುತ್ತಿದ್ದ ಕೃಷಿ ಇಲಾಖೆಗೆ ಸೇರಿದ್ದ ಟಾಟಾ ಸುಮೋ ವಾಹನದ ಸ್ಟೀರಿಂಗ್ ಲಾಕ್ ಆಗಿ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿಯ ಕಡೆಗೆ ನುಗ್ಗಿ ಅವರನ್ನು ಗುದ್ದಿದೆ ಎಂದು ತಿಳಿದುಬಂದಿದೆ. ಪೊಲೀಸರ ಮೇಲೆ ನುಗ್ಗಿದ ಟಾಟಾ ಸುಮೋ ಅವರನ್ನು ಗುದ್ದಿದ ಬಳಿಕ ಗೇಟ್ ಪಕ್ಕದ ಕಲ್ಲಿನ ಕಾಂಪೌಂಡ್ಗೆ ಗುದ್ದಿ ಅಲ್ಲಿ ನಿಂತಿತು.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ, ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ASI ರಾಮು ಅವರ ಕಾಲು ಮುರಿದಿದೆ ಎಂದು ತಿಳಿದುಬಂದಿದೆ. ಮತ್ತೋರ್ವ ಮಹಿಳಾ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯಕ್ಕೆ ಗಾಯಾಳುಗಳನ್ನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ.
Published On - 12:32 pm, Thu, 2 July 20