AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

800 ಕೋಟಿ ಅವ್ಯವಹಾರ: ಖ್ಯಾತ ಉದ್ಯಮಿ ವಿರುದ್ಧ FIR ದಾಖಲಿಸಿದ CBI

ಮುಂಬೈ: ವಾಣಿಜ್ಯ ನಗರಿಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದ ಆರೋಪದಡಿ ಪ್ರತಿಷ್ಠಿತ GVK ಸಂಸ್ಥೆಯ ಮಾಲೀಕ ಡಾ. GVK ರೆಡ್ಡಿ ವಿರುದ್ಧ FIR ದಾಖಲಾಗಿದೆ. ಮುಂಬೈ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯಲ್ಲಿ ಸರಿಸುಮಾರು 800 ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಇದರ ಬೆನ್ನಲ್ಲೇ, ಸಿಬಿಐ ತನಿಖಾ ಸಂಸ್ಥೆಯ ತಂಡವೊಂದು ನಿನ್ನೆ ಮುಂಬೈ ವಿಮಾನ ನಿಲ್ದಾಣ ಹಾಗೂ ಮುಂಬೈ ಮತ್ತು ಹೈದರಾಬಾದ್​ನಲ್ಲಿರುವ GVK ಸಂಸ್ಥೆಯ ಕಚೇರಿಗಳ ಮೇಲೆ ದಾಳಿ […]

800 ಕೋಟಿ ಅವ್ಯವಹಾರ: ಖ್ಯಾತ ಉದ್ಯಮಿ ವಿರುದ್ಧ FIR ದಾಖಲಿಸಿದ CBI
KUSHAL V
|

Updated on:Jul 02, 2020 | 1:17 PM

Share

ಮುಂಬೈ: ವಾಣಿಜ್ಯ ನಗರಿಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದ ಆರೋಪದಡಿ ಪ್ರತಿಷ್ಠಿತ GVK ಸಂಸ್ಥೆಯ ಮಾಲೀಕ ಡಾ. GVK ರೆಡ್ಡಿ ವಿರುದ್ಧ FIR ದಾಖಲಾಗಿದೆ.

ಮುಂಬೈ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯಲ್ಲಿ ಸರಿಸುಮಾರು 800 ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಇದರ ಬೆನ್ನಲ್ಲೇ, ಸಿಬಿಐ ತನಿಖಾ ಸಂಸ್ಥೆಯ ತಂಡವೊಂದು ನಿನ್ನೆ ಮುಂಬೈ ವಿಮಾನ ನಿಲ್ದಾಣ ಹಾಗೂ ಮುಂಬೈ ಮತ್ತು ಹೈದರಾಬಾದ್​ನಲ್ಲಿರುವ GVK ಸಂಸ್ಥೆಯ ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಜೊತೆಗೆ ಇಂದು ಸಂಸ್ಥೆಯ ಅಧ್ಯಕ್ಷ ಡಾ. GVK ರೆಡ್ಡಿ ಸೇರಿದಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕೆಲವು ಅಧಿಕಾರಿಗಳ ವಿರುದ್ಧ FIR ದಾಖಲಿಸಿದೆ.

CBI ದೂರಿನಲ್ಲಿ ಏನಿದೆ..? 2006ರಲ್ಲಿ Mumbai International Airport (MIAL) ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ GVK ಸಂಸ್ಥೆಯ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಈ ಮಧ್ಯೆ ಸಂಸ್ಥೆಯು ಮುಖ್ಯಸ್ಥರ ಕುಟುಂಬದ ಸದಸ್ಯರು ಹಾಗೂ ಕೆಲ ನೌಕರರೊಟ್ಟಿಗೆ ಶಾಮೀಲಾಗಿ ಒಪ್ಪಂದದ ವಿಮಾನ ನಿಲ್ದಾಣದಿಂದ ಬರುವ ಆದಾಯವನ್ನ ದುರ್ಬಳಕೆ ಮಾಡಿದ್ದಾರೆ ಎಂದು CBI ತನ್ನ ದೂರಿನಲ್ಲಿ ಉಲ್ಲೇಖಿಸಿದೆ.  ಇದರಿಂದ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಬಹಳಷ್ಟು ನಷ್ಟವಾಯಿತು ಎಂದೂ FIRನಲ್ಲಿ ಹೇಳಲಾಗಿದೆ.

Published On - 1:14 pm, Thu, 2 July 20