ಘಟಪ್ರಭಾ ಅಟ್ಟಹಾಸದಿಂದ ಸಂಕಷ್ಟಕ್ಕೆ ಒಳಗಾದ ಬಾಣಂತಿ, ಗರ್ಭಿಣಿ!

ಬೆಳಗಾವಿ: ಘಟಪ್ರಭಾ ಅಟ್ಟಹಾಸಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ ನೀರು ಮನೆಗಳಿಗೆ ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತಿದೆ. ಜನ ತಮ್ಮ ಮನೆಗಳನ್ನು ಬಿಟ್ಟು ಪರಿಹಾರ ಕೇಂದ್ರಗಳಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಳವಂಕಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಬಾಣಂತಿ ಮತ್ತು ಗರ್ಭಿಣಿ ಕಣ್ಣೀರು ಹಾಕಿದ್ದಾರೆ. ಮೇಳವಂಕಿ ಗ್ರಾಮಕ್ಕೆ ಘಟಪ್ರಭಾ ನದಿ‌ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಎರಡು ತಿಂಗಳ ಮಗುವನ್ನ ಕರೆದುಕೊಂಡು ಬಾಣಂತಿ ಶಾಲಾ ಕೊಠಡಿಯಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ […]

ಘಟಪ್ರಭಾ ಅಟ್ಟಹಾಸದಿಂದ ಸಂಕಷ್ಟಕ್ಕೆ ಒಳಗಾದ ಬಾಣಂತಿ, ಗರ್ಭಿಣಿ!

Updated on: Aug 20, 2020 | 8:46 AM

ಬೆಳಗಾವಿ: ಘಟಪ್ರಭಾ ಅಟ್ಟಹಾಸಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ ನೀರು ಮನೆಗಳಿಗೆ ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತಿದೆ. ಜನ ತಮ್ಮ ಮನೆಗಳನ್ನು ಬಿಟ್ಟು ಪರಿಹಾರ ಕೇಂದ್ರಗಳಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಎದುರಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಳವಂಕಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಬಾಣಂತಿ ಮತ್ತು ಗರ್ಭಿಣಿ ಕಣ್ಣೀರು ಹಾಕಿದ್ದಾರೆ. ಮೇಳವಂಕಿ ಗ್ರಾಮಕ್ಕೆ ಘಟಪ್ರಭಾ ನದಿ‌ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಎರಡು ತಿಂಗಳ ಮಗುವನ್ನ ಕರೆದುಕೊಂಡು ಬಾಣಂತಿ ಶಾಲಾ ಕೊಠಡಿಯಲ್ಲಿ ವಾಸಿಸುತ್ತಿದ್ದಾರೆ.

ಕೊರೊನಾ ಕಾರಣ ಹೇಳಿ ಸಂಬಂಧಿಕರು ಮನೆಗೆ ಸೇರಿಸಿಕೊಳ್ಳುತ್ತಿಲ್ಲವಂತೆ ಹೀಗಾಗಿ ಅನಿವಾರ್ಯವಾಗಿ ಪರಿಹಾರ ಕೇಂದ್ರದಲ್ಲೇ ಬಾಣಂತಿ ಮತ್ತು ಗರ್ಭಿಣಿ ಉಳಿದುಕೊಂಡಿದ್ದಾರೆ. ಬಿಸಿಯಾದ ಊಟ, ಬೆಚ್ಚಗಿನ ಸ್ಥಳದಲ್ಲಿರಬೇಕಾದ ನಾವು ಪ್ರವಾಹದಿಂದ ಬೀದಿಗೆ ಬಂದಿದ್ದೇವೆ. ಎರಡು ತಿಂಗಳ ಹಸುಗೂಸಿಗೆ ಮೂಲ ಸೌಕರ್ಯದ ತೊಂದರೆಯಾಗಿದೆ ಎಂದು ಬಾಣಂತಿ ಕಣ್ಣೀರಿಟ್ಟಿದ್ದಾರೆ.