ಪ್ರವಾಹಕ್ಕೆ ಮುಳುಗಿ ಹೋದ ಬದುಕು: ಜಿಲ್ಲಾಡಳಿತ, ಜನಪ್ರತಿನಿಧಿಗಳ ಮೇಲೆ ಮಹಿಳೆ ಆಕ್ರೋಶ
ಗದಗ: ಮಲಪ್ರಭಾ ಪ್ರತಾಪಕ್ಕೆ ಪತಿ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ. ಮನೆಯ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ತಾಯಿ, ಮಗಳು ಮಲಪ್ರಭಾ ಪ್ರತಾಪಕ್ಕೆ ಕಣ್ಣೀರು ಸುರಿಸುವ ಕರುಣಾಜನಕ ದೃಶ್ಯ ಕಂಡು ಬಂದಿದೆ. ಮುಳುಗಿದ ಮನೆ, ಮಗಳ ಜೊತೆ ಗೊಡೌನ್ ನಲ್ಲಿ ಮಹಿಳೆ ಮೂರು ದಿನ ಕಳೆದಿದ್ದಾರೆ. ಪತಿ ಇಲ್ಲ ದುಡಿದು ಹಾಕ್ತಾನೆ ಅಂದ್ರೆ, ಮಗ ಕೂಡ ಇಲ್ಲ ನಾವ್ ಏನ್ ಮಾಡ್ಬೆಕ್ರೀ ಈಗ ಅಂತ ತಮ್ಮ ಈ ಪರಿಸ್ಥಿತಿ ನೆನೆದು […]

ಗದಗ: ಮಲಪ್ರಭಾ ಪ್ರತಾಪಕ್ಕೆ ಪತಿ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಮನೆಯ ಆಧಾರಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ತಾಯಿ, ಮಗಳು ಮಲಪ್ರಭಾ ಪ್ರತಾಪಕ್ಕೆ ಕಣ್ಣೀರು ಸುರಿಸುವ ಕರುಣಾಜನಕ ದೃಶ್ಯ ಕಂಡು ಬಂದಿದೆ. ಮುಳುಗಿದ ಮನೆ, ಮಗಳ ಜೊತೆ ಗೊಡೌನ್ ನಲ್ಲಿ ಮಹಿಳೆ ಮೂರು ದಿನ ಕಳೆದಿದ್ದಾರೆ. ಪತಿ ಇಲ್ಲ ದುಡಿದು ಹಾಕ್ತಾನೆ ಅಂದ್ರೆ, ಮಗ ಕೂಡ ಇಲ್ಲ ನಾವ್ ಏನ್ ಮಾಡ್ಬೆಕ್ರೀ ಈಗ ಅಂತ ತಮ್ಮ ಈ ಪರಿಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ.
ತವರು ಮನೆಯವರು ಕರೆದ್ರೂ ಹೋಗುವ ಸ್ಥಿತಿಯಲ್ಲಿ ಇಲ್ಲ. ನಮಗೂ ತಾಯಿ ಇಲ್ಲ. ತಂದೆ ಇಲ್ಲ ಎಲ್ಲಿ ಹೋಗಬೇಕ್ರಿ. ಪದೇ ಪದೇ ಪ್ರವಾಹಕ್ಕೆ ತುತ್ತಾಗಿ ತವರು ಮನೆಗೆ ಹೋದ್ರೆ ಜನ್ರು ಏನಂತಾರೇ. ಇಲ್ಲೇ ಯಾರಿಗಾದ್ರೂ ಕೈ ಕಾಲು ಹಿಡಿದು ಜೀವನ ಮಾಡ್ತೀವಿ. ಪತಿ ಇದ್ರೆ ಚೆನ್ನಾಗಿ ನೋಡುಕೊಳ್ಳುತ್ತಿದ್ರು.
ಆದರೆ ಮೂರು ವರ್ಷದ ಹಿಂದೆ ತೀರಿಕೊಂಡಿದ್ದಾರೆ. ನಮಗೆ ಊಟ ಬೇಡ, ಪರಿಹಾರ ಬೇಡ. ನಮಗೆ ಬೇಕಿರೋದು ಶಾಶ್ವತ ಪರಿಹಾರ. ಪ್ರವಾಹದಲ್ಲಿ ಮನೆ ಮುಳುಗಿದೆ ಈಗ ಮಗಳ ಜೊತೆ ಎಲ್ಲೋ ಬದುಕುವಂತಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಏನ್ ಮಾಡ್ತಿದ್ದಾರೆ. ಬಡವರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Published On - 9:16 am, Thu, 20 August 20




