ಪತಿಯಿಂದ ನೊಂದ ಮಹಿಳೆಗೆ ನೆರವಾದ ‘ತುಪ್ಪದ ಬೆಡಗಿ’ ರಾಗಿಣಿ
ಪತಿಯಿಂದ ನೊಂದಿದ್ದ ಮಹಿಳೆಗೆ ಖ್ಯಾತ ಸ್ಯಾಂಡಲ್ ವುಡ್ ನಟಿ ಸ್ವಯಂ ಮುಂದೆ ಬಂದು ನೆರವಾದ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಆರ್ ಡಿ ವೆಲ್ಫೇರ್ನಿಂದ (RD welfare) ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಕಾರ್ಯಕ್ಕೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ತುಪ್ಪದ ಬೆಡಗಿ ರಾಗಿಣಿ ಅವರು ಗಂಡನಿಂದ ಕಿರುಕುಳ ಅನುಭವಿಸುತ್ತಿರುವ ಮಹಿಳೆಯ ಪರವಾಗಿ ನಿಂತು ಸಹಾಯ ಮಾಡಿದ್ದಾರೆ. ಆ ಗೃಹಣಿಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿ ಸ್ವತ: ತಾವೇ ದೂರು ದಾಖಲಿಸಿದ್ದಾರೆ. ರಾಗಿಣಿ […]
ಪತಿಯಿಂದ ನೊಂದಿದ್ದ ಮಹಿಳೆಗೆ ಖ್ಯಾತ ಸ್ಯಾಂಡಲ್ ವುಡ್ ನಟಿ ಸ್ವಯಂ ಮುಂದೆ ಬಂದು ನೆರವಾದ ಪ್ರಕರಣ ಬೆಳಕಿಗೆ ಬಂದಿದೆ. ತಮ್ಮ ಆರ್ ಡಿ ವೆಲ್ಫೇರ್ನಿಂದ (RD welfare) ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಕಾರ್ಯಕ್ಕೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ತುಪ್ಪದ ಬೆಡಗಿ ರಾಗಿಣಿ ಅವರು ಗಂಡನಿಂದ ಕಿರುಕುಳ ಅನುಭವಿಸುತ್ತಿರುವ ಮಹಿಳೆಯ ಪರವಾಗಿ ನಿಂತು ಸಹಾಯ ಮಾಡಿದ್ದಾರೆ. ಆ ಗೃಹಣಿಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿ ಸ್ವತ: ತಾವೇ ದೂರು ದಾಖಲಿಸಿದ್ದಾರೆ. ರಾಗಿಣಿ ಕಾರ್ಯಕ್ಕೆ ಮಹಿಳಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.