ಬ್ರ್ಯಾಂಡ್ ನ್ಯೂ ಕಾರಿನಲ್ಲಿ ಬಂದವ ಪೆಟ್ರೋಲ್ ಹಾಕಿಸಿ ಹಣ ಕೊಡದೆ ಎಸ್ಕೇಪ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡ ಕಾರು ಚಾಲಕನೊಬ್ಬ ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಪುಂಡಾಟ ಮೆರೆದಿದ್ದಾನೆ. ಬ್ರ್ಯಾಂಡ್ ನ್ಯೂ ಕಾರಿನಲ್ಲಿ ಬಂದವ ಪೆಟ್ರೋಲ್ ಹಾಕಿಸಿಕೊಂಡು ಕಾಸು ಕೊಡದೇ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿಯ ಮುನ್ನೇಕೊಳಾಲಿನ ಎನ್.ಎನ್ ಆ್ಯಂಡ್ ಸನ್ಸ್ ಪೆಟ್ರೋಲ್ ಬಂಕಿನಲ್ಲಿ ನಡೆದಿದೆ. ಕಾರ್ ಚಾಲಕ ಪರಾರಿ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಗಸ್ಟ್ 13ರ ಬೆಳಗ್ಗಿನ ಜಾವ 2:45ರ ಸುಮಾರಿಗೆ ನೊಂದಣಿ ಸಹ ಆಗದ ಕಾರಿನಲ್ಲಿ ಬಂದಿದ್ದ ಚಾಲಕ 4 ಸಾವಿರ ರೂಪಾಯಿಗೆ ಪೆಟ್ರೋಲ್ […]

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡ ಕಾರು ಚಾಲಕನೊಬ್ಬ ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಪುಂಡಾಟ ಮೆರೆದಿದ್ದಾನೆ. ಬ್ರ್ಯಾಂಡ್ ನ್ಯೂ ಕಾರಿನಲ್ಲಿ ಬಂದವ ಪೆಟ್ರೋಲ್ ಹಾಕಿಸಿಕೊಂಡು ಕಾಸು ಕೊಡದೇ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿಯ ಮುನ್ನೇಕೊಳಾಲಿನ ಎನ್.ಎನ್ ಆ್ಯಂಡ್ ಸನ್ಸ್ ಪೆಟ್ರೋಲ್ ಬಂಕಿನಲ್ಲಿ ನಡೆದಿದೆ. ಕಾರ್ ಚಾಲಕ ಪರಾರಿ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆಗಸ್ಟ್ 13ರ ಬೆಳಗ್ಗಿನ ಜಾವ 2:45ರ ಸುಮಾರಿಗೆ ನೊಂದಣಿ ಸಹ ಆಗದ ಕಾರಿನಲ್ಲಿ ಬಂದಿದ್ದ ಚಾಲಕ 4 ಸಾವಿರ ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಕ್ ಮಾಲಿಕ ಕಿರಣ್ ನಾಗರಾಜ್ ಮಾರತ್ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.