ಬೆಂಗಳೂರು: ನಾಳೆ ಬೆಳಿಗ್ಗೆ 10ರಿಂದ ಸಂಜೆ 5 ಘಂಟೆಯವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಎನ್ಆರ್ಎಸ್ ಉಪಕೇಂದ್ರದ ತ್ರೈಮಾಸಿಕ ನಿರ್ವಹಣೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ.
ಎಲ್ಲಿ ಕರೆಂಟ್ ಇರಲ್ಲ?
ರಾಜಾಜಿನಗರದ 1ರಿಂದ 6ನೇ ಬ್ಲಾಕ್, ಕೆ.ಎಸ್.ಎಸ್.ಐ.ಡಿ.ಸಿ ಮತ್ತು ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್, ಡಾ. ರಾಜ್ಕುಮಾರ್ ರಸ್ತೆ, ಇ.ಎಸ್.ಐ ಆಸ್ಪತ್ರೆ, ಮನುವನ, ಅಗ್ರಹಾರ ದಾಸಹಳ್ಳಿ, ಗೋವಿಂದರಾಜನಗರ, ಬಸವೇಶ್ವರನಗರ, ಮಹಾಗಣಪತಿಪುರ, ಕಂಠೀರವ ನಗರ, ಜಡ್ಜಸ್ ಕಾಲೋನಿ, ಕೆ ಎಚ್ ಬಿ ಕಾಲೋನಿ 2ನೇ ಹಂತ,4ನೇ ಹಂತ, 4ನೇ ಬ್ಲಾಕ್, 3ನೇಹಂತ, 3ನೇ ಬ್ಲಾಕ್, ಕೆ.ಎಚ್.ಬಿ ಕಾಲೋನಿ, ಪ್ರಕಾಶ ನಗರ, ಎಲ್ ಎನ್ ಪುರ, ಶ್ರೀರಾಂಪುರ, ರಾಮಚಂದ್ರಪುರ, ದೇವಯ್ಯ ಪಾರ್ಕ್, ಪಾದರಾಯನಪುರ, ಪೈಪ್ಲೈನ್, ಚೋಳೂರು ಪಾಳ್ಯ, ಶಾಮಣ್ಣ ಗಾರ್ಡನ್, ಶಂಕರಪ್ಪ ಗಾರ್ಡನ್, ಟೆಲಿಕಾಂ ಲೇಔಟ್, ಕೆ ಪಿ ಅಗ್ರಹಾರ, ಮಾಗಡಿ ರಸ್ತೆ, ಬ್ರಿಗೇಡ್ ಒರಾಯನ್ ಕಾಂಪ್ಲೆಕ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ .
ವಿದ್ಯುತ್ ವ್ಯತ್ಯಯಕ್ಕೆ ಸಂಬಂಧಿಸಿದ ಯಾವುದೇ ಸಹಾಯಕ್ಕೆ 1912ಕ್ಕೆ ಕರೆ ಮಾಡಬಹುದು ಎಂದು ಬೆಂ.ವಿ.ಕಂ. ಪಶ್ಚಿಮ ವಿಭಾಗದ ಅಧೀಕ್ಷಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ