
ಕಲಬುರಗಿ: ಕೊರೊನಾ ವೈರಸ್ ಹುಡುಕಿ ಹುಡುಕಿ ಗರ್ಭಿಣಿಯರ ದೇಹ ಸೇರುತ್ತಿದೆ. ಮನೆಯಲ್ಲೇ ಇದ್ದರೂ ಕಾಳಗಿ ತಾಲೂಕಿನ ಗರ್ಭಿಣಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜೂನ್ 8ರಂದು ವೈದ್ಯಕೀಯ ತಪಾಸಣೆಗೆ ತೆರಳಿದ್ದಾಗ ಗರ್ಭಿಣಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ನಿನ್ನೆ ಬಂದ ಕೊವಿಡ್ ಟೆಸ್ಟ್ ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಮನೆಯಲ್ಲೇ ಇದ್ದರೂ ಕೊರೊನಾ ತಗುಲಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಎಡೆ ಮಾಡಿದೆ. ಅದರಲ್ಲೂ ಕಲಬುರಗಿಯಲ್ಲೇ ಮೊದಲ ಕೊರೊನಾ ಪತ್ತೆಯಾಗಿದ್ದು, ಹಾಗೂ ಇಲ್ಲೇ ಸಾವು ನೋವುಗಳು ಕೂಡ ಜಾಸ್ತಿ. ಕಲಬುರಗಿ ಜನ ಇನ್ನಾದರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.
Published On - 9:02 am, Mon, 15 June 20